ಒಂದು ಹೆಣ್ಣು ಹೇಗಾದರೂ ಜನ್ಮ ನೀಡಲಿ – ಅದು ಸಿಸೇರಿಯನ್ ಮೂಲಕವಾದರೂ ಇರಲಿ ಅಥವಾ ನೈಸರ್ಗಿಕವಾಗಿಯಾದರೂ ಇರಲಿ – ಅದು ಅದ್ಭುತವೇ. ಆದರೆ ಒಂದು ವಿಡಿಯೋ ಆ ಅದ್ಭುತ ಕ್ಷಣವನ್ನ ನೀವು ಬಹುಷಃ ಯಾರು ಎಂದಿಗೂ ನೋಡಿರದ ರೀತಿಯಲ್ಲಿ ಸೆರೆ ಹಿಡಿದಿದೆ.
ಈ ವಿಡಿಯೋ ವೆನೆಜುವೆಲಾ ದೇಶದ ವೈದ್ಯರು ಸೆರೆಹಿಡಿದಿದ್ದು, ಮಗುವು ಒಂದು ಮೃದು ಸಿಸೇರಿಯನ್ ಹೆರಿಗೆಯ ವೇಳೆ ಉದರದಿಂದ ಹೊರಗೆ “ಚಿಮ್ಮುತ್ತಿರುವ” ಅದ್ಭುತ ಕ್ಷಣದ್ದಾಗಿದೆ. ಸಾಮಾನ್ಯವಾಗಿ ಈ ರೀತಿಯ ಸಿಸೇರಿಯನ್ ಹೆರಿಗೆಯಲ್ಲಿ ಹೊಟ್ಟೆಯನ್ನು ಕತ್ತರಿಸಿದ ತಕ್ಷಣವೇ ಮಗುವನ್ನು ಹೊರತೆಗೆಯುವುದಿಲ್ಲ. ಬದಲಿಗೆ, ಅದನ್ನು ಮೆಲ್ಲನೆ ಮತ್ತು ಒಂದು ರೀತಿಯಲ್ಲಿ ಸ್ವತಂತ್ರವಾಗಿ ಹೊರತೆಗೆಯುವರು. ಏಕೆಂದರೆ, ಮಗುವಿನ ಶ್ವಾಸಕೋಶದಲ್ಲಿ ತುಂಬಿರುವ ದ್ರವ್ಯವನ್ನು ಹಿಂಡಿ ಹೊರತೆಗೆಯಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ನಾರ್ಮಲ್ ಡೆಲಿವರಿ ಅಥವಾ ನೈಸರ್ಗಿಕ ಹೆರಿಗೆಯಲ್ಲೂ ಹೀಗೆ ಮಾಡುವುದು.
ಆದರೆ ಈ ಅದ್ಭುತ ಕ್ಷಣದಲ್ಲಿ, ವೈದ್ಯರು ಒಂದು ಹೆಜ್ಜೆ ಹಿಂದೆ ಸರಿದು, ಈ ಮಗುವು “ನೈಸರ್ಗಿಕ ಸಿಸೇರಿಯನ್” ಹೆರಿಗೆ ಅನುಭವಿಸಲು ಅವಕಾಶ ಮಾಡಿಕೊಟ್ಟರು.