ಗರ್ಭಾವಸ್ಥೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು

ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಎಳನೀರನ್ನು ಕುಡಿಯುವ ಅಭಾವಸವನ್ನು ಮಾಡಿಕೊಳ್ಳುವುದು ತುಂಬಾ ಉತ್ತಮ. ತಾಜಾ ಎಳನೀರು ನಿಮಗೆ ಮತ್ತು ನಿಮ್ಮ ಉದರದೊಳಗಿರುವ ಮಗುವಿಗೆ ತುಂಬಾ ಒಳ್ಳೆಯದು. ಜೊತೆಗೆ ಇದು ಯಾವುದೇ ಸಂರಕ್ಷಕಗಳನ್ನು ಅಥವಾ ರಾಸಾಯನಿಕ ವಸ್ತುಗಳನ್ನು ಒಳಗೊಂಡಿಲ್ಲ. ಇದು ನೈಸರ್ಗಿಕ ಮತ್ತು ಪೌಷ್ಟಿಕ-ಭರಿತ ರುಚಿಕರ ದ್ರವ. ಮತ್ತು ಮುಖ್ಯವಾಗಿ ಇದನ್ನು ಸೇವಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.

ಎಳನೀರನ್ನು ನೀವು ಕುಡಿಯುವುದರಿಂದ ಈ ಕೆಳಗಿನ ಲಾಭಗಳನ್ನು ನೀವು ಪಡೆಯಬಹುದು.

೧.ಮಲಬದ್ದತೆಯನ್ನು ತಡೆಯಬಹುದು

ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಾಮಾನ್ಯವಾಗಿದೆ. ದೇಹದಲ್ಲಿ ಪ್ರೊಜೆಸ್ಟರಾನ್ ಮಟ್ಟ ಹೆಚ್ಚಾಗುವುದು ಇದಕ್ಕೆ ಕಾರಣವಾಗಿದೆ ಮತ್ತು ಕಬ್ಬಿಣಾಂಶದ ಸೇವನೆ ಹೆಚ್ಚಾದರು ಇದು ಸಾಧ್ಯವಾಗುತ್ತದೆ.

ಎಳನೀರಲ್ಲಿ ಇರುವ ಫೈಬರ್ ಅಂಶವು ಗರ್ಭಾವಸ್ಥೆಯಲ್ಲಿ ಮಲಬದ್ಧತೆಯ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಫೈಬರ್ ಗಳು ಕರುಳನ್ನು ಸ್ವಚ್ಛ ಮಾಡಿ ತಮ್ಮ ಕೆಲಸವನ್ನು ಸರಾಗವಾಗಿ ಮಾಡಲು ಸಹಾಯ ಮಾಡುತ್ತವೆ.

೨.ಎದೆ ಉರಿಯನ್ನು ನಿಲ್ಲಿಸುತ್ತದೆ

ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆ ಮತ್ತು ಉದರದೊಳಗೆ ಬೆಳೆಯುತ್ತಿರುವ ಮಗುವಿನ ಒತ್ತಡದಿಂದ ಎದೆ ಉರಿ ಕಾಣಿಸಿಕೊಳ್ಳುವುದು ತುಂಬಾ ಸಾಮಾನ್ಯವಾಗಿದೆ.

ಗರ್ಭಾವಸ್ಥೆಯಲ್ಲಿ ನಿಮ್ಮ ಎದೆ ಉರಿ ಸಮಸ್ಯೆಗೆ ವೈದ್ಯಕೀಯ(ರಾಸಾಯನಿಕ) ಔಷದಗಳನ್ನು ತೆಗೆದುಕೊಳ್ಳುವುದು ತುಂಬಾ ಅಪಾಯ ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಏಕೆಂದರೆ ಇದು ಮಗುವಿನ ಮೇಲೆ ಶಾಶ್ವತ ಪರಿಣಾಮವನ್ನು ಬೀರಬಹುದು. ಇದಕ್ಕೆ ಎಳನೀರನ್ನು ಕುಡಿಯುವುದು ಒಂದು ಉತ್ತಮ ಉಪಾಯ.

ಎಳನೀರನ್ನು ಕುಡಿಯುವುದರಿಂದ ಆಮ್ಲಿಯ ಮಟ್ಟವನ್ನು ಉದರದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅಜೀರ್ಣತೆ ಮತ್ತು ಎದೆ ಉರಿ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

೩.ನಿಮ್ಮನ್ನು ಶಕ್ತಿಯುತರನ್ನಾಗಿರಿಸುತ್ತದೆ

ನಿಮ್ಮ ದೇಹವನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುವ ಪಾನೀಯಗಳು ಎಲೆಕ್ಟ್ರೋಲೈಟ್ ಗಳನ್ನು ಹೊಂದಿದ್ದರು, ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಜೊತೆಗೆ ಥೈರಾಯಿಡ್ ಸಮಸ್ಯೆಯನ್ನು ಉಂಟುಮಾಡುತ್ತದೆ.

ಎಳನೀರನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಿರುವ ಸಕ್ಕರೆ, ಪ್ರೊಟೀನ್, ಸೋಡಿಯಂ ಮತ್ತು ದೇಹದಲ್ಲಿ ಅಗತ್ಯ ನೀರಿನ ಅಂಶವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ, ಇದರಿಂದ ನಿಮ್ಮಲ್ಲಿ ಆಯಾಸ ಮತ್ತು ಬಳಲಿಕೆ ಕಡಿಮೆ ಆಗುತ್ತದೆ.

೪.ಡಿಹೈಡ್ರೇಷನ್ ಅನ್ನು ತಡೆಯುತ್ತದೆ

ಬೆಳಗ್ಗಿನ ಕಾಯಿಲೆ ಮತ್ತು ವಾಂತಿಯಿಂದ, ಗರ್ಭಿಣಿ ಮಹಿಳೆಯರು ಸಮಸ್ಯೆಗೆ ಒಳಗಾಗುವುದು ತುಂಬಾ ಸಾಮಾನ್ಯ. ಎಳನೀರನ್ನು ಸೇವಿಸುವುದರಿಂದ ನೀವು ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲದೆ ಮುಕ್ತಿ ಪಡೆಯಬಹುದು. ಇದರ ಜೊತೆಗೆ ಎಳನೀರನ್ನು ಸೇವಿಸುವುದರಿಂದ ವಾಕರಿಕೆ ಮತ್ತು ಆಯಾಸದಿಂದಲೂ ಕೂಡ ಮುಕ್ತಿ ಪಡೆಯಬಹುದು.

೫.ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ

ನಿಯಮಿತವಾಗಿ ಎಳನೀರನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಇದಕ್ಕೆ ಪ್ರಮುಖ ಕಾರಣ ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನಿಶಿಯಂ. ರಕ್ತದಲ್ಲಿ ಕಡಿಮೆ ಸೋಡಿಯಂ ಮಟ್ಟ ಇದೆ ಎಂದರೆ ಕಡಿಮೆ ರಕ್ತದೊತ್ತಡ ಎಂದು ಅರ್ಥ(low ಬಿಪಿ).

೬.ಮೂತ್ರನಾಳವನ್ನು ಸೋಂಕಿನಿಂದ ರಕ್ಷಿಸುತ್ತದೆ

ಎಳನೀರು ನೈಸರ್ಗಿಕ ಮೂತ್ರವರ್ಧಕ, ಅಂದರೆ, ಇದು ಮೂತ್ರ ವಿಸರ್ಜನೆಯನ್ನು ಉತ್ತೇಜಿಸುತ್ತದೆ. ಗರ್ಭಿಣಿ ಮಹಿಳೆಯರು ಬೇಗನೆ ಮೂತ್ರನಾಳದ ಸೋಂಕಿಗೆ ಗುರಿಯಾಗಬಹುದು, ಎಳನೀರನ್ನು ಕುಡಿಯುವುದು ಇದನ್ನು ತಡೆಯುವ ಒಂದು ಒಳ್ಳೆಯ ಉಪಾಯವಾಗಿದೆ.

ಇದು ಕಿಡ್ನಿಯನ್ನು ಆರೋಗ್ಯವಾಗಿರುವಂತೆ ಕಾಪಾಡುವಲ್ಲಿ ಕೂಡ ಸಹಾಯ ಮಾಡುತ್ತದೆ. ಜೊತೆಗೆ ಕಿಡ್ನಿಯಲ್ಲಿ ಕಲ್ಲು ಮತ್ತು ಕಿಡ್ನಿ ಸೋಂಕಿನಿಂದ ಕೂಡ ನಮ್ಮನ್ನು ರಕ್ಷಿಸುತ್ತದೆ.

ಸಲಹೆ:

೧.ಅತಿ ಹೆಚ್ಚು ಎಳನೀರನ್ನು ಒಂದೇ ಬಾರಿ ಅಥವಾ ಒಂದೇ ದಿನ ಕುಡಿಯಬೇಡಿ.

೨.ನಿಮಗೆ ಎಳನೀರಿನ ಅಲರ್ಜಿ ಇದ್ದರೆ ಕುಡಿಯಬೇಡಿ.

೩.ನಿಮಗೆ ಮಧುಮೇಹ ಇದ್ದರೆ ವೈದ್ಯರ ಸಲಹೆಯಂತೆ ಎಳನೀರನ್ನು ಸೇವಿಸಿ.

೪.ಆದಷ್ಟು ತಾಜಾ ಎಳನೀರನ್ನು ಕುಡಿಯಿರಿ.

Leave a Reply

%d bloggers like this: