ಮಗುವು ಉದರದೊಳಗೆ ಒದೆಯುವುದಕ್ಕೆ (ಬೇಬಿ ಕಿಕ್ಸ್) 7 ಮನಮೋಹಕ ಕಾರಣಗಳು

ಪ್ರತಿ ಸ್ತ್ರೀಯರ ಜೀವನದಲ್ಲೂ ಗರ್ಭ ಕಾಲವೆನ್ನುವುದು ಅತ್ಯಂತ ಆಹ್ಲಾದಕರ ಸಮಯ. ಮೊದಲ ತಿಂಗಳಾಗಿರಲಿ ಅಥವಾ ಐದನೇ ತಿಂಗಳಿರಲಿ ಮಗುವು ಒದೆಯುವಾಗಿನ ಕಚಗುಳಿಯ ಅನುಭವವು ಪ್ರತಿ ತಾಯಿಯೂ ಅನುಭವಿಸುವ ವರದಾನಾವೇ ಹೌದು. ಮಗುವಿನ ಎಲ್ಲಾ ಚಟುವಟಿಕೆಗಳ ಅನುಭವ ನಿಮಗೆ ಸಿಗಲಾರದು. ಆದರೆ, ಒದೆ ಮಾತ್ರ ನಿಮಗೆ ಸೀಮಿತ. ಗರ್ಭದೊಳಗಿರುವ ಮಗುವಿನ ಚಲನೆಯನ್ನು ತಾಯಿಯು ಅನುಭವಿಸುವುದನ್ನು ಕ್ವಿಕ್ಕೆನಿಂಗ್ ಎಂದು ಕರೆಯುತ್ತಾರೆ. ಇದು ಮಗುವು ಆರೋಗ್ಯಯುತವಾಗಿದೆಯೆನ್ನುವುದಕ್ಕೂ, ಚಟುವಟಿಕೆಯಿಂದ ಕೂಡಿದೆ ಎನ್ನುವುದಕ್ಕೂ ಕುರುಹು.

ಮಗುವಿನ ಒದೆತಕ್ಕೆ ಕಾರಣವಾಗಿರುವ ಆರು ಸಂಗತಿಗಳ ಬಗ್ಗೆ ತಿಳಿಯೋಣ ಬನ್ನಿ.

(೧) ಹವಾಮಾನ ಬದಲಾವಣೆ

ವಾತಾವರಣದ ಬದಲಾವಣೆಗೆ ಅನುಗುಣವಾಗಿ, ಮಕ್ಕಳ ಒದೆಯೂ ಬದಲಾಗುವುದು ತಾಯಿಗೆ ಅನುಭವವಾಗುತ್ತದೆ. ತಾಯಿಯು ಆಹಾರ ಸೇವಿಸುವಾಗ, ಗಟ್ಟಿಯಾದ ಶಬ್ದ ಮತ್ತು ಇತರ ಕಾರ್ಯಗಳಿಂದಾಗಿ ಗರ್ಭದೊಳಗಿರುವ ಮಗುವು ಪ್ರತಿಕ್ರಿಯಿಸುವುದರ ಪರಿಣಾಮವಾಗಿ,ತಾಯಿ ಒದೆತವನ್ನು ಅನುಭವಿಸುತ್ತಾರೆ. ಈ ಒದೆಯೆನ್ನುವುದು ತೀರಾ ಸಾಮಾನ್ಯ. ಅದಕ್ಕಾಗಿ ನೀವು ಗಾಬರಿಪಡಬೇಕಾದ್ದಿಲ್ಲ. 

(೨) ಎಡಭಾಗದ ನಿದ್ರೆ

ತಾಯಿಯು ಎಡಭಾಗಕ್ಕೆ ಹೊರಳಿ ಮಲಗಿದರೆ ಮಗುವು ಆಗಾಗ ಒದೆಯುವ ಅನುಭವವಾಗುವುದು. ಎಡಭಾಗಕ್ಕೆ ಹೊರಳಿದಾಗ ಮಗುವಿಗೆ ಧಾರಾಳವಾಗಿ ರಕ್ತದ ಪೂರೈಕೆಯಾಗುವುದರಿಂದ ಮಗುವಿನ ಚಲನವಲನಗಳಿಗೆ ಪೂರಕವಾಗಿ ಪರಿಣಮಿಸುವುದರಿಂದ ಮಗುವು ಚಟುವಟಿಕೆಯಿಂದಿರುವುದು. 

(೩) ಸಂತೃಪ್ತ ಹೊಟ್ಟೆ

ತಾಯಿಯು ಹೊಟ್ಟೆ ತುಂಬಾ ಆಹಾರಗಳನ್ನು ಸೇವಿಸುವುದರಿಂದ, ಅಗತ್ಯವಾದ ಪೋಷಕಾಂಶಗಳನ್ನು ಲಭಿಸಿರುವ ಮಗುವು ಸಂತೋಷವಾಗಿರುವುದು ಹಾಗೂ ಚಟುವಟಿಕೆಯಲ್ಲಿರುವುದು.

(೪) ಕಡಿಮೆ ಪ್ರಮಾಣದ ಒದೆತ, ಅಪಾಯದ ಮುನ್ಸೂಚನೆ

ಮಗುವು ಸರಾಸರಿ ೧೫ -೨೦ ಬಾರಿ ಒದೆಯುತ್ತದೆ. ಕಡಿಮೆ ಪ್ರಮಾಣದ ಒದೆತವು ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗದಿರುವ ಸೂಚನೆ ನೀಡುವುದು. ಮಗುವಿನ ಒದೆತದ ಪ್ರಮಾಣವು ಕಡಿಮೆಯಾಗಿರುವುದರ ಅನುಭವವಾದರೆ, ಕೂಡಲೇ ಸವಿಸ್ತಾರವಾದ ಅಲ್ಟ್ರಾಸೌಂಡ್ ಪರಿಶೋಧನೆ ಮಾಡಬೇಕು. ಈ ರೀತಿಯ ಪರಿಶೋಧನೆಯಿಂದ ಲಭಿಸುವ ಮಾಹಿತಿಗನುಗುಣವಾಗಿ ಮಗುವಿನ ಜನನದ ರೀತಿಯನ್ನೂ ನಿರ್ಣಯಿಸಬೇಕಾಗಬಹುದು

(೫) ೩೬ ವಾರಗಳ ಬಳಿಕ ಇಳಿಮುಖವಾಗುವ ಒದೆತದ ಪ್ರಮಾಣ

ಪ್ರಸವದ ತಾರೀಕು ಹತ್ತಿರವಾಗುತ್ತವಾಗುತ್ತಿರುವಂತೆ, ಮಗುವಿನ ಒದೆತದಿಂದ ಪಾರಾಗಬಹುದೆಂಬ ನಿರೀಕ್ಷೆಯೇನೂ ಬೇಡ. ಆದರೆ ಮಗುವು ಸಂಪೂರ್ಣವಾಗಿ ಬೆಳವಣಿಗೆಯಾಗಿರುವುದರಿಂದ ಒದೆತದ ಪ್ರಮಾಣವು ಕಡಿಮೆಯಾಗಬಹುದು. ಮಗುವು ಯೋನಿಯ ಕಡೆಗೆ ಚಲಿಸಲಾರಂಭಿಸಿದುದರಿಂದ ರಿಬ್ (ಸೊಂಟ) ಅಥವಾ ಅದರ ಅಡಿಭಾಗದಲ್ಲಿ ಒದೆತವನ್ನು ಅನುಭವಿಸುವಿರಿ.

(೬) ಒದೆತದ ಎಣಿಕೆ

ಮಗುವಿನ ಚಲನವಲನಗಳ ಬಗ್ಗೆ ಯಾವುದೇ ನಿಗಾ ವಹಿಸಬೇಕಾಗಿಲ್ಲ. ಮಗುವಿನ ಬೆಳವಣಿಗೆಗಳಿಗನುಸಾರವಾಗಿ ಒದೆತದ ರೀತಿಯೂ, ಪ್ರಮಾಣವೂ ಬದಲಾಗುವುದು. ಮಗುವು ಆಗಾಗ ಒದೆಯುತ್ತಿಲ್ಲವೆಂದಾದರೆ ಯಾವುದೇ ರೀತಿಯ ಗಾಬರಿ ಪಡಬೇಕಾಗಿಲ್ಲ.

Leave a Reply

%d bloggers like this: