ಸಿಸೇರಿಯನ್ ನಂತರ ಇವುಗಳನ್ನು ನೀವು ಮಾಡಬಾರದು

ನೀವು ಈಗ ತಾನೇ ನಿಮ್ಮ ಮುದ್ದಾದ ಮಗುವಿಗೆ ಜನ್ಮ ನೀಡಿರುವಿರಿ, ನೀವು ಸಿಸೇರಿಯನ್ ಮೂಲಕ ಜನ್ಮ ನೀಡಿರುವಿರಾ, ಆಗಿದ್ದರೆ ನಿಮಗೆ ಹಲವಾರು ವಿಷಯಗಳನ್ನು ಇದರ ಬಗ್ಗೆ ಕೇಳಿರಬಹುದು ಇದು ನಿಮ್ಮಲ್ಲಿ ಗೊಂದಲವನ್ನು ಉಂಟುಮಾಡಿರಬಹುದು. ಗಾಬರಿ ಆಗದಿರಿ, ಇತ್ತೀಚಿಗೆ ಸಿಸೇರಿಯನ್ ಆಗುವುದು ತುಂಬಾ ಸಾಮಾನ್ಯವಾಗಿದೆ. ನಿಮ್ಮ ದೇಹ ಮೊದಲಿನ ಸ್ಥಿತಿಗೆ ಬರಲು ಅದಕ್ಕೆ ಸಾಕಾದಷ್ಟು ಕಾಳಜಿಯನ್ನು ನೀವು ನೀಡಬೇಕು.

ಸಿಸೇರಿಯನ್ ಬಳಿಕ ಇವುಗಳನ್ನು ನೀವು ಮಾಡಬಾರದು

೧.ಗ್ಯಾಸ್ ಅನ್ನು ಉತ್ಪತ್ತಿ ಮಾಡುವ ಆಹಾರಗಳನ್ನು ಸೇವಿಸಬೇಡಿ

ಸಿಸೇರಿಯನ್ ನಂತರ ಮೊದಲ ಕೆಲವು ದಿನಗಳು ನೀವು ಸೇವಿಸುವ ಆಹಾರ ಕ್ರಮದ ಮೇಲೆ ಹೆಚ್ಚು ನಿಗಾವಹಿಸಿ, ಮತ್ತು ಗ್ಯಾಸ್ ಸಮಸ್ಯೆ ಉಂಟು ಮಾಡುವ ಯಾವುದೇ ಆಹಾರವನ್ನು ಈ ಸಮಯದಲ್ಲಿ ಸೇವಿಸುವುದು ತುಂಬಾ ಅಪಾಯ, ಜೊತೆಗೆ ಹೆಚ್ಚು ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಬೇಡಿ. ಇದರ ಜೊತೆಗೆ ಯಾವುದಾದರೂ ಆಹಾರ ಸೇವನೆ ಇಂದ ನಿಮಗೆ ಮಲಬದ್ಧತೆ ಅಥವಾ ಅಲರ್ಜಿ ಆಗುವುದು ಎಂದರೆ ಅಂತಹ ಆಹಾರವನ್ನು ಸೇವಿಸಬೇಡಿ.

೨.ಉತ್ತಮ ಅರೋಗ್ಯ ಕಾಪಾಡಿಕೊಳ್ಳಿ

ಸಿಸೇರಿಯನ್ ನಂತರ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ಪ್ರಮುಖವಾಗಿ ನೀವು ಶೀತ, ನೆಗಡಿ, ಅಲರ್ಜಿ ಮತ್ತು ಸೀನುವುದು ಸಿಸೇರಿಯನ್ ನಂತರ ಹೆಚ್ಚು ನೋವನ್ನು ಉಂಟು ಮಾಡಬಹುದು. ಸೋಂಕಿಗೆ ಒಳಗಾಗಿರುವ ಅಥವಾ ಕಾಯಿಲೆ ಇರುವ ಜನರಿಂದ ಸ್ವಲ್ಪ ದೂರವಿರಿ, ಅಥವಾ ಅವರಿಂದ ನಿಮಗೆ ಸೋಂಕು ತಗುಲದಂತೆ ಎಚ್ಚರವಹಿಸಿ.

೩.ಹೆಚ್ಚು ಜೋರಾಗಿ ನಗಬೇಡಿ

ನಗುವುದು ಒಳ್ಳೆಯದೇ, ಆದರೆ ನೀವು ಸಿಸೇರಿಯನ್ ನಂತರ ಜೋರಾಗಿ ನಗುವುದು, ನಿಮ್ಮ ದೇಹದ ಎಲ್ಲಾ ಭಾಗಗಳು ಅಲುಗಾಡಿದಂತೆ ಆಗುವುದು, ಆ ಸಮಯದಲ್ಲಿ ನಿಮ್ಮ ಸಿಸೇರಿಯನ್ ಭಾಗಕ್ಕೆ ತೊಂದರೆ ಆಗಬಹುದು.

೪.ಕೆಮ್ಮುವುದು

ನೀವು ಮೆತ್ತಗೆ ಕೆಮ್ಮುವುದು ನಿಮ್ಮ ಸಿಸೇರಿಯನ್ ಒಲಿಗೆ ಮೇಲೆ ಪ್ರಭಾವ ಬೀರುತ್ತದೆ, ಅದಕ್ಕೆ ನೀವು ಸೋಂಕಿನಿಂದ ಅಥವಾ ಕಾಯಿಲೆಯಿಂದ ನಿಮ್ಮನ್ನು ಜೋಪಾನಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ನಿಮಗೆ ಕೆಮ್ಮು ತರಿಸವಂತಹ ಯಾವುದೇ ಪದಾರ್ಥಗಳನ್ನು ಸೇವಿಸಬೇಡಿ.

೫.ಯಾವುದೇ ಕಾರಣ ಇಲ್ಲದೆ ಸುಮ್ಮನೆ ಸಿಸೇರಿಯನ್ ಮಾಡಿರುವ ಜಾಗವನ್ನು ಮುಟ್ಟಬೇಡಿ

ನೀವು ಆ ಜಾಗವನ್ನು ನೋಡದೆ ಸುಮ್ಮನೆ ಇರುವುದೇ ಒಳ್ಳೆಯದು, ಏನು ತೊಂದರೆ ಆಗುತ್ತಿಲ್ಲ, ಆಗುವುದಿಲ್ಲ ಎಂದು ನರ್ಸ್ ಮತ್ತು ವೈದ್ಯರು ನೋಡಿಕೊಳ್ಳುತ್ತಾರೆ.

೬.ಖಿನ್ನತೆಗೆ ಒಳಗಾಗಬೇಡಿ ಮತ್ತು ಅಳಬೇಡಿ

ಸಾಮಾನ್ಯ ಹೆರಿಗೆ ಆದವರು ಕೂಡ, ಖಿನ್ನತೆಗೆ ಒಳಗಾಗುವುದರಿಂದ ಅಥವಾ ಅಳುವುದರಿಂದ ಅವರ ದೇಹದ ಮೇಲೆ ಪರಿಣಾಮ ಬೀರುತ್ತದೆ, ಸಿಸೇರಿಯನ್ ಆದ ಮಹಿಳೆ ಇದನ್ನು ಅನುಭವಿಸಿದರೆ ಅವಳ ಸಿಸೇರಿಯನ್ ಭಾಗದ ನೋವನ್ನು ಬಿಕರವಾಗಿಸಬಹುದು.

೭.ಮನೆಗೆ ಮರಳಿದ ತಕ್ಷಣ ಮನೆಗೆಲಸವನ್ನು ಮಾಡಲು ಶುರು ಮಾಡಬೇಡಿ

ನಿಮ್ಮ ದೇಹಕ್ಕೆ ಈಗ ವಿಶ್ರಾಂತಿಯ ಅವಶ್ಯಕತೆ ಇದೆ, ಆದ್ದರಿಂದ ಕಡ್ಡಾಯವಾಗಿ ಯಾವುದೇ ರೀತಿಯ ಕೆಲಸವನ್ನು ಮಾಡಲು ಮುಂದಾಗಿ, ಆಯಾಸವನ್ನು ಪಡಬೇಡಿ. ನಿಮ್ಮ ಮನೆಯ ಕೆಲಸವನ್ನು ನಿಮ್ಮ ತಾಯಿ ಅಥವಾ ಗಂಡ ನೋಡಿಕೊಳ್ಳುತ್ತಾರೆ, ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಮರಳುವವರೆಗೆ ಕೆಲಸ ಮಾಡಲು ಮುಂದಾಗಬೇಡಿ.

೮.ಮೆಟ್ಟಿಲು ಹತ್ತಬೇಡಿ

ಸಿಸೇರಿಯನ್ ಗೆ ಒಳಗಾಗಿದ್ದರೆ ನೀವು ಮಾಡಬಾರದ ಮತ್ತೊಂದು ಕೆಲಸ ಎಂದರೆ ಮೆಟ್ಟಿಲುಗಳನ್ನು ಹತ್ತದೆ ಇರುವುದು. ಜೊತೆಗೆ ಕಡಿದಾದ ಪ್ರದೇಶಗಳಿಗೂ ನೀವು ಪ್ರಯಾಣ ಮಾಡಬಾರದು, ಇದರಿಂದ ನಿಮ್ಮ ಛೇದನದ ಭಾಗಕ್ಕೆ ತೊಂದರೆಯಾಗುವ ಅಥವಾ ಸ್ಟಿಚ್ ಗಳು ಬಿಚ್ಚಿಕೊಳ್ಳುವ ಸಾಧ್ಯತೆ ಇರುತ್ತದೆ.

೯.ಲೈಂಗಿಕತೆಯನ್ನು ಕನಿಷ್ಠ ಪಕ್ಷ ೧೦ವಾರಗಳ ವರೆಗೆ ಮುಂದೂಡಿರಿ

ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಲೈಂಗಿಕ ಕ್ರಿಯೆಯನ್ನು ಮಾಡದೇ ಇರುವುದು ಒಳ್ಳೆಯದು.

೧೦.ಗಾಯವನ್ನು ಅಲಕ್ಷಿಸ ಬೇಡಿ

ನೀವು ಸ್ನಾನ ಮಾಡುವಾಗ ನಿಮ್ಮ ಸಿಸೇರಿಯನ್ ಭಾಗವನ್ನು ಅಥವಾ ಗಾಯದ ಭಾಗವನ್ನು ನೀರು ಆಗದಂತೆ ನೋಡಿಕೊಳ್ಳಿ ಮತ್ತು ಆ ಜಾಗವನ್ನು ನೀವು ಉಜ್ಜಬೇಡಿ ಮತ್ತು ಸೋಪಿನ ನೀರು ಅದಕ್ಕೆ ತಲುಪದಂತೆ ನೋಡಿಕೊಳ್ಳಿ.

Leave a Reply

%d bloggers like this: