ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ ಈ ಸರಳ ಉಪಾಯಗಳಿಂದ !

ಆಧುನಿಕ ಜೀವನ ಶೈಲಿ, ಒತ್ತಡ, ಮಾಲಿನ್ಯ ನಿಮ್ಮ ತ್ವಚೆಯನ್ನು ಮಂಕಾಗುವಂತೆ ಮಂಕಾಗುವಂತೆ ಮಾಡಿರಬಹುದು, ರಾಸಾಯನಿಕ ಪದಾರ್ಥಗಳನ್ನು ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಉಪಯೋಗಿಸದರೆ, ನಿಮ್ಮ ಸೂಕ್ಹ್ಮ ಚರ್ಮಕ್ಕೆ ಹಾನಿಯಾಗಬಹುದು ಅಥವಾ ಅದು ತುಂಬಾ ದುಬಾರಿಯಾಗಿರಬಹುದು ಅಥವಾ ದುಬಾರಿ ಪದಾರ್ಥಗಳೆಲ್ಲಾ ನಿಮ್ಮ ಸಮಸ್ಯೆಯನ್ನು ಪರಿಹರಿಸುವುದಿಲ್ಲ, ಅವುಗಳಿಂದ ಕೂಡ ಅಡ್ಡಪರಿಣಾಮ ಉಂಟಾಗಬಹುದು. ಆದ್ದರಿಂದ ಯಾವುದೇ ಅಡ್ಡಪರಿಣಾಮ  ಇಲ್ಲದೆ ನೈಸರ್ಗಿಕವಾಗಿ ಕಡಿಮೆ ಖರ್ಚಿನಲ್ಲಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

೧.ಕಪ್ಪು ಕಲೆಗಳು

ನಿಮಗೆ ಬೇಕಾಗಿರುವುದು

೧ ಚಮಚ ನಿಂಬೆ ರಸ

೧ ಚಮಚ ಜೇನು ತುಪ್ಪ

೧ ಚಮಚ ಬಾದಾಮಿ ಎಣ್ಣೆ

ಇದನ್ನು ಉಪಯೋಗಿಸುವುದು

೧.ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

೨.ಮಿಶ್ರಣವನ್ನು ಕಲೆಗಳಿರುವ ಜಾಗಕ್ಕೆ ಅನ್ವಯಿಸಿ, ೧೫ ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ.

೨.ಬ್ಲಾಕ್ ಹೆಡ್ಸ್

ಬೇಕಾಗಿರುವುದು

ಒಂದು ಮೊಟ್ಟೆ

ಒಂದು ಚಮಚ ಓಟ್ಸ್(ಜವೆ ಗೋಧಿ)

ಉಪಯೋಗಿಸುವುದು

೧.ಮೊಟ್ಟೆಯ ಒಳಭಾಗವನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಕಲಸಿ(ಬೀಟ್ ಮಾಡಿಕೊಳ್ಳಿ).

೨.ಇದಕ್ಕೆ ಓಟ್ಸ್ ಸೇರಿಸಿ ಚೆನ್ನಾಗಿ ಕಲಸಿ.

೩.ಕಲೆ ಇರುವ ಜಾಗಕ್ಕೆ ಇದನ್ನು ಅನ್ವಯಿಸಿ, ೧೫ ನಿಮಿಷದ ನಂತರ ತೊಳೆದುಕೊಳ್ಳಿ.

೩.ಸುಕ್ಕುಗಟ್ಟಿದ ಕಲೆ

ಬೇಕಾಗಿರುವುದು

ಪರಂಗಿ ಹಣ್ಣು

ಅಕ್ಕಿ ಹಿಟ್ಟು

ಮೊಸರು

ಬಳಸುವುದು

೧.ಒಂದು ಬಟ್ಟಲಲ್ಲಿ  ಪರಂಗಿ ಹಣ್ಣನ್ನು ಚೆನ್ನಾಗಿ ಕಿವುಚಿ, ಇದಕ್ಕೆ ಅಕ್ಕಿ ಹಿಟ್ಟು ಮತ್ತು ಮೊಸರನ್ನು ಸೇರಿಸಿ.

೨.ಪೇಸ್ಟ್ ತರಹ ಇದನ್ನ ತಯಾರಿಸಿಕೊಂಡು ಮುಖಕ್ಕೆ  ಅಥವಾ ಕಲೆ ಇರುವ ಜಾಗಕ್ಕೆ ಹಚ್ಚಿರಿ.

೩.೧೫ ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.

೪.ತ್ವಚೆಯ ಹೊಳಪನ್ನು ಹೆಚ್ಚಿಸಲು

ಬೇಕಾಗಿರುವುದು

೩ ಚಮಚ ಕಾಫಿ ಪುಡಿ

೧ ಚಮಚ ಕೊಬ್ಬರಿ ಎಣ್ಣೆ ಅಥವಾ ತೆಂಗಿನ ಹಾಲು

ಬಳಸುವುದು

೧.ಒಂದು ಬಟ್ಟಲಲ್ಲಿ ಕೊಬ್ಬರಿ ಎಣ್ಣೆ ಅಥವಾ ತೆಂಗಿನ ಹಾಲನ್ನು ಹಾಕಿ, ಇದಕ್ಕೆ ಕಾಫಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಿಸಿ.

೨.ಮಿಶ್ರಣವನ್ನು ತ್ವಚೆಗೆ ಹಚ್ಚಿ, ೧೫ ನಿಮಿಷಗಳ ಕಾಲ ತ್ವಚೆಯಲ್ಲೇ ಬಿಡಿ.

೩.ನಂತರ ಉಗುರು ಬೆಚ್ಚಗಿನ ನೀರಿನಿಂದ ತ್ವಚೆಯನ್ನು ತೊಳೆಯಿರಿ.

ಇವು ನೈಸರ್ಗಿಕ ವಿಧಾನವಾಗಿದ್ದು, ನಿಮಗೆ ತ್ವರಿತವಾಗಿ ಪರಿಣಾಮವನ್ನು ತೋರಿಸುವುದಿಲ್ಲ, ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇವು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತವೆ.

Leave a Reply

%d bloggers like this: