ಟಾಪ್ 10 ಹೆಣ್ಣು ಶಿಶು ಹೆಸರುಗಳು – ಅಕ್ಟೋಬರ್ ಆವೃತ್ತಿ

ಮಗುವಿಗೆ ಜನ್ಮ ನೀಡುವುದು ಒಂದು ಕೆಲಸವಾದರೆ, ಅದಕ್ಕೆ ಒಂದು ಹೆಸರು ಕೊಡುವುದು ಇನ್ನೊಂದು ಕೆಲಸ. ಅಪ್ಪ-ಅಮ್ಮ, ಅತ್ತೆ-ಮಾವ, ಅಣ್ಣ-ತಮ್ಮಂದಿರು, ಸಂಬಂಧಿಕರು ಎಲ್ಲರೂ ಒಂದೊಂದು ಹೆಸರನ್ನು ಸೂಚಿಸುತ್ತಾರೆ. ಆದರೆ, ನಿಮ್ಮ ತಲೆಯೊಳಗೆಯೇ ಬೇರೆ ಹೆಸರು ಇರುತ್ತದೆ. ಈ ಹೆಸರಿನಿಂದಲೇ ಮಗುವು ತನ್ನ ಜೀವನವಿಡೀ ಗುರುತಿಸಲ್ಪಡುತ್ತದೆ. ಹೀಗಾಗಿ ನೀವು ನೀಡುವ ಹೆಸರು ವಿಭಿನ್ನ, ವಿಶಿಷ್ಟ ಮತ್ತು ಸಿಹಿಯಾಗಿ ಇರಬೇಕೆಂಬುದು ನಿಮ್ಮ ಬಯಕೆ. ಹೀಗಾಗಿಯೇ ನಿಮಗೆ ಸಹಾಯ ಆಗಲೆಂದು ನಾವು ಈ ತಿಂಗಳ ಟಾಪ್ 10 ಹೆಣ್ಣು ಶಿಶುಗಳ ಹೆಸರುಗಳನ್ನ ಪಟ್ಟಿ ಮಾಡಿದ್ದೇವೆ ನೋಡಿ

೧. ಅಲೇಖ್ಯ

ಅಲೇಖ್ಯ ಎಂಬುದು ಒಂದು ವಿಶಿಷ್ಟ ದಕ್ಷಿಣ ಭಾರತೀಯ ಹೆಸರಾಗಿದ್ದು, ಇದರ ಅರ್ಥ ಚಿತ್ರಕಲೆ ಎಂದು.

೨. ಹಂಸಿಕಾ

ನಿಮ್ಮ ಮಗು ನಿಮ್ಮ ಮನೆಯ ಬೆಳಗೋ ದೇವತೆ. ಹಂಸಿಕಾ ಎಂದರೆ ಸರಸ್ವತಿಯ ಇನ್ನೊಂದು ಹೆಸರು. ಹೀಗಾಗಿ ನಿಮ್ಮ ಮಗಳಿಗೆ ಈ ಹೆಸರು ನೀಡಬಹುದು.

೩. ಲಿಪಿ

ಲಿಪಿ ಎಂದರೆ ಏನು ಎಂದು ನಿಮಗೆ ತಿಳಿದೇ ಇರುತ್ತದೆ. ಚಿಕ್ಕ, ಚೊಕ್ಕ, ಮುದ್ದಾದ ಹೆಸರು ಈ ಲಿಪಿ.

೪. ಮಾನ್ಯತಾ

ಮಾನ್ಯತಾ ಒಂದು ಸುಂದರವಾದ ಅರ್ಥವಿರುವ ಹೆಸರು. ಮನ್ನಣೆ ಸಿಗುವುದು ಎಂದರ್ಥ.

೫. ಸಾಚಿ

ಸವ್ಯಸಾಚಿ ಎಂಬುವುದನ್ನು ನೀವು ಕೇಳಿರುತ್ತೀರಾ ಅಲ್ಲವಾ? ಸಾಚಿ ಎಂದರೆ ಬೆಡಗು ಹೊಂದಿರುವುದು ಎಂದು.

೬. ಯುಕ್ತ

ಯುಕ್ತ ಎಂದರೆ ಕೌಶಲ್ಯ ಹೊಂದಿರುವವಳು ಎಂದರ್ಥ.

೭. ಮಿಹಿರಾ

ಮಿಹಿರಾ ಎಂದರೆ ಸೂರ್ಯನ ಹೆಣ್ಣಿನ ಅವತರಣಿಕೆ ಎಂದರ್ಥ.

೮. ಉದಿತ

ಉದಿತ ಎಂದರೆ ಉದಯಿಸುವವಳು ಎಂದರ್ಥ.

೯. ಊರ್ವಿ

ಊರ್ವಿ ಎಂಬ ಸಿನಿಮಾ ಇತ್ತೀಚಿಗೆ ತೆರೆಕಂಡಿದ್ದು ನೀವು ಕೇಳಿರಬಹುದು. ಏನಿದರ ಅರ್ಥ? ಊರ್ವಿ ಎಂದರೆ ಭೂಮಿ ಎಂದರ್ಥ.

೧೦. ಲಾಸ್ಯ

ಲಾಸ್ಯ ಎಂದರೆ ದೇವಿ ಪಾರ್ವತಿಯ ಕುಣಿತಕ್ಕೆ ಇರುವ ಹೆಸರು.  

Leave a Reply

%d bloggers like this: