ಗರ್ಭಕಾಲದಲ್ಲಿ ತಗಲಬಹುದಾದ ಸೋಂಕುರೋಗಗಳು ಹಾಗೂ ನಿವಾರಣೆ

ಗರ್ಭಿಣಿಯರ ರೋಗ ಪ್ರತಿರೋಧಕ ಶಕ್ತಿಯು, ಈಗ ಎರಡು ಜೀವಗಳಿಗಾಗಿ ಕೆಲಸ ಮಾಡಬೇಕಾದುದರಿಂದ, ಅದು ಈಗ ಸಾಮಾನ್ಯ ಸ್ತ್ರೀಯರಿಗಿಂತ ಬಹಳ ಬಲಹೀನವಾಗಿರುವುದು. ಆದಕಾರಣ, ಗರ್ಭಿಣಿಯರು ಬಹಳ ಬೇಗನೆ ಸೋಂಕು ರೋಗಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.ಮಾತ್ರವಲ್ಲದೇ ನಿಮಗೆ ತಗುಲಿದ ಸೋಂಕು ರೋಗವು ಮಗುವಿಗೂ ಹರಡುವ ಸಾಧ್ಯತೆ ಇದೆ. ಆದ ಕಾರಣ ಪ್ರತಿ ತಾಯಿಯರು ತಮ್ಮ ಗರ್ಭ ಕಾಲದಲ್ಲಿ ಅತ್ಯಂತ ಜಾಗರೂಕರಾಗಿರಬೇಕಾದದ್ದು ಅತೀ ಅಗತ್ಯ.

ಈ ಸೋಂಕು ರೋಗಗಳು ಯಾವುದು..? ಬಹಳಷ್ಟು ಗರ್ಭಿಣಿಯರು ಅನುಭವಿಸಿದ ಸೋಂಕು ರೋಗಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಬೇಕ್ಟೀರಿಯಲ್ ವೇಜಿನೋಸಿಸ್

ಬಿ ವಿ ಅಥವಾ ಬ್ಯಾಕ್ಟೀರಿಯಲ್ ವೆಜಿನೋಸಿಸ್ ಎನ್ನುವ ಬ್ಯಾಕ್ಟೀರಿಯಾವು ಗರ್ಭಿಣಿಯಾಗಲು ಸಾಧ್ಯತೆಗಳಿರುವ ಸ್ತ್ರೀಯರಿಗೆ ಬಹಳ ಬೇಗನೇ ತಗಲುತ್ತದೆ. ವೆಜೀನಲ್ ಬೇಕ್ಟೀರಿಯಾವು ಸ್ತ್ರೀಯರಿಗೆ ಅಗತ್ಯವಿರುವ ಒಳ್ಳೆಯ ಬೇಕ್ಟೀರಿಯ. ಆದರೆ ಅವುಗಳ ಪ್ರಮಾಣವು ಹೆಚ್ಚಾದರೆ, ಅದು ಅನಾರೋಗ್ಯಕರ ಬೆಳವಣಿಗೆ ಅಧಿಕ ಪ್ರಮಾಣದಲ್ಲಿ ಸ್ರವಿಸಲ್ಪಟ್ಟರೆ, ತುರಿಕೆ, ಬಿಳಿ ಬಣ್ಣದ ಸ್ರಾವ ಮತ್ತು ಮೂತ್ರ ವಿಸರ್ಜಿಸುವಾಗಿನ ಉರಿಗೂ ಕಾರಣವಾಗುತ್ತದೆ. ತನ್ನಷ್ಟಕ್ಕೆ ತಾನೇ ಗುಣಮುಖವಾಗುವ ಈ ವ್ಯವಸ್ಥೆಯಿಂದ ಪಾರಾಗಲು ವೈದ್ಯರ ಸಲಹೆಯಂತೆ ಔಷಧಿಗಳನ್ನು ಸೇವಿಸಬೇಕಾಗುತ್ತದೆ ಕೆಲವೊಮ್ಮೆ ಅವಧಿಗಿಂತ ಮೊದಲೇ ಹೆರಿಗೆ ಅಥವಾ ತೂಕವಿಲ್ಲದ ಮಗುವಿನ ಜನನಕ್ಕೂ ಕಾರಣವಾಗಬಹುದು.

 ಯೀಸ್ಟ್ ಇನ್ಫೆಕ್ಷನ್

ಯೋನಿ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ‘ಫಂಗಸ್ ಕ್ಯಾಂಡಿಡಾ’ಎನ್ನುವ ಯೀಸ್ಟ್ ಕಂಡು ಬಂದರೆ ಅದು ಈಸ್ಟ್ ಇನ್ಫೆಕ್ಷನ್ ಎಂದು ಗುರುತಿಸಲ್ಪಡುತ್ತದೆ ಇದು ತುರಿಕೆ, ಯೋನೀ ಭಾಗಗಳಲ್ಲಿ ಉರಿ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ, ಕೆಂಪಾಗುವಿಕೆ ,ಬಾವು ಮತ್ತು ಹಳದಿ ಬಣ್ಣದ ಸ್ರಾವಕ್ಕೆ ಕಾರಣವಾಗುತ್ತದೆ. ವೈದ್ಯರ ಸಲಹೆ ಪ್ರಕಾರ ಮುಲಾಮನ್ನು ಅಥವಾ ಔಷಧಗಳನ್ನು ಸೇವಿಸುವುದರಿಂದ ಯೀಸ್ಟ್ ಇನ್ಫೆಕ್ಷನ್ ನಿಂದ ಇನ್ಫೆಕ್ಷನ್ ನಿಂದ ಗುಣಮುಖವಾಗಬಹುದು.

ಗ್ರೂಪ್ ಬಿ ಸ್ಟ್ರೆಪ್

ಕರುಳಿನ ಪ್ರದೇಶಗಳಲ್ಲಿ ವಾಸಿಸುವ ಬಾಕ್ಟೀರಿಯಾಗಳು ಗ್ರೂಪ್ ಬಿ ಸೆಕ್ಟರ್ ಕೊಕನ್ ಎಂದು ಕರೆಯಲ್ಪಡುತ್ತದೆ. ಕೆಲವೊಮ್ಮೆ ಯೋನಿ ಪ್ರದೇಶಗಳಿಗೆ ಹರಿಯಲ್ಪಟ್ಟು, ಪ್ರಸವದ ಸಮಯದಲ್ಲಿ ಮಗುವಿಗೂ ತಗಲುತ್ತದೆ. ಹಿರಿಯರಿಗೆ ನಿರುಪದ್ರವಕಾರಿಯಾದ ಈ ಬ್ಯಾಕ್ಟೀರಿಯಾವು,ಮಗುವಿನ ಪ್ರಾಣಕ್ಕೂ ಅಪಾಯ ತಂದೊಡ್ಡಬಲ್ಲದು. ಬ್ಲಾಡರ್ ಇನ್ಫೆಕ್ಷನ್, ಎಂಡೋಮೆಟ್ರಿಸ್ ಮತ್ತು ಗರ್ಭಪಾತಕ್ಕೂ ಕಾರಣವಾಗಬಹುದು. ಇದರ ಲಕ್ಷಣಗಳು ಗೋಚರಿಸುವುದಿಲ್ಲ. ಆದುದರಿಂದಲೇ ಗರ್ಭಿಣಿಯರು ಇನ್ಫೆಕ್ಷನ್ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ವೈದ್ಯರ ಉಪದೇಶದಂತೆ ಮಾತ್ರೆಗಳ ಸೇವನೆಯಿಂದ ಈ ಸೋಂಕನ್ನು ಪರಿಹರಿಸಿಕೊಳ್ಳಬಹುದು.

ಸಿಫಿಲಿಸ್

ರೋಗ ಪೀಡಿತವಾಗಿರುವ ವ್ಯಕ್ತಿಯೊಂದಿಗಿನ ಲೈಂಗಿಕ ಸಂಪರ್ಕದಿಂದ ಸಿಫಿಲಿಸ್ ಸೋಂಕು ರೋಗವು ಹರಡುತ್ತದೆ. ಇದು ಜರಾಯುವಿನ(ಪ್ಲೆಸೆಂಟಾದ) ಮೂಲಕ ಭ್ರೂಣಕ್ಕೂ ವರ್ಗಾಯಿಸಲ್ಪಡುತ್ತದೆ. ಚಿಕಿತ್ಸೆ ನೀಡಿದರೆ, ಫಲಪ್ರದವಾಗಿ ಗುಣಮುಖವಾಗುವ ಸಿಫಿಲಿಸಗಳನ್ನು ನಿರ್ಲಕ್ಷ್ಯ ಮಾಡಿದರೆ, ಹೃದಯ ಸಂಬಂಧಿ ಖಾಯಿಲೆಗಳಂತಹ ಅಪಾಯಕಾರಿ ಬೆಳವಣಿಗೆಗೂ ಕಾರಣವಾಗುವುದು. ಗರ್ಭ ಕಾಲದಲ್ಲಿ ಸಿಫಿಲಿಸ್ಸಿನಿಂದ ಪೀಡಿತರಾಗಿದ್ದರೆ ಪೆನ್ಸಿಲಿನ್ ಚುಚ್ಚುಮದ್ದನ್ನು ನೀಡುವುದರಿಂದ, ತಾಯಿ ಮಕ್ಕಳಿಬ್ಬರನ್ನು ರೋಗ ಬಾರದಂತೆ ತಡೆಗಟ್ಟಬಹುದು.

ಹೆಚ್ ಐ ವಿ

ಸಿಫಿಲಿಸ್ ಪೀಡಿತನಾದ ವ್ಯಕ್ತಿಗೆ ಎಚ್ಐವಿ ಬಾಧಿಸಿರುವ ಸಾಧ್ಯತೆಗಳು ತೀರಾ ಹೆಚ್ಚು. ಹ್ಯೂಮನ್ ಇಮ್ಯುನೊ ಡಿಫಿಷಿಯೆನ್ಸಿ ವೈರಸ್ ಎಂದು ಕರೆಯಲ್ಪಡುವ ಈ ವೈರಸ್ ಗಳು ಮನುಷ್ಯನ ರೋಗ ಪ್ರತಿರೋಧಕ ಶಕ್ತಿಯನ್ನು ನಾಶಗೊಳಿಸುತ್ತದೆ. ರೋಗಗಳು ಅಥವಾ ಸೋಂಕು ರೋಗಗಳಿಗೆ ಎದುರಾಗಿ ಹೋರಾಡಲಿರುವ ಶರೀರದ ರಕ್ಷಣಾ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಯಾವುದೇ ಸೂಚನೆಗಳನ್ನು ನೀಡದೆ ಯೂರಿನರಿ ಟ್ರ್ಯಾಕ್ಟ್(ಮೂತ್ರ ನಾಳಗಳನ್ನು) ಹಾನಿಗೊಳಪಡಿಸುತ್ತದೆ. ಎಚ್ಐವಿಯಿಂದ ಪಾರಾಗಲು ಯಾವುದೇ ಫಲಪ್ರದವಾದ ಚಿಕಿತ್ಸೆಯಿಲ್ಲ. ಆದರೆ ತಾಯಿಯಿಂದ ಮಗುವಿಗೆ ಹರಡದಂತೆ ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಎಚ್ ಐ ವಿ ಎದುರಾಗಿ ಔಷಧಗಳನ್ನು ಸೇವಿಸುವುದು, ಪರಾವಲಂಬಿಗಳಾದ ವೈರಸ್ಸುಗಳಿಗೆದುರಾಗಿ ಹೋರಾಡುವಂತಹ ಸಾಮರ್ಥ್ಯವನ್ನು ಶರೀರಕ್ಕೆ ನೀಡುವ ಔಷಧಿಗಳನ್ನು ಸೇವಿಸುವುದರಿಂದ, ಸಿಸೇರಿಯನ್ ವಿಧೇಯವಾಗುವುದು- ಇವೇ ಮೊದಲಾದ ಎಚ್ಚರಿಕಾ ಕ್ರಮಗಳಿಂದ ನೀವು ಹಾಗೂ ಮಗುವು ಎಚ್ ಐ ವಿ ಸೋಂಕು ರೋಗಗಳಿಂದ ನರಳುವುದನ್ನು ತಪ್ಪಿಸಬಹುದು. ಎಚ್ಐವಿ ಬಾಧಿತರಾಗಿದ್ದೇವೆಯೇ ಎಂದು ಪರೀಕ್ಷಿಸುವುದು ನಿಮ್ಮ ಮಗುವಿನ ಆರೋಗ್ಯಕರ ಜೀವನಕ್ಕೆ ಅತಿ ಅಗತ್ಯ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಮಾತ್ರ ಹರಡುವ ಸಾಂಕ್ರಾಮಿಕ ರೋಗಗಳಿವು. ಆದ ಕಾರಣ ಮಗುವಿನ ಆರೋಗ್ಯಕ್ಕೂ ಕಾಳಜಿವಹಿಸಿ, ಸುರಕ್ಷಿತ ಲೈಂಗಿಕತೆಯ ಬಗ್ಗೆ ಆದ್ಯತೆ ನೀಡಬೇಕಾದದ್ದು ಅತಿ ಅಗತ್ಯ .

ನವಜಾತ ಶಿಶುಗಳಿಗೆ ಯಾವುದೇ ರೋಗ ಪ್ರತಿರೋಧಕ ಶಕ್ತಿಗಳಿರುವುದಿಲ್ಲ. ನಿಮ್ಮ ಶರೀರವೇ ಮಗುವಿನ ಆರೋಗ್ಯಕ್ಕೂ ಹೋರಾಡುತ್ತದೆ. ನಿಮ್ಮ ಶರೀರವು ರೋಗ ಪ್ರತಿರೋಧಕ ಸಾಮರ್ಥ್ಯವನ್ನು ಕಳೆದುಕೊಂಡರೆ, ಖಂಡಿತವಾಗಿಯೂ ರೋಗಾಣುಗಳು ಮಗುವಿಗೂ ಬಾಧಿಸುತ್ತದೆ. ಗರ್ಭ ಕಾಲದಲ್ಲಿ ಯಾವುದೇ ರೀತಿಯ ಸೋಂಕು ರೋಗಕ್ಕೊಳಗಾಗಿಲ್ಲವೆಂದು ಖಾತರಿ ಪಡಿಸಿಕೊಳ್ಳಿ ಅಥವಾ ರೋಗ ಪೀಡಿತವಾಗಿದ್ದರೆ

ತಕ್ಷಣವೇ ಚಿಕಿತ್ಸೆ ಮಾಡಿಸಿಕೊಂಡು, ಆರೋಗ್ಯ ಪೂರ್ಣ ಮಗುವಿನ ತಾಯಿಯಾಗಿ ಸಂತೋಷದಿಂದ ಬಾಳಿರಿ.

Leave a Reply

%d bloggers like this: