ನಿಮ್ಮ ಮಗು ಉಗುಳದ/ವಾಂತಿ ಮಾಡದ ರೀತಿಯಲ್ಲಿ ಹೇಗೆ ತಿನ್ನಿಸಬೇಕು

ತನ್ನ ಮಗು ಪ್ರತಿದಿನ ತಿಂದ ಆಹಾರವನೆಲ್ಲ ಕಕ್ಕುವುದನ್ನು ನೋಡುವುದಕ್ಕಿಂತಲೂ ಹೃದಯ ವಿದ್ರಾವಕ ಘಟನೆ ತಾಯಿಗೆ ಬೇರೊಂದಿಲ್ಲ. ಮಗು ಕಕ್ಕುವುದರಿಂದ ಸಾಕಷ್ಟು ಪೌಷ್ಟಿಕಾಂಶ ಕಳೆದುಕೊಳ್ಳುವದನ್ನು ನೋಡಿ ತಾಯಿ ಮತ್ತಷ್ಟು ಚಿಂತಿತಳಾಗುತ್ತಾಳೆ. ಅದು ಮೊಲೆಯ ಹಾಲಿರಬಹುದು ಅಥವಾ ಬೇರೆ ಯಾವುದೋ ಪೌಷ್ಟಿಕ ಆಹಾರವಿರಬಹುದು ಎಲ್ಲವೂ ಸಹ ವಾಂತಿಯ ರೀತಿ ಹೊರಬಂದು ಬಿಡುತ್ತದೆ. ಇದರಿಂದ ತಾಯಿ ಮಗುವಿಗೆ ತಿನ್ನಿಸಲು ಮಾಡಿದ ಪರಿಶ್ರಮವೆಲ್ಲ ವ್ಯರ್ಥವಾಗುತ್ತದೆ.

ಒಪ್ಪಿ ಕೊಳ್ಳಿ ಅಥವಾ ಬಿಡಿ ಮಗು ಮಾಡಿದ ವಾಂತಿ ಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಬೇಸರವಾಗದೇ ಇರದು. ಅದು ವಾಂತಿಯನ್ನು ಶುಚಿಗೊಳಿಸಬೇಕಲ್ಲ ಎಂಬ ಮನುಷ್ಯ ಸಹಜ ಪ್ರತಿಕ್ರಿಯೆಯು ಹೌದು, ತನ್ನ ಮಗು ತಿಂದ ಅಹಾರವೆಲ್ಲ ಕಕ್ಕಿಬಿಡುತ್ತದಲ್ಲ ಎಂಬ ಬೇಸರವು ಹೌದು.

ಹಾಗದರೆ ಮಕ್ಕಳು ಏಕೆ ಕಕ್ಕುತ್ತವೆ?

ವಾಂತಿಯೆಂಬುದು ವಿಷಯುಕ್ತ ಆಹಾರ ಮತ್ತು ಹಲವು ಕೀಟಾಣು ಗಳನ್ನು ಹೊರ ಹಾಕುವ ದೈಹಿಕವಾದ ಸಹಜ ಕ್ರಿಯೆ! ಆದರೆ ಪದೇ ಪದೇ ವಾಂತಿ ಮಾಡುವುದು ತುಂಬಾ ಅಪಾಯಕಾರಿ ಮತ್ತು ಅದು ಯಾವುದೋ ಗಂಭೀರ ಪರಿಸ್ಥಿತಿಯ ಸೂಚನೆಯು ಆಗಿರಬಹುದು. ಮಕ್ಕಳು ತಿಂದ ನಂತರ ಕಕ್ಕುವುದಕ್ಕೇ ಸಾಕಷ್ಟು ಕಾರಣಗಳಿರುತ್ತದೆ. ಅದು ಜೀರ್ಣಾಂಗದಲ್ಲಿನ ಉರಿಯುವಿಕೆಯಿಂದ ಇರಬಹುದು ಅಥವಾ ತಿಂದ ಆಹಾರದ ಪ್ರತಿಕ್ರಿಯಿಂದ ಕೂಡ ಇರಬಹುದು.

ಮಕ್ಕಳ ದೈಹಿಕ ವ್ಯವಸ್ಥೆ ಇನ್ನೂ ಬೆಳವಣಿಗೆ ಹಂತದಲ್ಲಿ ರುವ ಕಾರಣ, ತಕ್ಷಣದ ಆಹಾರ ಅಥವಾ ರುಚಿಯ ಬದಲಾವಣೆಯಿಂದ ತಿಂದ ಆಹಾರವು ಜೀರ್ಣಿಸುವುದಿಲ್ಲ ಮತ್ತು ಅದೇ ವಾಂತಿಯ ರೀತಿ ಹೋರಬರುತ್ತದೆ. ಮಕ್ಕಳ ಹೊಟ್ಟೆಯಲ್ಲಿನ ಮಾಂಸ ಖಂಡವು ಇನ್ನೂ ಬೆಳೆಯುತ್ತಿರುವ ಕಾರಣ ಅದು ಇನ್ನೂ ಬಿಗಿಯಾಗಿರುವುದಿಲ್ಲ ಅದೇ ಕಾರಣಕ್ಕೆ ಕೆಲವು ಮಕ್ಕಳು ಊಟ ಮಾಡಿದ ತಕ್ಷಣ ಕಕ್ಕುಬಿಡುತ್ತವೆ.

ಕಕ್ಕುವುದು ಮಕ್ಕಳಲ್ಲಿ ಕಂಡುಬರುವ ಅತ್ಯಂತ ಸಹಜ ಕ್ರಿಯೆ ಇದಕ್ಕೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ. ನೀವು ಮಗುವಿಗೆ ಎಷ್ಟೇ ರುಚಿಯಾದ ಆಹಾರವನ್ನು ಕೊಟ್ಟರು ಕೂಡ ಅವು ಅದನ್ನು ಕಕ್ಕುತ್ತವೆ. ಇಲ್ಲಿ ಸಮಸ್ಯೆ ಇರುವುದು ಆಹಾರದಲಲ್ಲ ಸಮಸ್ಯೆ ಇರುವುದು ಮಕ್ಕಳ ದೈಹಿಕವಾದ ಕ್ರಿಯೆಯಲ್ಲಿ. ಮಗುವಿಗೆ 3 ವರ್ಷ ತುಂಬುವಷ್ಟರಲ್ಲಿ ಅದು ಕಕ್ಕುವುದನ್ನು ನಿಲ್ಲಿಸುತ್ತದೆ, ಈ ಸಂದರ್ಭದಲ್ಲಿ ಮಗುವಿನ ಹೊಟ್ಟೆಯ ಮಾಂಸ ಖಂಡಗಳು ಬೆಳೆದು ಅವುಗಳು ತಿಂದ ಆಹಾರವನ್ನು ಹಿಂದಕ್ಕೆ ಉಗುಳದ ರೀತಿಯಲ್ಲಿ ಹಿಡಿತ ಹೊಂದುತ್ತದೆ.

ಮಕ್ಕಳು ಕಕ್ಕದ ನಂತರ ಹೇಗೆ ಕಾಳಜಿವಹಿಸಬೇಕು?

ಹೇಗೆ ಯಂತ್ರೋಪಕರಣದಲ್ಲಿ ರೀ ಸೆಟ್‌‌ ಬಟನ್ ಹೊತ್ತಿದಕ್ಷಣ ಎಲ್ಲವು ಅಳಿಸಿ ಹೋಗುತ್ತದೆ ಅದೇ ರೀತಿ ಮನುಷ್ಯರು ತಿಂದದ್ದನೆಲ್ಲ ವಾಂತಿ ಮಾಡಿದ ನಂತರ ಸಂಪೂರ್ಣ ಹೊಟ್ಟೆ  ಖಾಲಿಯಾಗಿ ಬಿಡುತ್ತದೆ. ಇದರಿಂದ ಸಾಕಷ್ಟು ಆಯಾಸವಾಗುತ್ತದೆ. ಅದರಲ್ಲೂ ಮಕ್ಕಳು ಮತ್ತಷ್ಟು ಸುಸ್ತಾಗುತ್ತರೆ. ಅದಕ್ಕೆ ಮಗು ಕಕ್ಕಿದರೆ ಅದನ್ನು ಸಾಕಷ್ಟು ಕಾಳಜಿಯಿಂದ ನೋಡಿಕೊಳ್ಳುವುದಕ್ಕೇ ಇಲ್ಲಿದೆ ಕೆಲವು ಸಲಹೆ ಗಳು:

– ಮಕ್ಕಳಿಗೆ ಸಾಕಷ್ಟು ನೀರನ್ನು ಕೊಡಿ.

– ಆಗತ್ಯವಾದ ವಿಶ್ರಾಂತಿಯನ್ನು ಮಕ್ಕಳಿಗೆ ನೀಡಬೇಕು ಇದರಿಂದ ಮಕ್ಕಳು ಆಯಾಸದಿಂದ ಬಹು ಬೇಗನೆ ಚೇತರಿಸಿಕೊಳ್ಳುತ್ತದೆ.

– ಮಗು ಕಕ್ಕಿದ ನಂತರ ಮತ್ತೆ ತಕ್ಷಣ ತಿನ್ನಿಸುವ ಕೆಲಸ ಮಾಡಬೇಡಿ.

– ನಿಮ್ಮ ಮಗು 12 ಗಂಟೆಗಳ ಕಾಲ ತಿನ್ನದೆ ಇದ್ದರೆ ಹೆದರಬೇಡಿ, ಮಗುವಿಗೆ ಆದಷ್ಟು ಬೇಗ ಪುನಃ ಹಸಿವು ಕಾಣಿಸಿಕೊಳ್ಳುತ್ತದೆ ಆಗ ಮಗುವಿಗೆ ಅತ್ಯಂತ ರುಚಿಯಾದ ಮತ್ತು ಪೌಷ್ಟಿಕ ಆಹಾರವನ್ನು ನೀಡಿ ಮಗು ಸಂತೋಷದಿಂದ ಹೊಟ್ಟೆ ತುಂಬಾ ತಿನ್ನುತ್ತದೆ.

– ನಿಮ್ಮ ಮುದ್ದು ಮಗುವಿಗೆ ಸಾಕಷ್ಟು ಕಾಳಜಿ ಮತ್ತು ಮಮತೆಯಿಂದ ಪ್ರೀತಿ ತೋರಿಸಿ. ಇದರಿಂದ ನಿಮ್ಮ ಮಗು ಆಯಾಸದಿಂದ ಬಹು ಬೇಗನೆ ಚೇತರಿಸಿಕೊಳ್ಳುತ್ತದೆ.

Leave a Reply

%d bloggers like this: