ಶಿಶುಗಳ ಬಗೆಗಿನ ಕೆಲವು ಅಚ್ಚರಿಯ ಸಂಗತಿಗಳು!

ಪುಟ್ಟ ಕಂದಮ್ಮಗಳನ್ನು ಆಡಿಸಲು ಯಾರಿಗೆ ತಾನೇ ಇಷ್ಟವಿಲ್ಲ!, ಅವರ ಕಿರುನಗೆ, ತುಂಟತನ, ಮುದ್ದಾದ ಗಲ್ಲ ಅವರನ್ನು ನೋಡುವುದೇ ಖುಷಿ, ಅವರ ಜೊತೆ ಇದ್ದರೆ ಕಾಲ ಕಳೆಯುವುದೇ ತಿಳಿಯುವುದಿಲ್ಲ. ಆದರೆ ನಿಮಗೆ ಗೊತ್ತಾ ಅವರ ಬಗೆಗಿನ ಕೆಲವು ವಿಷಯಗಳು ನಿಮ್ಮನ್ನು ಬೆರಗುಗೊಳಿಸುವಂತೆ ಮಾಡುತ್ತದೆ. ಇದು ಆಶ್ಚರ್ಯವಾದರೂ ಸತ್ಯ.

೧.ವಯಸ್ಕರಿಗಿಂತ ೬೦ಕ್ಕೂ ಹೆಚ್ಚು ಮೂಳೆಗಳನ್ನು ಶಿಶುವು ಹೊಂದಿದೆ.

೨.ಆಗ ತಾನೇ ಜನಿಸಿದ ಮಗುವಿನ ದೇಹದಲ್ಲಿ ಒಂದು ಬಟ್ಟಲಿನಷ್ಟು ಮಾತ್ರ ರಕ್ತ ಇರುತ್ತದೆ.

೩.ಮಗುವು ಜನಿಸಿದಾಗ ಅವರ ದೇಹದಲ್ಲಿ ಯಾವುದೇ ಬ್ಯಾಕ್ಟೀರಿಯಾ ಇರುವುದಿಲ್ಲ.

೪.ನವ ಪೋಷಕರು ತಮ್ಮ ಮಗುವಿಗಾಗಿ ಮೌಲ್ಯಯುತ ೬ ತಿಂಗಳ ನಿದ್ರೆಯನ್ನು ೨ ವರ್ಷದಲ್ಲಿ ಕಳೆದುಕೊಳ್ಳುತ್ತಾರೆ.

೫.ನವಜಾತ ಶಿಶುಗಳು ಕೆಲವು ತಿಂಗಳುಗಳ ತನಕ ಬರಿ ಕಪ್ಪು ಬಿಳುಪು ಬಣ್ಣವನ್ನು ಮಾತ್ರ ಕಾಣುವರು.

೬.ರುಚಿ ಗ್ರಹಿಸುವ ಗ್ರಂಥಿಗಳು ವಯಸ್ಕರಿಗಿಂತ ಶಿಶುಗಳಲ್ಲಿ ಹೆಚ್ಚಾಗಿರುತ್ತದೆ.

೭.ಇತರರ ದೇಹವನ್ನು ಗುರುತಿಸುವ ಮತ್ತು ತಮ್ಮ ದೇಹವನ್ನು ಬೇರೆಯವರ ಜೊತೆ ಹೋಲಿಸಿಕೊಳ್ಳಲು ಮಗವು ಸ್ವ-ಜಾಗೃತಿಯೊಂದಿಗೆ ಜನಿಸುತ್ತವೆ.

೮.ಗರ್ಭಾವಸ್ಥೆಯಲ್ಲಿ ಗೊರಕೆ ಹೊಡೆಯುವ ಮಹಿಳೆಯರು ಚಿಕ್ಕದಾದ ಮಗುವನ್ನು ಪಡೆಯುವರು ಎಂದು ಅಧ್ಯಯನ ಹೇಳಿದೆ.

೯.ಗರ್ಭಾವಸ್ಥೆಯಲ್ಲಿ, ತಾಯಿಯ ಅಂಗ ಹಾನಿಗೊಳಗಾದರೆ, ಗರ್ಭಾಶಯದಲ್ಲಿರುವ ಮಗುವು ಹಾನಿಗೊಳಗಾದ ಅಂಗವನ್ನು ಸರಿಪಡಿಸಲು ಕಾಂಡಕೋಶಗಳನ್ನು ಕಳುಹಿಸುತ್ತದೆ.

೧೦.ಮಕ್ಕಳಿಗೆ ಕನಿಷ್ಠ ೧೮ ತಿಂಗಳು ತುಂಬುವ ವರೆಗೆ ಕನ್ನಡಿಯಲ್ಲಿ ಕಾಣುತ್ತಿರುವುದು ನಾನೇ ಎಂದು ಗುರುತಿಸಲಾಗುವುದಿಲ್ಲ.

೧೧.ಪ್ರಪಂಚದಾದ್ಯಂತ ನಿಮಿಷಕ್ಕೆ ೨೫೫ ಶಿಶುಗಳು ಜನಿಸುತ್ತವೆ.

೧೨.ನವಜಾತ ಶಿಶುಗಳು ಹಾಲನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿರುವರು, ಅದು ಗಂಡು ಮತ್ತು ಹೆಣ್ಣು ಎರಡು ಲಿಂಗದ ಶಿಶುಗಳು ಕೂಡ.

Leave a Reply

%d bloggers like this: