ನೀವು ಅರ್ಥಮಾಡಿಕೊಳ್ಳದ ನಿಮ್ಮ ಪತಿಯ 7 ಸ್ವಭಾವ ವಿಶೇಷತೆಗಳು

ಯಾವುದನ್ನು ಮುಕ್ತವಾಗಿ ಚರ್ಚಿಸದ ಗಂಡಸರನ್ನು ಅರ್ಥಮಾಡಿಕೊಳ್ಳುವುದು ಕೆಲವೊಮ್ಮೆ ದೊಡ್ಡ ಸವಾಲಾಗಿಯೇ ಉಳಿಯುವುದು. ಅವರ ಮನಸ್ಸನ್ನು ಕೊರೆಯುವ ಯಾವ ವಿಷಯಗಳ ಬಗ್ಗೆಯೂ ಅವರು ಹಂಚಿಕೊಳ್ಳುವುದೇ ಇಲ್ಲ. ಹಲವಾರು ಬಾರಿ ಚುಚ್ಚಿ ಚುಚ್ಚಿ ಕೇಳದಿದ್ದರೆ, ತನ್ನ ದಿನನಿತ್ಯದ ಅನುಭವವನ್ನು ಕೂಡ ಹೇಳುವುದಿಲ್ಲ.

ಗಾಬರಿಯಾಗದಿರಿ..। ಈ ಏಳು ಕಾರ್ಯಗಳನ್ನು ಪಾಲಿಸಿದರೆ ನಿಮ್ಮ ಜೀವನದ ಇನ್ನೋರ್ವ ಪ್ರಮುಖ ವ್ಯಕ್ತಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬಹುದು. 

(೧) ಅವರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ

ಸೂಕ್ಷ್ಮ ನಿರೀಕ್ಷಕರಾದ ನಿಮ್ಮವರು, ನಿಮ್ಮ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಾರೆ. ನೀವು ನಿರ್ವಹಿಸುವ ಪ್ರತಿಯೊಂದು ಚಿಕ್ಕ ಪುಟ್ಟ ಕಾರ್ಯಗಳನ್ನು ಅವರು ವೀಕ್ಷಿಸುತ್ತಾರೆ. ಅವರ ಹದ್ದಿನ ಕಣ್ಣುಗಳು ಸದಾ ಕಾಲ ನಮ್ಮನ್ನು ಹಿಂಬಾಲಿಸುತ್ತಿರುತ್ತದೆ. ಸುಂದರಿಯೊಬ್ಬಳು ಮುಂದೆ ಸಾಗಿದರೆ ನಿಮ್ಮ ಕಣ್ಣಿಗೆ ಅವಳು ಬೀಳುವ ಮೊದಲೇ ನಿಮ್ಮವರು ಅವಳತ್ತ ಕುಡಿನೋಟ ಬೀರಿರುತ್ತಾರೆ. 

(೨) ಅವರೊಬ್ಬ ಸ್ವಾಭಿಮಾನಿ

ಪುರುಷರಿಗೆ ಅವರ ‘ಅಹಂ’ ದೇವರು. ಆದರೆ ಅದು ಬಹಳ ಸುಲಭವಾಗಿ ಒಡೆದು ಹೋಗುವಂತಹವುಗಳು. ತಮಾಷೆಯೆಂದರೆ, ತಮ್ಮ ಅಹಂನಿಂದ ಹೊರಬರಲು ಪುರುಷರಿಗೇ ಸಾಧ್ಯವಾಗುವುದಿಲ್ಲ. ಆದಕಾರಣ ಅವರ ಅಹಂ ಅಥವಾ ‘ಈಗೋ’ ಘಾಸಿಗೊಳ್ಳದಂತೆ ನೀವು ವರ್ತಿಸಬೇಕಾಗುತ್ತದೆ. ‘ಅಹಂ’ನಿಂದ ಹೊರಬರಲು ಅವರು ಹಾಸ್ಯದ ಮೊರೆ ಹೋಗುತ್ತಾರೆ.

(೩) ಅವರ ತಾಯಿಯಂತೆ ವರ್ತಿಸದಿರಿ

ನೀವು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವಿದು. ಹೌದು…!! ನೀವು ಅವರ ಪ್ರೀತಿ,ಪ್ರೇಮ ,ಪ್ರಣಯ ಅವರ ಸಂಗಾತಿ ,ಸರ್ವಸ್ವ. ಆದರೆ ತಾಯಿಯಲ್ಲ..! ನಿಮ್ಮ ಮಾತೃತ್ವದ ಮಹಾಧಾರೆಯನ್ನು ನಿಮ್ಮ ಮಕ್ಕಳಲ್ಲಿ ತೋರಬಹುದು. ಆದರೆ ಗಂಡನ ಮೇಲಲ್ಲ. ನೆಚ್ಚಿನ ಸಂಗಾತಿಯಾಗಲು ಪ್ರಯತ್ನಿಸಿ. ಅವರ ತಾಯಿಯಾಗಲು ಸರ್ವಥಾ ಪ್ರಯತ್ನಿಸಬೇಡಿ.

(೪) ತಾರತಮ್ಯಗೊಳಿಸಬೇಡಿ

ರಿಯಲ್ ಲೈಫುಗಳು ರೀಲ್ ಲೈಫಿನಂತಿರುವುದಿಲ್ಲ. ಸಿನಿಮಾಗಳಲ್ಲಿ ತೋರಿಸುವಂತೆ ಪ್ರತಿದಿನವೂ ಸಂಗಾತಿಯಲ್ಲಿ I love you ಎಂದು ಹೇಳಬೇಕೆಂದೇನಿಲ್ಲ. ಆದರೆ ಅವರ ಪ್ರೇಮವನ್ನು ವ್ಯಕ್ತಪಡಿಸಲು ಅವರಿಗೆ ತನ್ನದೇ ಆದ ವಿಧಾನಗಳಿವೆ. ನಿಮ್ಮನ್ನು ಹೊರಗೆ ಕರೆದುಕೊಂಡು ಹೋಗುವುದು, ಹೂಗುಚ್ಛವನ್ನು ನೀಡುವುದು, ರೆಸ್ಟೋರೆಂಟ್ಗಳಲ್ಲಿ ಟ್ರೀಟ್ ನೀಡುವುದು-ಇದೆಲ್ಲಾ ಅವರ ಪ್ರೇಮವಲ್ಲದೆ ಇನ್ನೇನು…?

ನನ್ನನ್ನು ನಂಬಿರಿ ಸ್ತ್ರೀಯರೇ… ನಿಮ್ಮ ಪತಿಯು ನಿಮ್ಮನ್ನು ಬಹಳವಾಗಿ ಪ್ರೀತಿಸುತ್ತಾರೆ.

(೫) ಅವರನ್ನು ತಿದ್ದಲು ಪ್ರಯತ್ನಿಸದಿರಿ.

ಅವರನ್ನು ತಿದ್ದಲು ನೀವು ಮಾಡುವ ಪ್ರಯತ್ನ ಅವರ ಅಹಂ ಅನ್ನು ಘಾಸಿಗೊಳಿಸುವುದು. ಗಂಡಸರ ದೃಷ್ಟಿಕೋನ ಸ್ತ್ರೀಯರಿಗಿಂತ ಭಿನ್ನವಾಗಿರುವುದು ಸ್ತ್ರೀಯರು ಎಲ್ಲಾ ಕಾರ್ಯಗಳನ್ನು ತಮ್ಮ ಮೂಗಿನ ನೇರಕ್ಕೇ ಆಲೋಚಿಸುತ್ತಾರೆ. ಆದರೆ ಪುರುಷರು ಹಾಗಲ್ಲ. ತಾನು ಕೈ ಹಾಕುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸುಗಳಿಸಲೇಬೇಕೆಂಬ ಸಂಕಲ್ಪವಿರುತ್ತದೆ. ಅವರಿಗೆ ನೀವು ಸಲಹೆಗಳನ್ನು ಅಥವಾ ಸೂಚನೆಗಳನ್ನು ನೀಡಬಹುದು. ಆದರೆ ತಿದ್ದುವ ಪ್ರಯತ್ನ ಮಾತ್ರ ಬೇಡ. “ತಾನೇನನ್ನು ಮಾಡುತ್ತಿದ್ದೇನೆ”-ಎಂದು ಅವರಿಗೆ ಖಂಡಿತಾ ತಿಳಿದಿದೆ.

(೬) ತಮ್ಮ ಮನೋಭಾವಕ್ಕನುಗುಣವಾಗಿ ಕಾರ್ಯಗಳನ್ನು ಮಾಡುವರು

ಕೆಲವೊಮ್ಮೆ ನೀವು-“ನಾನೇನು ಮಾಡಬೇಕು” ಎಂದು ತೋಚದೆ ಅಥವಾ “ಅವರಿಗೆ ಇಷ್ಟವಾಗುವುದೋ”… ಎಂಬ ಗೊಂದಲಕ್ಕೊಳಗಾಗಿರಬಹುದು.ಮೊದಲಿಗೆ ಅವರಿಗೇನು ಇಷ್ಟವಾಗುವುದಿಲ್ಲವೆಂದು ತಿಳಿಯುವ ಪ್ರಯತ್ನ ಮಾಡಿರಿ.ನಂತರ ಅವರ ಇಚ್ಛೆ ಹಾಗೂ ಆನೆಗಳ ಬಗ್ಗೆ ನಿರ್ಧರಿಸಬಹುದು. ಅವರು ಕೆಲವೊಮ್ಮೆ ಬಿರಿಯಾಣಿಗಿಂತಾ ಪಿಜ್ಜಾ಼, ಕ್ರಿಕೆಟ್ ಗಿಂತ ಫುಟ್ಬಾಲ್ ಅನ್ನು ಇಷ್ಟಪಡುತ್ತಿರಬಹುದು. ಅವರ ಅಭಿರುಚಿಗಳನ್ನು ಮೆಚ್ಚಿ ಸ್ವಾಗತಿಸಿ. ಅಲ್ಲದೇ ವಿಮರ್ಶಿಸಲು ಹೋಗಬೇಡಿ.

(೭) ಪ್ರಣಯವು ಗಾಳಿಯಲ್ಲಿ ಹಾರಾಡಲಿ

ನಿಮ್ಮ ಪತಿಯು ನಿಮ್ಮನ್ನು ಗೌರವಿಸುತ್ತಾರೆ. ನೀವು ಎಷ್ಟೊಂದು ಅದ್ಭುತವಾಗಿದ್ದೀರೆಂದು ಅಚ್ಚರಿಪಟ್ಟುಕೊಳ್ಳುವ ಅವರು, ನಿಮ್ಮ ಸಾಮರ್ಥ್ಯ ಹಾಗೂ ಅಭಿರುಚಿಗಳನ್ನು ಬಲ್ಲರು. ನಿಮ್ಮ ಇನ್ನೊಂದು ಭಾಗವನ್ನು ತಿಳಿದಿರುವ ಅವರು ನಿಮ್ಮನ್ನು ಖಂಡಿತಾ ಮೂದಲಿಸಲಾರರು.

Leave a Reply

%d bloggers like this: