ಮಗುವಿಗೆ ನಾನು ನೀಡುವ ಎದೆಹಾಲು ಸಾಕಾಗುತ್ತದೆಯೇ?

ನವಜಾತ ಶಿಶುಗಳ ಬೆಳವಣಿಗೆಗೆ ಪೋಷಕಾಂಶಗಳು ಅತಿ ಅಗತ್ಯ.ಆರು ತಿಂಗಳು ಪ್ರಾಯವಾಗುವವರೆಗೆ ಎದೆಹಾಲನಲ್ಲದೇ ಬೇರೆ ಯಾವ ಆಹಾರಗಳನ್ನು ನೀಡದೆ, ಮಗುವಿಗೆ ಅಗತ್ಯವಾದ ಪೋಷಕಾಂಶಗಳು ಲಭಿಸುತ್ತದೆ ಎಂದು ಖಾತರಿಪಡಿಸಿಕೊಳ್ಳುವುದು ಹೇಗೆ ?

ಅಳತೆ ಮಾಡಿ ಅಥವಾ ಬಾಟಲಿಗಳಲ್ಲಿ ಎದೆಹಾಲನ್ನು ನೀಡದ ಕಾರಣ ಮಗು ಎಷ್ಟು ಪ್ರಮಾಣದಲ್ಲಿ ಎದೆ ಹಾಲು ಕುಡಿದಿದೆಯೆಂದು ಅಂದಾಜಿಸಲು ಖಂಡಿತ ಅಸಾಧ್ಯ. ಮಗುವಿಗೆ ಹಸಿವಾದಾಗ ಅಥವಾ ಹೊಟ್ಟೆ ತುಂಬಿದಾಗ ಮಗುವು ಬಾಯ್ಬಿಟ್ಟು ಕೇಳಿರುತ್ತಿದ್ದರೇ ಎಂದು ನೀವೂ ಅಂದುಕೊಂಡಿರಬಹುದು.

(೧) ಮಗುವಿನ ಶರೀರ ತೂಕವನ್ನು ಆಗಾಗ ಪರೀಕ್ಷಿಸುತ್ತಿರಿ

ಮಗುವಿನ ಶರೀರ ಭಾರದಿಂದ ಮಗುವಿಗೆ ಸಾಕಷ್ಟು ಮೊಲೆ ಹಾಲು ಲಭಿಸುತ್ತಿದೆಯೇ ಎಂದು ತಿಳಿದುಕೊಳ್ಳಬಹುದು !! ಜನಿಸಿದ ೧೦ ರಿಂದ ೧೪ದಿನಗಳ ಬಳಿಕ ಮಗುವಿನ ಶರೀರ ತೂಕವು ವರ್ಧಿಸಲ್ಪಡುತ್ತದೆ. ನಂತರ ಕೆಲವು ತಿಂಗಳುಗಳಲ್ಲಿ ಪ್ರತಿದಿನವೂ ೨೮ಗ್ರಾಂಗಳಷ್ಟು ತೂಕ ಹೆಚ್ಚಾಗಲ್ಪಡುತ್ತದೆ.

ಮಗುವಿನ ಜನನ ತೂಕಕ್ಕಿಂತ,೫ ರಿಂದ ೧೦% ಮೊದಲ ವಾರಗಳಲ್ಲಿ ಮಗುವು ಕಳೆದುಕೊಳ್ಳುತ್ತದೆ ಎಂದು ಖಂಡಿತಾ ಮರೆಯದಿರಿ. ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ಪೀಡಿಯಾಟ್ರಿಷನ್ (ಮಕ್ಕಳತಜ್ಞರ )ಸಹಾಯದಿಂದ ಮಕ್ಕಳ ಬೆಳವಣಿಗೆ ಅಥವಾ ಶರೀರ ತೂಕದ ಬಗ್ಗೆ ನಿಗಾ ವಹಿಸುತ್ತಿರಿ.

(೨) ಮಗುವಿನ ಮಲವಿಸರ್ಜನೆಯ ಬಗ್ಗೆ ನಿಗಾ ವಹಿಸಿ

ಪ್ರತಿ ಬಾರಿ ಮೊಲೆಯುಣಿಸಿದ ಬಳಿಕ ಮಗುವು ವಿಸರ್ಜಿಸುತ್ತಿದ್ದರೆ, ಎಂದರೆ ಪ್ರತಿ ದಿನ ೧೨ ಬಾರಿ ಆದರೂ ಮಗುವಿನ ಚಡ್ಡಿಗಳನ್ನು ಬದಲಾಯಿಸಬೇಕೆಂದಾದರೆ,ಮಗುವು ೬ ರಿಂದ ೮ ಬಾರಿ ಬಣ್ಣರಹಿತವಾದ ಮೂತ್ರ ಹಾಗೂ ಎರಡರಿಂದ ಐದು ಬಾರಿ ಬೀಜಗಳಂತೆ, ತೆಳುವಾದ,ಮೆಂತೆ ಬಣ್ಣದ ಮಲವನ್ನು ವಿಸರ್ಜಿಸಿದರೆ ಮಗುವು ತಾನು ಕುಡಿದ ಎದೆಹಾಲನ್ನು ಪೂರ್ಣ ಪ್ರಮಾಣದಲ್ಲಿ ಜೀರ್ಣಿಸಲು ಸಮರ್ಥವಾಗಿದೆ ಎನ್ನುವುದರ ಸೂಚಕ. ಎರಡು ತಿಂಗಳಿಗೆ ಕಾಲಿರಿಸಿದಂತೆ ಮಗುವಿನ ಮಲವಿಸರ್ಜನೆಯ ಆವರ್ತನೆಯೂ ಕಡಿಮೆಯಾಗಿ, ಕೆಲವೊಮ್ಮೆ ದಿನಕ್ಕೆ ಒಂದು ಸಲಕ್ಕಿಂತಲೂ ಕಡಿಮೆಯಾಗುವುದು.

(೩)ಮಗುವಿನ ಮಾನಸಿಕಾವಸ್ಥೆಯನ್ನು ಅವಲಂಬಿಸಿದಂತೆ

ಭೋಜನ ಸೇವನೆಯ ಬಳಿಕ ಹಿರಿಯರು ಆಯಾಸಗೊಳ್ಳುವಂತೆ, ಮಗುವು ಎದೆ ಹಾಲು ಸೇವನೆಯ ಬಳಿಕ ಕ್ಷೀಣಿತರಾಗುತ್ತಾರೆ. ಕೆಲವೊಮ್ಮೆ ಮಗುವು ನಿದ್ರೆಯ ತೆಕ್ಕೆಗೂ ಜಾರಬಹುದು. ತೇಗು ಅಥವಾ ಎದೆ ಹಾಲನ್ನು ಕುಡಿಯಲು ನಿರಾಸಕ್ತಿ ತೋರುವುದು ಕೂಡ ಮಗುವಿನ ಹೊಟ್ಟೆ ತುಂಬಿದೆ ಎನ್ನುವುದಕ್ಕೆ ಕುರುಹು. ಮಗುವಿನ ಅಗತ್ಯಗಳು ಪೂರೈಕೆಯಾದಾಗ ಅವುಗಳು ಸಂತೃಪ್ತರಂತೆ ಕಂಡು ಬರುತ್ತದೆ. 

(೪) ನಿಮ್ಮ ಶರೀರವನ್ನೂ ನಿರೀಕ್ಷಿಸಿ

ನಿಮ್ಮ ಸ್ತನದ ಗಾತ್ರವು ನಿಮ್ಮ ಮಗುವಿಗೆ ಅಗತ್ಯ ಪ್ರಮಾಣದಲ್ಲಿ ಎದೆ ಹಾಲು ಲಭಿಸುತ್ತದೆಯೋ ಎನ್ನುವುದನ್ನು ಸೂಚಿಸುತ್ತದೆ. ಸ್ತನಪಾನ ಮಾಡಿದ ಬಳಿಕವೂ ಸ್ತನವು ಗಡುಸಾಗಿದ್ದರೆ, ಮಗುವಿಗೆ ಸಾಕಷ್ಟು ಎದೆಹಾಲು ಲಭಿಸುತ್ತಿಲ್ಲವೆಂದೂ, ಸ್ತನವು ಗಾಳಿ ಹೋದ ಬಲೂನಿನಂತಾಗಿದ್ದರೆ, ಮಗುವಿನ ಹೊಟ್ಟೆ ತುಂಬಿತೆಂದು ತಿಳಿದುಕೊಳ್ಳಬಹುದು.

(೫) ಎಚ್ಚರಿಕೆಯ ಕರೆಗಂಟೆಗಳು

ಸ್ತನವೂಡಿಸಿದ ಬಳಿಕವೂ ಮಗುವು ಅಳುತ್ತಿದ್ದರೆ, ೪೫ ಮಿನಿಟುಗಳಿಗಿಂತಲೂ ಹೆಚ್ಚು ಕಾಲ ಮಗುವು ಸ್ತನವನ್ನು ಚೀಪುತ್ತಿದ್ದರೆ ಅಥವಾ ಮೂತ್ರವು ದುರ್ಗಂಧ ಪೂರಿತವಾಗಿದ್ದರೆ ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಎದೆಹಾಲು ಲಭಿಸುತ್ತಿಲ್ಲವೆಂದು ತಿಳಿದುಕೊಳ್ಳಬೇಕು

 ಸೂಚನೆ :ಅಗತ್ಯವಿದ್ದರೆ ವಿಟಾಮಿನ್ಗಳನ್ನು ನೀಡುವಂತಹ ಬದಲೀ ಆಹಾರಗಳನ್ನು ನೀಡಬಹುದು. ಮಗುವಿಗೆ ಅಗತ್ಯವಿರುವ ಎಲ್ಲ ಅಗತ್ಯ ಪೋಷಕಾಂಶಗಳು ತಾಯಿಯ ಎದೆಹಾಲಿನಲ್ಲಿ ಅಡಗಿದೆ. ಆದರೆ ಮಗುವಿಗೆ ನಿಮ್ಮ ಎದೆಹಾಲು ಸಾಕಾಗುವುದಿಲ್ಲವೆಂದಾದರೆ, ಹೆಚ್ಚಿನ ಪೋಷಕಾಂಶಗಳನ್ನು ನೀಡುವ ಬದಲೀ ಆಹಾರಗಳನ್ನು ತಿನ್ನಿಸಬಹುದು. ಮಗುವಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ತಾಯಿಯ ಎದೆಹಾಲಿನಲ್ಲಿ ಅಡಗಿದೆ. ಆದರೆ ಮಗುವಿಗೆ ನಿಮ್ಮ ಎದೆಹಾಲು ಸಾಕಾಗುವುದಿಲ್ಲವೆಂದಾದರೆ ಹೆಚ್ಚಿನ ಪೋಷಕಾಂಶಗಳು ಲಭಿಸುವಂತೆ, ವೈದ್ಯರ ಶಿಫಾರಿಸ್ಸಿನ ಮೇರೆಗೆ,ವಿಟಾಮಿನ್ ಡಿ ಮಾತ್ರೆಗಳನ್ನು ಬಾಯಿಯ ಮೂಲಕವೂ, ತಾಯಿಗೆ ವಿಟಾಮಿನ್ ಬಿ ೧೨ನ್ನು ನೀಡಬಹುದು.

ತಾಯಿಯರೇ, ನಿಮ್ಮ ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುವ ನಿಮ್ಮ ಶರೀರದ ಬಗ್ಗೆ ಅಭಿಮಾನ ಬೆಳೆಸಿ ಹಾಗೂ ನಂಬಿರಿ.ಕೈತುಂಬಾ ಅಗತ್ಯದ ವಿವರಗಳನ್ನು ತಿಳಿದುಕೊಂಡಿರಲ್ಲವೇ… ಇನ್ನು ಇಂತಹ ವಿವರಗಳಿಗಾಗಿ ಕಾತುರದಿಂದ ಕಾಯುತ್ತಿರುವವರಿಗೂ ನಿಮ್ಮ ಈ ಸಂದೇಶವನ್ನು ತಲುಪಿಸಿ.

Leave a Reply

%d bloggers like this: