ನೀವು ನಿಮ್ಮ ಮಗುವಿಗೆ ಬೇಕಿರುವುದಕ್ಕಿಂತ ಹೆಚ್ಚು ಎದೆಹಾಲು ನೀಡುತ್ತಿರುವ 5 ಸೂಚನೆಗಳು

ಮಗುವನ್ನು ಬಹಳವಾಗಿ ಪ್ರೀತಿಸುವ ತಾಯಿಯರು ಮಗುವು ಹೊತ್ತು ಹೊತ್ತಿಗೆ ಸರಿಯಾಗಿ ಹೊಟ್ಟೆ ತುಂಬಾ ತಿನ್ನಬೇಕೆಂದು ಬಯಸುತ್ತಾರೆ. ಮಗುವನ್ನು ‘ಗುಂಡುರಾಮ’ನಂತಾಗಿಸುವ ಆಸೆಯಿಂದ ಮಗುವಿಗೆ ಚೆನ್ನಾಗಿ ಆಹಾರವನ್ನು ತುರುಕುತ್ತಿರಬಹುದು. ಅತಿ ಕಡಿಮೆ ಆಹಾರ ಸೇವನೆಯು ಹೇಗೆ ಆರೋಗ್ಯಕ್ಕೆ ಒಳ್ಳೇದಲ್ಲವೋ, ಅದೇ ರೀತಿ ಹೆಚ್ಚಿನ ಪ್ರಮಾಣದ ಆಹಾರ ಸೇವನೆಯೂ ಒಳ್ಳೆಯದಲ್ಲ.

ಮಗುವಿಗೆ ಸಮತೋಲನ ಆಹಾರ ನೀಡುವುದು ಅತಿ ಅಗತ್ಯ. ಆದರೆ ಮಗುವಿಗೆ ನಿಜವಾಗಿಯೂ ಅಗತ್ಯವಿಲ್ಲದ ಆಹಾರದ ಅತಿಯಾದ ಸೇವನೆಯಿಂದ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲವೆನ್ನುವುದರ ಬಗ್ಗೆಯೂ ಎಚ್ಚರ ವಹಿಸಬೇಕಾಗುತ್ತದೆ. ಮಗುವಿಗೆ ಏನನ್ನು ನೀಡಬೇಕೆನ್ನುವುದರ ಬಗ್ಗೆ ಗೊಂದಲವಿದ್ದರೆ ಮಕ್ಕಳ ತಜ್ಞರ ಸಲಹೆಯನ್ನು ಸ್ವೀಕರಿಸಬಹುದು.

ನೀವು ನೀಡುವ ಆಹಾರವು ಮಗುವಿಗೆ ಅತಿಯಾಗುತ್ತಿದೆ ಎನ್ನುವುದರ ಕೆಲವು ಸೂಚನೆಗಳು

(೧) ಕುಡಿದ ಹಾಲಿನ ಹೊರ ಕಕ್ಕುವಿಕೆ

ನಮ್ಮ ಮಗುವಿನ ಆಹಾರವೂ ಹಾಲು ಮತ್ತು ಇತರ ದ್ರವಾಹಾರಗಳನ್ನು ಒಳಗೊಂಡಿದೆ. ಮಕ್ಕಳ ಶರೀರವು ಕಡ್ಡಾಯವಾಗಿ ಈ ಆಹಾರಗಳಿಂದಲೇ ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಮಗುವು ಹಾಲು ಕುಡಿದ ಮೇಲೆ ನಿಮ್ಮ ತೋಳಿನ ಮೇಲೆ ಮಲಗಿಸಿ ನಿಧಾನವಾಗಿ ಮಗುವಿನ ಬೆನ್ನು ತಟ್ಟಿ ತೇಗಿಸಬೇಕು. ತೇಗಿದ ಬಳಿಕ ಮಗುವಿನ ಬಾಯಿಯಿಂದ ಸ್ವಲ್ಪ ಹಾಲು ಹೊರಬರುತ್ತದೆ. ಇದನ್ನು ರಿಗರ್ಗಿಡೇಷನ್ ಎಂದು ಕರೆಯುತ್ತಾರೆ. ಇದು ಸ್ವಾಭಾವಿಕ .ಆದರೆ ತೇಗಿಸಿದ ಬಳಿಕವೂ, ಮಗುವು ಹೊಟ್ಟೆಯಲ್ಲಿದ್ದುದ್ದನ್ನೆಲ್ಲ ವಾಂತಿ ಮಾಡಿದರೆ ನೀವು ಮಗುವಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಮೊಲೆಯೂಡಿಸಿರುವಿರೆಂದು ತಿಳಿದುಕೊಳ್ಳಬೇಕು.

(೨) ದಿನಕ್ಕೆ ೮ ಅಥವಾ ಹೆಚ್ಚಿನ ಮೂತ್ರದ ವಸ್ತ್ರಗಳು

ಮಗುವಿನ ಅಧಿಕ ಪ್ರಮಾಣದ ಆಹಾರವೂ ದ್ರವಾಹಾರವಾಗಿರುವುದೆನ್ನುವುದು ನಿಮ್ಮೆಲ್ಲರಿಗೂ ತಿಳಿದಿದೆ. ಶರೀರಕ್ಕೆ ದ್ರವಾಂಶವು ಅತಿ ಅಗತ್ಯ.ಆದರೆ ಶರೀರದಲ್ಲಿ ಸಂಗ್ರಹವಾದ ದ್ರವಾಂಶವು ಮೂತ್ರದ ರೂಪದಲ್ಲಿ ಹೊರ ಹಾಕಲ್ಪಟ್ಟಿದ್ದರೆ,ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ಮೊಲೆಯೂಡಿಸುತ್ತಿದ್ದೀರಿ ಎಂದರ್ಥ. ಮಗುವು ಸರಾಸರಿ ಬಳಸುವ ಡಯಾಪರ್ ಗಿಂತ ಹೆಚ್ಚಿನ ಡಯಾಪರ್ ಬಳಕೆ ಮಾಡಬೇಕಾಗಿ ಬಂದಾಗ, ನಿಮ್ಮ ಮಗುವಿಗೆ ನೀಡುವ ಆಹಾರ ಕ್ರಮಗಳನ್ನು ಬದಲಾಯಿಸಬೇಕಾಗುತ್ತದೆ. 

(೩) ಅಸ್ವಸ್ಥತರಾಗಿ ಕಂಡುಬಂದರೆ

ಮಗುವಿನ ಹೊಟ್ಟೆಯ ಯಾವತ್ತು ‘ಡುಂ’ ಎಂದಿದ್ದರೆ ಅವರಿಗೆ ಮಲಗಲು ಅಥವಾ ಉಸಿರಾಡಲು ಕಷ್ಟವಾಗುವುದು.ಇದು ಮಕ್ಕಳನ್ನು ಅಸ್ವಸ್ಥರನ್ನಾಗಿಸುವುದು ಹಾಗೂ ರಾತ್ರಿಯ ಸುಂದರ ನಿದ್ರೆಯಿಂದ ಮಗುವನ್ನು ದೂರವಿರಿಸುವುದು. ಪೂರ್ಣ ಪ್ರಮಾಣದ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಯಾಗದ ಮಗುವು ಉಸಿರಾಟದ ತೊಂದರೆಯನ್ನು ಅನುಭವಿಸುವುದು ಖಂಡಿತ ಆರೊಗ್ಯಕರ ಬೆಳವಣಿಗೆಯಲ್ಲ. ಮಗುವಿಗೆ ಜ್ವರ, ಹಸಿವೆ ಅಥವಾ ಇನ್ಯಾವುದೇ ಅನಾರೋಗ್ಯವಿಲ್ಲದಿದ್ದರೂ ತೀರಾ ಕಿರಿಕಿರಿಯನ್ನು ಅಭವಿಸುತ್ತಿದ್ದರೆ, ಅದು ಕೆಲವೊಮ್ಮೆ ಅತಿ ಆಹಾರದ ಸೇವನೆಯಿಂದಾಗಿರಬಹುದು.

(೪) ದೊಡ್ಡ ತೇಗು

ಹೊಟ್ಟೆಯಲ್ಲಿರುವ ವಾಯುವು ಬಾಯಿಯ ಮೂಲಕ ಹೊರ ಹೋಗುವಾಗ ದೊಡ್ಡ ಶಬ್ದ ಉಂಟಾಗುವುದನ್ನು ‘ತೇಗು’ ಎಂದು ಕರೆಯುತ್ತೇವೆ. ಅತಿಯಾದ ಆಹಾರ ಸೇವನೆಯಿಂದ ಮಗುವಿನ ಆಹಾರ ಕೊಳವೆಯು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮುಚ್ಚಲ್ಪಡುವುದರಿಂದ ಗಾಳಿ ಕೊಳವೆಯು ಪ್ರವತ್ತಿಸಲ್ಪಡಬೇಕಾಗುತ್ತದೆ. ಇದರಿಂದ ಗಟ್ಟಿಯಾದ ಶಬ್ದ ಉಂಟಾಗುತ್ತದೆ.ಕೆಲವೊಮ್ಮೆ ಕಫ ಕಟ್ಟಿದ್ದರೆ ಕೂಡ ಈ ರೀತಿ ಆಗುವುದುಂಟು. ಆದರೆ ಯಾವುದಕ್ಕೂ ವೈದ್ಯರನ್ನು ಭೇಟಿಯಾಗುವುದೊಳ್ಳೆಯದು.

(೫) ಮಗುವಿನ ಅಧಿಕ ತೂಕ

ಆರೋಗ್ಯಕರವಾಗಿ, ದಷ್ಟಪುಷ್ಟವಾಗಿರುವ ಮಗುವು ನಮಗೆ ಸಂತೋಷವನ್ನು ನೀಡುತ್ತದೆ. ಆದರೆ ಮಗುವಿನ ದಢೂತಿಕಾಯವು ಹಲವಾರು ಆರೋಗ್ಯ ಸಂಬಂಧಿತ ತೊಂದರೆಯನ್ನುಂಟು ಮಾಡುತ್ತದೆ. ನಿಮ್ಮ ಮಕ್ಕಳ ತಜ್ಞರನ್ನು ಭೇಟಿ ಆಗುವುದರಿಂದ ಮಗುವಿಗೆ ಶರೀರ ಗಾತ್ರವು ಅಗತ್ಯಕ್ಕಿಂತಲೂ ಹೆಚ್ಚಾಗಿ ಬೆಳೆಯುತ್ತದೆಯೇ ಎಂದು ಪರೀಕ್ಷಿಸಬಹುದು. ಮಗುವಿನ ಶರೀರ ತೂಕವು ಮಕ್ಕಳ ಸರಾಸರಿ ಭಾರಕ್ಕಿಂತ ಹೆಚ್ಚಾಗಿದ್ದರೆ, ಬುದ್ಧಿವಂತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.

Leave a Reply

%d bloggers like this: