ನಿಮ್ಮಲ್ಲಿರುವ ವಿಶೇಷ ತಾಯಿ ಗುಣ ಯಾವುದೆಂದು ನಿಮ್ಮ ರಾಶಿ ಹೇಳುತ್ತದೆ!

ನಿಮ್ಮ ರಾಶಿ ಚಕ್ರದ ಪ್ರಕಾರ ನೀವು ಯಾವ ಗುಣವನ್ನು ಹೊಂದಿರುವಿರಿ ಎಂದು ತಿಳಿದುಕೊಳ್ಳಬಹುದು. ಆಕಾಶಕಾಯಗಳ ಸ್ಥಿತಿ ಮತ್ತು ಚಲನೆ ಹಾಗು ಜೀವನ ಮತ್ತು ಭೂಮಿಯ ದೈಹಿಕ ಕಾರ್ಯವಿಧಾನಗಳ ಪರಸ್ಪರ ಅಧ್ಯಯನವೇ ಜೋತಿಷ್ಯಶಾಸ್ತ್ರ. ಇದರ ಪ್ರಕಾರ, ನಿಮ್ಮ ರಾಶಿಯನ್ನು ನೀವು ಜನಿಸಿದ ದಿನ ಸೂರ್ಯ ಇದ್ದ ಸ್ಥಿತಿಯನ್ನು ಆಧರಿಸಿ ನಿರ್ಧರಿಸಲಾಗುವುದು.

೧.ಮೇಷ ರಾಶಿ

ನೀವು ಮೇಷರಾಶಿಯವರಾಗಿದ್ದರೆ, ನಿಮ್ಮಲ್ಲಿ ನಾಯಕತ್ವ ಗುಣ ಇರುತ್ತದೆ, ಸಾಹಸಮಯ ಕಾರ್ಯಗಳನ್ನು ನೀವು ಮಾಡಲು ಇಷ್ಟ ಪಡುವಿರಿ, ಆದರೆ ನಿಮ್ಮ ಕುಟುಂಬದ ಯೋಜನೆಯಲ್ಲಿ ನೀವು ಅದನ್ನು ನೀವು ಅಂದುಕೊಂಡಂತೆ ಮಾಡಲು ಸಾಧ್ಯವಾಗದೆ ಇರಬಹುದು.

ನೀವು ನೇರ ನುಡಿಯವರಾಗಿರುವುದರಿಂದ, ನಿಮ್ಮ ಮಗುವು ಅದೇ ಗುಣವನ್ನು ಪಡೆಯುತ್ತದೆ, ನಿಮ್ಮ ಮಗುವು ನಿಮ್ಮಂತೆ ಸಾಹಸಮಯ ಕಾರ್ಯಗಳನ್ನು, ನಾಯಕತ್ವ ಗುಣವನ್ನು ಹೊಂದುತ್ತದೆ.

೨.ವೃಷಭ ರಾಶಿ

ನಿಮ್ಮ ಮಗುವಿನ ಬಗ್ಗೆ ನೀವು ನಿಮ್ಮದೇ ಆದ ವಿಭಿನ್ನ ವಿಶಿಷ್ಟ ಕನಸನ್ನು ನಿಮ್ಮ ತಲೆಯಲ್ಲಿ ಹೊಂದಿರುವಿರಿ. ನೀವು ಉತ್ತಮವಾದುದ್ದನ್ನೇ ಬಯಸುವಿರಿ. ನೀವು ನಿಮ್ಮ ಎಲ್ಲಾ ಆಪ್ತರ ಬಗ್ಗೆ ಕಾಳಜಿಯನ್ನು ತೋರಿಸುವಿರಿ. ನೀವು ಅಂದುಕೊಂಡಂತೆ ನಿಮ್ಮ ಮಗುವು ಬೆಳೆಯಬೇಕು, ಎಂದು ಬಯಸುವಿರಿ.

೩.ಮಿಥುನ ರಾಶಿ

ನೀವು ಹೆಚ್ಚು ತಮಾಷೆ ಮಾಡುವಿರಿ, ನೀವು ಹೆಚ್ಚು ಸಂತೋಷವನ್ನು ಬಯಸುವಿರಿ, ನೀವು ಅಂದುಕೊಂಡ ಕೆಲಸ ಆಗಲೇಬೇಕೆಂದು ಹಠ ಹಿಡಿಯುವಿರಿ. ನೀವು ಅತ್ಯುತ್ತಮ ಪೋಷಕರಾಗುವಿರಿ. ನಿಮ್ಮ ಮಗುವು ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತದೆ.

೪.ಕಟಕ ರಾಶಿ

ನೀವು ಉತ್ತಮ ಪೋಷಕರಾಗಿದ್ದು, ನಿಮ್ಮ ಮಗುವು ಅಳುವುದಕ್ಕೂ ಮುಂಚೆಯೇ ಮಗುವಿಗೆ ಏನು ಬೇಕು ಎಂಬುದನ್ನು ತಿಳಿದುಕೊಳ್ಳುವ ಸಾಮರ್ಥ್ಯ ನಿಮಗಿದೆ. ನಿಮ್ಮ ಮಗುವಿನ ಸಣ್ಣ ವಿಷಯವನ್ನು ನೀವು ಗಂಭೀರವಾಗಿ ಪರಿಗಣಿಸುವಿರಿ. ನಿಜ ಏನೆಂದರೆ ನಿಮ್ಮ ಮಗುವಿನ ನಿಜವಾದ ರಕ್ಷಕರು ನೀವೇ. ಮತ್ತು ಪ್ರತಿ ವಿಷಯದಲ್ಲೂ ನೀವು ಪರಿಪೂರ್ಣತೆಯನ್ನು ಬಯಸುವಿರಿ.

೫.ಸಿಂಹ ರಾಶಿ

ನೀವು ನೇರ ನಡೆಯವರು, ಸಮಯ ಪ್ರಜ್ಞೆ ಇರುವವರು, ಮತ್ತು ಸ್ವಲ್ಪ ಆತ್ಮಶ್ಲಾಘನೀಯರು. ನೀವು ನಿಮ್ಮ ಆಗುವು ಎಲ್ಲದರಲ್ಲೂ ಮುಂದಿರಬೇಕು ಜೊತೆಗೆ ಬೇರೆಯವರಿಗಿಂತ ಅನನ್ಯವಾಗಿರಬೇಕು ಎಂದು ಬಯಸುವಿರಿ. ನೀವು ಆತ್ಮವಿಶ್ವಾಸವನ್ನು ಹೊಂದಿರುವಿರಿ ಮತ್ತು ಅದನ್ನು ನಿಮ್ಮ ಮಗುವಿನಲ್ಲೂ ಬೆಳೆಸುವಿರಿ. ನಿಮ್ಮ ಮಗುವು ನಿಮ್ಮಂತೆ ಸ್ವಲ್ಪ ಮುಂಗೋಪಿ ಆಗಬಹುದು. ಆದರೆ ಖಂಡಿತ ನಿಮ್ಮಂತೆ ಹೃದಯವಂತ ಆಗಿರುತ್ತಾನೆ/ಳೆ. ಒಂದು ಕೆಲಸವನ್ನು ಮಾಡಬೇಕೆಂದರೆ ಅದನ್ನು ಹೇಗೆ ಬೇರೆ ದಾರಿಯಲ್ಲಿ ಮಾಡಬಹುದು ಎಂದು ಯೋಚಿಸುವುದು ನೀವು ಮಾತ್ರ. ನಿಮ್ಮಲ್ಲಿ ಹೆಚ್ಚು ಕ್ರಿಯಾಶೀಲ ಗುಣ ಇದ್ದರು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಿಲ್ಲ.

೬.ಕನ್ಯಾ ರಾಶಿ

ನೀವು ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇರಿಸಿಕೊಂಡಿರುವಿರಿ. ನಿಮ್ಮ ಸುತ್ತಲಿನ ವಾತಾವರವನ್ನು ನಿಮ್ಮ ಹತೋಟಿಯಲ್ಲಿ ಇರಿಸಿಕೊಳ್ಳಲು ಬಯಸುವಿರಿ. ಇದರಲ್ಲಿ ಹಲವು ಬಾರಿ ಯಶಸ್ವಿ ಕೂಡ ಆಗುವಿರಿ. ನಿಮಗೆ ಶುಚಿತ್ವ ಕಾಪಾಡುವುದು ತುಂಬಾ ಇಷ್ಟ. ಸಿಂಹ ರಾಶಿಯವರಂತೆ ನೀವು ನಿಮ್ಮದೇ ದಾರಿಯಲ್ಲಿ ಹೋಗಲು ಇಚ್ಛಿಸುವಿರಿ. ನೀವು ಹೆಚ್ಚು ಬೇಡಿಕೆಯಲ್ಲಿರುವಿರಿ. ಜೊತೆಗೆ ನೀವು ಯಾವುದೇ ಸಮಸ್ಯೆಯನ್ನು ನಿವಾರಿಸುವಲ್ಲಿ ನಿಪುಣರಾಗಿರುವಿರಿ.

೭.ತುಲಾ ರಾಶಿ

ನೀವು ಶಾಂತ ಮನೋಭಾವದ ವ್ಯಕ್ತಿಯಾಗಿದ್ದು, ಮನೋರಂಜನೆಯನ್ನು ನಿಮ್ಮ ವಾತಾವರಣದಲ್ಲಿ ಇಚ್ಛಿಸುವಿರಿ. ನಿಮ್ಮ ಮಕ್ಕಳು ಉತ್ತಮರಲ್ಲಿ ಉತ್ತಮರಾಗಲು ಬಯಸುವಿರಿ. ಖುಷಿಯಾಗಿರುವುದು ನಿಮ್ಮ ಜೀವನದ ಮೊದಲ ಆಧ್ಯತೆ ಆಗಿರುತ್ತದೆ.

೮.ವೃಶ್ಚಿಕ ರಾಶಿ

ಇವರು ಅತಿಯಾಗಿ ಸ್ವತಂತ್ರವನ್ನು ಬಯಸುವರು, ಕೆಲವೊಮ್ಮೆ ಇವರೊಡನೆ ಕಾಲ ನಿಭಾಯಿಸುವುದು ಕಷ್ಟಕರವಾಗಿರುತ್ತದೆ. ಇವರು ನಾನು ಹೇಳಿದಂತೆ ನಡೆಯಬೇಕು ಎಂದು ಯಾವಾಗಲು ಬಯಸುವರು, ಆದರೆ ಮಗುವನ್ನು ಇವರಷ್ಟು ಪ್ರೀತಿಸುವರು, ಪೋಷಿಸುವರು ಮತ್ತು ಕಾಳಜಿ ತೋರಿಸುವರು ಯಾರು ಇಲ್ಲ. ಇವರು ಸರಿ ದಾರಿಯನ್ನು ತೋರಿಸುವರು ಆದರೆ ಮಕ್ಕಳನ್ನು ಎಂದು ಇವರು ನಿಯಂತ್ರಿಸುವುದಿಲ್ಲ ಇದು ಕೆಲವೊಮ್ಮೆ ತೊಂದರೆಗೆ ಕಾರಣವಾಗಬಹುದು.

೯.ಧನಸ್ಸು ರಾಶಿ

ಇವರು ತುಂಬಾ ಚುರಕಾಗಿದ್ದು, ತಮಾಷೆ ಮತ್ತು ಧನಾತ್ಮಕ ಯೋಚನೆ ಮಾಡುವರು. ಜೀವನವನ್ನು ಅನುಭವಿಸಲು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡುವರು. ಅವರು ಇಷ್ಟ ಪಡುವ ಕೆಲಸವನ್ನು ಮಾಡಲು ಬಿಡುವರು. ನೀವು ತುಂಬಾ ಕೂತಹಲವನ್ನು ಇಷ್ಟಪಡುವಿರಿ ಮತ್ತು ಹೆಚ್ಚು ಜನರ ಜೊತೆ ಬೆರೆಯಲು ಇಚ್ಛಿಸುವಿರಿ.

೧೦.ಮಕರ ರಾಶಿ

ನಿಮ್ಮದೇ ಆದ ನೀತಿಯನ್ನು ಕೆಲಸದಲ್ಲಿ ತೋರುವಿರಿ, ಇವರು ತಮ್ಮದೇ ಕಟ್ಟುಪಾಡುಗಳನ್ನು ಹಾಕಿಕೊಳ್ಳುವರು. ನೀವು ಸೋಲನ್ನು ಬಯಸುವುದಿಲ್ಲ, ನಿಮ್ಮ ಪೋಷಕತ್ವ ಗುಣವನ್ನು ಬೇರೆಯವರು ಇಷ್ಟಪಡುವರು, ನಿಮ್ಮಂತೆ ಮಕ್ಕಳನ್ನು ಬೆಳೆಸಬೇಕು ಎಂದು ಹಲವರು ಇಚ್ಛಿಸುತ್ತಾರೆ, ನಿಮ್ಮ ಪೋಷಕತ್ವ ಗುಣವನ್ನು ನೀವು ಅಷ್ಟು ಚೆನ್ನಾಗಿ ನಿಭಾಯಿಸುವಿರಿ.

೧೧.ಕುಂಭ ರಾಶಿ

ಇವರು ನೈಸರ್ಗಿಕವಾಗಿ ತುಂಬಾ ತಾಳ್ಮೆ ಇರುವವರು ಮತ್ತು ಒಳ್ಳೆ ಕೇಳುಗರು. ನೀವು ಹಣಕ್ಕಿಂತ ಹೆಚ್ಚು ಸಂಬಂಧಗಳಿಗೆ ಬೆಲೆ ಕೊಡುವಿರಿ. ನಿಮ್ಮಂತೆ ನಿಮ್ಮ ಮಗುವು ಕೂಡ ಸಂಬಂಧಗಳಿಗೆ ಬೆಲೆ ನೀಡುವುದು.

೧೨.ಮೀನ ರಾಶಿ

ಇವರು ಮುಂಗೋಪಿ ಆಗಿದ್ದರೂ, ಸದಾ ಮಕ್ಕಳನ್ನು ಬೆನ್ನು ಬಿಡದೆ ಕಾಯುವರು, ಇದು ಶಿಶುಗಳ ಕಾಳಜಿಗೆ ಬೇಕಾದದ್ದು. ಆದರೆ ಬೆಳೆದು ಪ್ರೌಢಾವಸ್ಥೆಗೆ ಬಂದ ಮೇಲೆ ಇದು ಅಷ್ಟು ಉತ್ತಮ ಎಂದು ಹೇಳಲಾಗದು. ಇವರು ಒಂದು ತರ ಕಲೆಗಾರರು. ನಿಮ್ಮ ಮಗುವಿನ ಖುಷಿಯನ್ನು ಹೆಚ್ಚು ಬಯಸುವಿರಿ ಅಂತೆಯೇ ಮಗುವಿಗೆ ಇಷ್ಟವಾದ ಅಥವಾ ಹೊಸ ಬಗೆಯ ಅಡುಗೆಯನ್ನು ನೀವು ಮಾಡುವಿರಿ.

Leave a Reply

%d bloggers like this: