ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಸೋಂಕಿನ ವಿರುದ್ಧ ನೈಸರ್ಗಿಕವಾಗಿ ಹೋರಾಡಬಹುದು

ಆರೋಗ್ಯವೇ ಭಾಗ್ಯ! ಇದು ಖಂಡಿತ ಸತ್ಯ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ನೈಸರ್ಗಿಕ ಆಹಾರ ಸೇವಿಸುವುದು ಮುಖ್ಯ, ನಿಮ್ಮ ದೇಹದಲ್ಲಿ ನೈಸರ್ಗಿಕವಾಗಿ ಸೋಂಕುಗಳನ್ನು ತಡೆಗಟ್ಟಲು ರೋಗನಿರೋಧಕಗಳನ್ನು ಹೆಚ್ಚುಸುವಲ್ಲಿ ಕೆಲವು ಆಹಾರಗಳು ತುಂಬಾ ಸಹಾಯ ಮಾಡುತ್ತವೆ. ಉತ್ತಮ ಆಹಾರ ನಿಮ್ಮ ದೇಹವನ್ನು ಮತ್ತು ಮನಸ್ಸನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.

ನಿಮ್ಮ ದೇಹವನ್ನು ಹಲವು ಮಾರ್ಗಗಳಿಂದ ಪ್ರವೇಶಿಸುವ ಬ್ಯಾಕ್ಟೀರಿಯಾ, ವೈರಸ್ ಮುಂತಾದ ಸೂಕ್ಹ್ಮಜೀವಿಗಳಿಂದ ನಿರಂತರವಾಗಿ ನಿಮ್ಮನ್ನು ರಕ್ಷಿಸಲು ಅವುಗಳ ಜೊತೆ ಹೊರಡುವುದು ಕಷ್ಟದ ಕೆಲಸವಾಗಿದೆ. ಅದು ನೀವು ಸಾಮಾನ್ಯವಾಗಿ ಅನುಭವಿಸುವ ಶೀತ, ಕೆಮ್ಮು ಮುಂತಾದ ಕಾಯಿಲೆಯಾಗಿರಬಹುದು.

ಆದರೆ ನೀವು ಸರಿಯಾದ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಇಂತಹ ಸೂಕ್ಹ್ಮ ಜೀವಿಗಳಿಂದ ನಿಮ್ಮನ್ನು ನೀವು ನೈಸರ್ಗಕವಾಗಿ ರಕ್ಷಿಸಿಕೊಳ್ಳಬಹುದು. ಅಂತಹ ಕೆಲವು ಆಹಾರ ಪದಾರ್ಥಗಳನ್ನು ಇಲ್ಲಿ ನೀಡಲಾಗಿದೆ, ಇವುಗಳನ್ನು ನೀವು ದಿನನಿತ್ಯ ಸೇವಿಸಬಹುದು, ಇವುಗಳಿಂದ ಯಾವುದೇ ಅಡ್ಡಪರಿಣಮಗಳಿಲ್ಲ.

೧.ಹೊಟ್ಟೆ ಸಮಸ್ಯೆಗೆ ಶುಂಠಿ

ಹೊಟ್ಟೆ ಸಮಸ್ಯೆಯನ್ನು ಎದುರಿಸುವುದು ಅಹಿತಕರ ಅನುಭವ, ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ, ಅವುಗಳೆಂದರೆ, ಹೊಟ್ಟೆ ಕೆಡುವುದು, ಬೇಧಿ, ವಾಕರಿಕೆ, ತಲೆನೋವು, ಮೈ ಕೈ ನೋವು, ಹೊಟ್ಟೆ ಸೆಳೆತ, ಮಂದ ಜ್ವರ, ಆಯಾಸ ಮತ್ತು ವಾಂತಿ.

ಹೊಟ್ಟೆ ಸಮಸ್ಯೆಗೆ ಕಾರಣವಾಗುವ ಸೂಕ್ಷ್ಮ ಜೀವಿಗಳ ವಿರುದ್ಧ ಶುಂಠಿಯು ಪರಿಣಾಮಕಾರಿಯಾಗಿ ಹೋರಾಡುತ್ತದೆ.

೧.ದಿನಕ್ಕೆ ೨-೩ ಬಾರಿ ಶುಂಠಿ ಟಿ ಯನ್ನು ಕುಡಿಯಿರಿ. ಶುಂಠಿಯನ್ನು ಸಣ್ಣಗೆ ಕತ್ತರಿಸಿ ನೀರಿನಲ್ಲಿ ೫ರಿಂದ ೧೦ ನಿಮಿಷಗಳ ಕಾಲ ಕುದಿಸಿ, ಇದಕ್ಕೆ ಜೇನು ತುಪ್ಪ ಮತ್ತು ಸ್ವಲ್ಪ ನಿಂಬೆರಸವನ್ನು ಸೇರಿಸಿ.

೨.ನೀವು ಬೇಕಿದ್ದರೆ, ಶುಂಠಿಯನ್ನು ತೊಳೆದು ಸಣ್ಣ ತುಂಡುಗಳನ್ನಾಗಿ ಮಾಡಿ ಹಾಗೆಯೆ ಅಗಿಯಬಹುದು.

೨.ಸೋಂಕಿಗೆ ಬೆಳ್ಳುಳ್ಳಿ

ಸೋಂಕು ನಿಮ್ಮ ಬಾಯಿ, ಚರ್ಮ, ಮೂತ್ರನಾಳ ಮತ್ತು ಯೋನಿಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ತುರಿಕೆ ಮತ್ತು ಚರ್ಮ ಕೆಂಪಾಗುವಿಕೆ ಕೂಡ ಸಂಭವಿಸಬಹುದು.

೧.ಚರ್ಮದ ಸೋಂಕಿಗೆ, ಸೋಂಕು ಆಗಿ ಕಲೆ ಅಥವಾ ಗಾಯವಾಗಿರುವ ಜಾಗಕ್ಕೆ ಬೆಳ್ಳುಳ್ಳಿ ರಸವನ್ನು ಹಚ್ಚಿ ೧೦ ನಿಮಿಷದ ನಂತರ ತೊಳೆಯಿರಿ. ಇದನ್ನು ದಿನಕ್ಕೆ ೨-೩ ಬಾರಿ ಮಾಡಿ.

೨.ಬಾಯಿಯಲ್ಲಿ ಸೋಂಕು ಉಂಟಾಗಿದ್ದರೆ, ಬಾಯಿಯಲ್ಲಿ ಆಗಿರುವ ಜಾಗಕ್ಕೆ ಬೆಳ್ಳುಳ್ಳಿ ರಸವನ್ನು ಹಾಕಿ.

೩.ತಾಜಾ ಬೆಳ್ಳುಳ್ಳಿಯನ್ನು ನಿಮ್ಮ ಆಹಾರಕ್ರಮದ ಜೊತೆ ಪ್ರತಿದಿನ ಸೇವಿಸಿ. ನೀವು ಬೆಳ್ಳುಳ್ಳಿಯನ್ನು ನೇರವಾಗಿ ಹಾಗೆಯೆ ತಿನ್ನಬಹುದು.

೩.ಗಂಟಲಿನ ಸಮಸ್ಯೆಗೆ ನಿಂಬೆಹಣ್ಣು

ಗಂಟಲಿನಲ್ಲಿ ಸೋಂಕು ಆದರೆ, ಅದು ಸಾಮಾನ್ಯವಾಗಿ ಗಂಟಲಿನ ಊತ ಮತ್ತು ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಗಂಟಲಿನ ಸಮಸ್ಯೆಗೆ ಅದರಲ್ಲೂ ಗಂಟಲಿನ ಊತಕ್ಕೆ ನಿಂಬೆಹಣ್ಣು ತ್ವರಿತ ಪರಿಹಾರವನ್ನು ನೀಡುತ್ತದೆ.

೧.ಬೆಚ್ಚಗಿರುವ ನೀರಿಗೆ ಅರ್ಧ ನಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ, ದಿನದಲ್ಲಿ ಹಲವು ಬಾರಿ ಕುಡಿಯಿರಿ.

೨.ಸ್ವಲ್ಪ ಬಿಸಿ ನೀರಿಗೆ ನಿಂಬೆರಸವನ್ನು ಮತ್ತು ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸಬಹುದು.

೪.ಯೋನಿಯ ಸೋಂಕಿಗೆ ಮೊಸರು

ಮಹಿಳೆಯರಲ್ಲಿ ಸಾಮಾನ್ಯ ಸಮಸ್ಯೆಯಾದ ಲ್ಯುಕೊರಿಯಾ, ಯೋನಿಯ ವಿಸರ್ಜನೆಗೆ ಸಂಬಂಧಪಟ್ಟಿದೆ, ಇದು ನಿಮ್ಮ ಋತುಚಕ್ರದ ಸಮಯದಲ್ಲಿ ಆಗಬಹುದು. ಇದು ಹಾರ್ಮೋನುಗಳ ಬದಲಾವಣೆ ಅಥವಾ ಯೋನಿಯ ಸೋಂಕುಗಳಿಂದ ಆಗುತ್ತದೆ.

ಯೋನಿಯ ವಿಸರ್ಜನೆ ಹಳದಿ ಅಥವಾ ಹಸಿರುಯುಕ್ತ ಬಣ್ಣದಿಂದ ಕೂಡಿದ್ದು, ವಾಸನೆಯಿಂದ ಕೂಡಿದ್ದರೆ, ಯೋನಿಗೆ ಸೋಂಕು ಆಗಿದೆ ಎಂದು ತಿಳಿಯುತ್ತದೆ.

ದಿನಕ್ಕೆ ೨-೩ ಬಟ್ಟಲು ಮೊಸರನ್ನು ಸೇವಿಸಿ.

Leave a Reply

%d bloggers like this: