ಹೆಂಗಸರ ಬಗೆಗಿನ ಕೆಲವು ನಂಬಲಾಗದ ಸತ್ಯಗಳು!

ಇದು ಬರಿ ಭಾರತದ ಮಹಿಳೆಯರ ಸತ್ಯಗಳಲ್ಲ, ಇಡೀ ವಿಶ್ವದಲ್ಲಿರುವ ಮಹಿಳೆಯರ ಬಗೆಗಿನ ಸತ್ಯ ಸಂಗತಿಗಳು. ಇವುಗಳನ್ನು ನೀವು ಕೇಳಿದರೆ ಆಶ್ಚರ್ಯ ಪಡಬಹುದು, ನಂಬಲು ಸಾಧ್ಯವಿಲ್ಲ ಎನ್ನಬಹುದು ಆದರೆ ಇವುಗಳು ಸತ್ಯ. ಅವುಗಳು ಯಾವುದೆಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

೧.ಪ್ರತಿ ೯೦ ಸೆಕೆಂಡುಗಳಿಗೆ ಒಮ್ಮೆ, ತಮ್ಮ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆ ಸಮಯದಲ್ಲಿ ಒಬ್ಬ ಮಹಿಳೆಯು ಸಾವಿಗೆ ಶರಣಾಗುತ್ತಾಳೆ.

೨.ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದ ೫ ರಿಂದ ೮ ದಿನಗಳ ನಂತರವೂ ಕೂಡ ಗರ್ಭಧರಿಸುವ ಸಾಧ್ಯತೆಗಳಿವೆ.

೩.ಹೆರಿಗೆ ನಂತರ ತನ್ನ ಯೋನಿಯ ಸ್ನಾಯುಯು ಮರಳಿ ತನ್ನ ಆಕಾರ ಮತ್ತು ಗಾತ್ರವನ್ನು ಪಡೆಯಲು ೬ ತಿಂಗಳವರೆಗೂ ಸಮಯವನ್ನು ತೆಗೆದುಕೊಳ್ಳುತ್ತದೆ.

೪.ಮಹಿಳೆಯರು ದಿನಕ್ಕೆ ಸರಾಸರಿ ೨೦,೦೦೦ ಪದಗಳನ್ನು ಮಾತನಾಡುತ್ತಾರೆ. ಇದು ಸರಾಸರಿ ಪುರುಷರಿಗಿಂತ ೧೩,೦೦೦ ಹೆಚ್ಚು.

೫.ಮಹಿಳೆಯರು ತಮ್ಮ ಜೀವನದಲ್ಲಿ ಒಂದು ವರ್ಷದಷ್ಟು ಸಮಯವನ್ನು ಯಾವ ಉಡುಗೆ ತೊಡಲಿ ಎಂಬುದನ್ನು ಯೋಚಿಸುತ್ತಾರೆ.

೬.ಮಹಿಳೆಯರು ಒಂದು ವರ್ಷದಲ್ಲಿ ಸರಾಸರಿ ೩೦ ರಿಂದ ೬೪ ಬಾರಿ ಅಳುತ್ತಾರೆ, ಅದೇ ಪುರುಷರು ೭ ರಿಂದ ೧೭ ಬಾರಿ ಅಳುತ್ತಾರೆ.

೭.ಮಹಿಳೆಯರ ಹೃದಯ ಬಡಿತವು ಪುರುಷರಿಗಿಂತ ಹೆಚ್ಚಿರುತ್ತದೆ.

೮.ಮಹಿಳೆಯರು ತಮ್ಮ ಸಂಪೂರ್ಣ ಜೀವನದ ಅವಧಿಯಲ್ಲಿ ೪ ವರ್ಷವನ್ನು ಋತುಚಕ್ರದ ಜೊತೆ ಅನುಭವಿಸುವರು.

೯.ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ರುಚಿ ಗ್ರಹಿಸುವ ಮೊಗ್ಗುಗಳಿವೆ.

೧೦.ಅಧ್ಯಯನದ ಪ್ರಕಾರ ಉದ್ದವಾಗಿರುವ ಮಹಿಳೆಯರು ಬೇಗನೆ ಕ್ಯಾನ್ಸರ್ ಗೆ ಗುರಿಯಾಗುತ್ತಾರೆ.

೧೧.ರಷ್ಯಾದಲ್ಲಿ ಪುರುಷರಿಗಿಂತ ೯ ಮಿಲಿಯನ್ ನಷ್ಟು ಹೆಚ್ಚು ಮಹಿಳೆಯರು ಇದ್ದಾರೆ.

೧೨.ಮಹಿಳೆಯರು ತಾವು ಹೇಗೆ ಕಾಣುತ್ತಿದ್ದೇವೆ ಎಂಬುದರ ಬಗ್ಗೆ ದಿನಕ್ಕೆ ೯ ಬಾರಿ ಯೋಚಿಸುತ್ತಾರೆ.

೧೩.ಮಹಿಳೆಯರನ್ನು ಸಾವಿಗೆ ಶರಣಾಗುವಂತೆ ಮಾಡುವುದರಲ್ಲಿ ಹೃದಯ ಸಂಬಂಧಿ ಕಾಯಿಲೆ ಮೊದಲನೇ ಸ್ಥಾನದಲ್ಲಿದೆ.

೧೪.ಹೆಚ್ಚು ಕೆಲಸವನ್ನು ಅಥವಾ ಬಹುಕೆಲಸವನ್ನು ಮಾಡುವುದರಲ್ಲಿ ಮಹಿಳೆಯರೇ ಮೊದಲು.

೧೫.ಕೇವಲ ಶೇಕಡಾ ೨ ರಷ್ಟು ಮಹಿಳೆಯರು ಮಾತ್ರ ತಮ್ಮ ಸೌಂದರ್ಯದ ಬಗ್ಗೆ ತಾವೇ ಹೇಳಿಕೊಳ್ಳುವರು.

೧೬.ಮಹಿಳೆಯರು ಒಂದು ನಿಮಿಷಕ್ಕೆ ೧೯ ಬಾರಿ ಕಣ್ಣಿನ ರೆಪ್ಪೆಯನ್ನು ಬಡಿಯುತ್ತಾರೆ(ಪುರುಷರು ೧೧ ಬಾರಿ).

೧೭.ನೈಜರ್ ನಲ್ಲಿರುವ ಮಹಿಳೆಯರು ಸರಾಸರಿ ೭ ಮಕ್ಕಳನ್ನು ಹೊಂದಿದ್ದಾರೆ, ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವುದು ಇದೆ ದೇಶದಲ್ಲಿ.

೧೮.ಶೇಕಡಾ ೮೦ರಷ್ಟು ಮಹಿಳೆಯರು ತಪ್ಪಾದ ಬ್ರಾ ಸೈಜ್ ಅನ್ನು ಧರಿಸುತ್ತಾರೆ.

೧೯.ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುವರು. ಇದಕ್ಕೆ ಅವರಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆ ಕಾರಣ.

೨೦.ಪ್ರಾಚೀನ ರೋಮ್ ನ ಮಹಿಳೆಯರು ತಮ್ಮ ಸೌಂದರ್ಯವನ್ನು ಮತ್ತು ತ್ವಚೆಯ ಬಣ್ಣವನ್ನು ಹೆಚ್ಚಿಸಿಕೊಳ್ಳಲು gladiator ಗಳ ಬೆವರನ್ನು ಧರಿಸುತ್ತಿದ್ದರು.

Leave a Reply

%d bloggers like this: