ಈ 5 ಸೂಚನೆಗಳು ಕಾಣಿಸಿಕೊಂಡರೆ, ನಿಮಗೆ ಹೆರಿಗೆ ನೋವು ಶುರು ಆಯಿತು ಎಂದರ್ಥ

ಈಗಾಗಲೇ ಒಂದು ಮಗು ಆಗಿರುವ ತಾಯಂದಿರಿಗೂ ಕೂಡ ತಮಗೆ ಹೆರಿಗೆ ನೋವು ಶುರು ಆಗಿದೆಯೇ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹೆರಿಗೆ ನೋವಿನ ಲಕ್ಷಣಗಳ ಬಹಳ ಅಸ್ಪಷ್ಟವಾಗಿರುತ್ತವೆ ಮತ್ತು ಅದನ್ನ ನಾವು ತಪ್ಪಾಗಿ ಅರ್ಥೈಸಿಕೊಳ್ಳುವುದು ಬಹಳ ಸುಲಭ. ಆ ಉಳುಕುಗಳು, ಮುರಿತಗಳು ನಿಜವಾಗಿಯೂ ಹೆರಿಗೆ ನೋವಿನ ಸಂಕೋಚನಗಳಾ? ಅಥವಾ ನೆನ್ನೆ ಏನೋ ಸರಿ ಇಲ್ಲದ ತಿನಿಸು ತಿಂದು ಹೊಟ್ಟೆ ನೋವುತ್ತಿರುವುದ? ಅದು ನಿಮ್ಮ ನೀರು ಹೊಡೆದಿರುವುದಾ ಅಥವಾ ನಿಮ್ಮ ಮೂತ್ರನಾಳವು ನಿಯಂತ್ರಣ ಕಳೆದುಕೊಂಡ ಕಾರಣ ಆಗುತ್ತಿರುವ ಮೂತ್ರವಿಸರ್ಜನೆನಾ? ನಿಮ್ಮ ಜೀವನ ಸುಲಭವಾಗಿಸಲು, ನಿಮಗೆ ಹೆರಿಗೆ ನೋವು ಶುರುವಾಗಿದೆ ಮತ್ತು ನೀವು ಆಸ್ಪತ್ರೆಗೆ ಧಾವಿಸಬೇಕು ಎಂದು ಸೂಚಿಸುವ 5 ಲಕ್ಷಣಗಳು ಯಾವು ಎಂಬುದನ್ನ ಪಟ್ಟಿ ಮಾಡಿದ್ದೇವೆ, ಓದಿರಿ.

೧. ನಿಮ್ಮ ನೀರು ಹೊಡೆಯುತ್ತದೆ

ನಿಮಗೆ ನಿಮ್ಮ ಕೆಟ್ಟ ಕನಸುಗಳಲೆಲ್ಲಾ ನಿಮ್ಮ ನೀರು ಹೊಡೆದು ಒಂದೇ ಸಮನೆ ಹೆರಿಗೆ ನೋವಿನಿಂದ ಬಳಲುವುದನ್ನ ಕಂಡಿರುತ್ತೀರಾ. ಆದರೆ ಬಹಳ ಕಡಿಮೆ ಹೆಂಗಸರು, ಅಂದರೆ ಕೇವಲ 8% ಅಷ್ಟು ಹೆಂಗಸರು ಮಾತ್ರ ತಮಗೆ ನಿಯಮಿತ ಸಂಕೋಚನಗಳು (ಕಾಂಟ್ರಕ್ಷನ್) ಕಾಣಿಸಿಕೊಳ್ಳುವ ಮುನ್ನ ತಮ್ಮ ನೀರು ಸಂಪೂರ್ಣವಾಗಿ ಹೊಡೆದಿರುವುದು ತಿಳಿಯಿತು ಎಂದು ತಿಳಿಸಿದ್ದಾರೆ. ಬಹಳಷ್ಟು ಬಾರಿ ನಿಮ್ಮ ನೀರು ಹೊಡೆದಿದ್ದರು,ಮಗುವಿನ ತಲೆಯು ಸೋರಿಕೆಗೆ ಅಡ್ಡಿ ಮಾಡುವುದರಿಂದ, ನೀವು ಸ್ವಲ್ಪ ಮಟ್ಟಿನ ಸೋರಿಕೆಯನ್ನ ಮಾತ್ರ  ಅನುಭವಿಸುತ್ತೀರಾ.

ಒಮ್ಮೆ ನೀರು ಹೊಡೆದ ಮೇಲೆ, ಹೆರಿಗೆ ನೋವು ಇನ್ನೇನು ಕಾಣಿಸಿಕೊಳ್ಳುತ್ತದೆ ಎಂದರ್ಥ. ಸುಮಾರು 80% ಅಷ್ಟು ಹೆಂಗಸರು ನೀರು ಹೊಡೆದ 12 ಗಂಟೆಗಳ ಒಳಗೆ ಹೆರಿಗೆ ನೋವಿಗೆ ತುತ್ತಾಗುತ್ತಾರೆ.

೨. ನಿಮಗೆ ದೃಢವಾದ, ನಿಯಮಿತವಾದ ಸಂಕೋಚನಗಳು (ಕಾಂಟ್ರಕ್ಷನ್) ಕಾಣಿಸಿಕೊಳ್ಳುತ್ತವೆ

ಈ ಸಂಕೋಚನಗಳು ಹೆರಿಗೆ ನೋವಿನ ನಿಖರವಾದ ಸೂಚನೆಗಳಾದರು, ಗರ್ಭಧಾರಣೆಯ ಕೊನೆಯ ತಿಂಗಳಲ್ಲಿ ಕಾಣಿಸಿಕೊಳ್ಳುವ ನೈಜವಲ್ಲದ, ತರಬೇತಿ ಸಂಸಿಕೋಚನಗಳಾದ ಬ್ರಾಕ್ಸ್ಟೋನ್ ಹಿಕ್ಸ್ ನಿಮಗೆ ಸುಳ್ಳು ಮಾಹಿತಿ ನೀಡಬಹುದು. ಆದರೆ ಈ ಸುಳ್ಳು ಸಂಕೋಚನಗಳಾದ ಬ್ರಾಕ್ಸ್ಟೋನ್ ಹಿಕ್ಸ್ ದೃಢವಾಗುತ್ತಾ ಹೋಗುವುದಿಲ್ಲ ಮತ್ತು ನಿಯಮಿತವಾಗಿ (ರೆಗ್ಯುಲರ್ ಆಗಿ) ಕಾಣಿಸಿಕೊಳ್ಳದೆ ಬೇಗನೆ ಹೊರಟು ಹೋಗುತ್ತವೆ.

ಆದರೆ ನಿಜವಾದ ಸಂಕೋಚನಗಳು ನಿಮಗೆ ಹೆರಿಗೆ ಆಗುವವರೆಗೂ ನಿಲ್ಲುವುದಿಲ್ಲ. ನಿಜ ಹೇಳಬೇಕೆಂದರೆ ಇವು ಹೆರಿಗೆ ಆಗುವವರೆಗೂ ಇನ್ನಷ್ಟು ತೀವ್ರವಾಗುತ್ತಾ ಹೋಗುತ್ತವೆ.

೩. ನೀವು ವಿಸರ್ಜನೆಯನ್ನು ಕಾಣುತ್ತೀರ

ಗರ್ಭಧಾರಣೆ ಸಮಯದಲ್ಲಿ ನಿಮ್ಮ ಗರ್ಭಕಂಠವು ಮುಚ್ಚಿರುತ್ತದೆ ಮತ್ತು ಲೋಳೆಯಿಂದ ಕಟ್ಟಿಕೊಂಡಿರುತ್ತದೆ. ಇದು ಪ್ರಕೃತಿಯು ನಿಮ್ಮ ಮಗುವನ್ನು ಸೋಂಕಿನಿಂದ ರಕ್ಷಿಸುವ ಪರಿ. ಆದರೆ ನೀವು ಹೆರಿಗೆ ಸಮಯಕ್ಕೆ ಹತ್ತಿರ ಆಗುತ್ತಿದ್ದಂತೆ ನಿಮ್ಮ ಗರ್ಭಕಂಠವು ತೆರೆದುಕೊಳ್ಳುತ್ತಾ ಮತ್ತು ಮೃದುವಾಗುತ್ತ ಹೋಗುತ್ತದೆ. ಹೀಗಾಗಿ ಅದರೊಳಗಿದ್ದ ವಸ್ತುಗಳು ಹೊರಗೆ ಬರುತ್ತವೆ. ಒಂದು ಸ್ಪೂನ್ ಅಷ್ಟು ಲೋಳೆಯು ಒಂದು ಗುಳ್ಳೆಯ ರೀತಿ ಹೊರಬರಬಹುದು. ಅಲ್ಲದೆ ಗರ್ಭಕಂಠ ತೆರೆದುಕೊಳ್ಳುವಾಗ ರಕ್ತನಾಳಗಳು ಹರಿದು, ಆ ಲೋಳೆಯು ಕಾಣಲು ರಕ್ತಮಯವಾಗುವಂತೆ ಮಾಡಬಹುದು. ಹೀಗಾದ ಸಮಯದಿಂದ ಹೆರಿಗೆ ನೋವು ಗಂಟೆಗಳು, ದಿನಗಳು ಅಥವಾ ವಾರಗಳ ಕಾಲದಷ್ಟು ದೂರ ಇರಬಹುದು, ಆದರೆ ನಿಮ್ಮ ಗರ್ಭಕಂಠವು ತೆರೆದುಕೊಳ್ಳುತ್ತಿದೆ ಎಂದು ಇದು ನಿಖರವಾಗಿ ಸೂಚಿಸುತ್ತದೆ.

೪. ಬೇಧಿ ಉಂಟಾಗುತ್ತದೆ

ಹೆರಿಗೆ ನೋವು ಶುರು ಆಗುವ ಸ್ವಲ್ಪ ಹೊತ್ತಿನ ಮುಂಚೆ, ನಿಮ್ಮ ದೇಹವು ಪ್ರೋಸ್ಟಾಗ್ಲ್ಯಾಂಡಿನ್ಸ್ ಅನ್ನು ಬಿಡುಗಡೆ ಮಾಡುತ್ತದೆ. ಇದು ನಿಮ್ಮ ಗರ್ಭಕಂಠವು ತೆರೆದುಕೊಳ್ಳುವಂತೆ ಮತ್ತು ಮೃದುವಾಗುವಂತೆ ಮಾಡಿ ಸಂಕೋಚನಗಳು ಆಗಲು ಸಹಾಯ ಮಾಡುತ್ತದೆ. ಆದರೆ ಈ ಪ್ರಾಸ್ಟಗ್ಲ್ಯಾಂಡಿನ್ ನಿಮ್ಮ ಕರುಳನ್ನ ಅತಿಯಾಗಿ ಪ್ರಚೋದಿಸಿ ನೀವು ಪದೇ ಪದೇ ಮಲವಿಸರ್ಜನೆ ಮಾಡುವಂತೆ ಮಾಡಬಹುದು.

೫. ನಿಮ್ಮ ಬೆನ್ನು ತೀವ್ರವಾಗಿ ನೋವುತ್ತದೆ

ಬಹುತೇಕ ಗರ್ಭಿಣಿ ಹೆಂಗಸರಿಗೆ ಬೆನ್ನು ನೋವು ಎನ್ನುವುದು ಬಹಳ ತಿಂಗಳುಗಳಿಂದ ಕಾಣಿಸಿಕೊಳ್ಳುವಂತದ್ದು. ಆದರೆ ಯಾವಾಗ ಈ ನೋವು ಗಗನಕ್ಕೆ ಏರುತ್ತದೋ ಅಂದರೆ ತುಂಬಾನೇ ಹೆಚ್ಚಾಗುತ್ತದೋ, ನೀವು ಹೆರಿಗೆಯ ಬೆನ್ನು ನೋವು ಅನುಭವಿಸುತ್ತಿರಬಹುದು ಎಂಬ ಸೂಚನೆ ಅದು. ಇದು ಮೂರು ಗರ್ಭಿಣಿಯರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವಂತದ್ದು. ಸಾಮಾನ್ಯವಾಗಿ ಮಗುವು ತನ್ನ ತಾಯಿಯ ಬೆನ್ನಿಗೆ ತನ್ನ ಮುಖವನ್ನ ಸವರಿಕೊಂಡು ಜನನ ನಾಳ ಪ್ರಯಾಣಿಸುತ್ತದೆ. ಆದರೆ ಕೆಲವೊಮ್ಮೆ  ಮಗುವು ತನ್ನ ತಲೆಬುರುಡೆಯನ್ನು ತಾಯಿಯ ಬೆನ್ನಿಗೆ ಗುದ್ದಿಕೊಂಡು ಜನನ ನಾಳ ಇಳಿಯುತ್ತಾ ಬರುತ್ತದೆ. ಇಂತಹ ಸಮಯದಲ್ಲಿ ಅತಿಯಾದ ಬೆನ್ನು ನೋವು ಕಾಣಿಸಿಕೊಳ್ಳಬಹುದು.

Leave a Reply

%d bloggers like this: