ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ನೈಸರ್ಗಿಕ ಸಲಹೆಗಳು

ತ್ವಚೆಯ ಹೊಳಪನ್ನು ಹೆಚ್ಚಿಸಿಕೊಳ್ಳುವುದು ಅಥವಾ ಇರುವ ಹೊಳಪನ್ನು ಕಾಪಾಡಿಕೊಳ್ಳುವುದು ಪ್ರತಿ ಹೆಣ್ಣಿನ ಬಯಕೆ. ಹೊಳಪಿನ ತ್ವಚೆ ಆರೋಗ್ಯಕರ ಚರ್ಮದ ಚಿಹ್ನೆ ಎಂದು ನಾವು ಮರೆತಿರಬಹುದು. ಆದರೆ ತ್ವಚೆಯ ಹೊಳಪಿಗಾಗಿ ಪರಿತಪಿಸುವುದಂತೂ ನಿಜ. ನಿಮ್ಮ ತ್ವಚೆ ಹೊಳಪನ್ನು ಪಡೆಯಬೇಕೆಂದರೆ ನೀವು ಆರೋಗ್ಯಕರ ಚರ್ಮವನ್ನು ಪಡೆಯಬೇಕು. ಇದಕ್ಕಾಗಿ ನೀವು ರಾಸಾಯನಿಕ ಪದಾರ್ಥಗಳನ್ನು ಬಳಸುವುದರಿಂದ ಅಡ್ಡಪರಿಣಾಮ ಆಗುವ ಸಾಧ್ಯತೆಗಳೇ ಹೆಚ್ಚು. ತ್ವಚೆಯ ಹೊಳಪು ಹೆಚ್ಚಿಸಲು ಮತ್ತು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ನೈಸರ್ಗಿಕ ವಿಧಾನ ಬಳಸಿ.

೧.ದ್ರಾಕ್ಷಿ

ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ನೀವು ಬಯಸಿದರೆ, ದ್ರಾಕ್ಷಿ ಹಣ್ಣನ್ನು ತೆಗೆದುಕೊಂಡು ಅದನ್ನು ನಿಮ್ಮ ಮುಖ ಅಥವಾ ತ್ವಚೆಯ ಮೇಲೆ ನಿಧಾನವಾಗಿ ಉಜ್ಜಿರಿ. ಅಥವಾ ದ್ರಾಕ್ಷಿ ಹಣ್ಣನ್ನು ಚಿವುಕಿ ಅದರ ರಸವನ್ನು ಮುಖಕ್ಕೆ ಹಚ್ಚಿರಿ.

೨.ಸೌತೆಕಾಯಿ, ಗ್ಲಿಸರೀನು ಮತ್ತು ಗುಲಾಬಿ ರಸ

ಸೌತೆಕಾಯಿ ರಸ, ಗ್ಲಿಸರೀನು ಮತ್ತು ಗುಲಾಬಿ ರಸ ಎಲ್ಲವನ್ನು ಮಿಶ್ರಣ ಮಾಡಿ, ಉಪಯೋಗಿಸುವುದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ. ಇದನ್ನು ಸೂರ್ಯನ ಕಿರಣಗಳ ಕಡೆ ನಡೆಯುವ ಮೊದಲು ಮತ್ತು ಹೊರಗಿನಿಂದ ಬಂದ ನಂತರ ಉಪಯೋಗಿಸಿರಿ.

೩.ಶ್ರೀ ಗಂಧ, ಅರಿಶಿಣ ಮತ್ತು ಹಾಲು

ಗಂಧದ ಪುಡಿ, ಅರಿಶಿಣ ಪುಡಿ, ಮತ್ತು ಹಾಲನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿರಿ, ಇದನ್ನು ಕೆಲವು ಸಮಯ ಮುಖದ ಮೇಲೆ ಬಿಡಿ, ನಂತರ ನೈಸರ್ಗಿಕ ಹೊಳಪು ಮತ್ತು ತಾಜಾತನವನ್ನು ಅನುಭವಿಸಿ.

೪.ಹಾಲು, ಉಪ್ಪು ಮತ್ತು ನಿಂಬೆರಸ

ಸ್ವಲ್ಪ ಹಾಲಿಗೆ ಚಿಟಕಿ ಉಪ್ಪು ಮತ್ತು ಸ್ವಲ್ಪ ನಿಂಬೆರಸ ಸೇರಿಸಿ, ಚರ್ಮಕ್ಕೆ ಹಚ್ಚಿರಿ, ಇದು ಚರ್ಮದ ರಂಧ್ರದಲ್ಲಿರುವ ಕೊಳೆಯನ್ನು ತೆಗೆದು ರಂಧ್ರಗಳು ತೆರೆಯುವಂತೆ ಮಾಡಿ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

೫.ಟಮೋಟ

ಟಮೋಟ ರಸಕ್ಕೆ ಸ್ವಲ್ಪ ನಿಂಬೆರಸವನ್ನು ಸೇರಿಸಿ ಮುಖಕ್ಕೆ ಹಚ್ಚುವುದು ತ್ವಚೆ ಹೊಳಪನ್ನು ಪಡೆಯುವುದರ ಜೊತೆಗೆ ಮೃದುವಾಗುತ್ತದೆ.

೬.ಅರಿಶಿಣ ಪುಡಿ, ಗೋಧಿ ಹಿಟ್ಟು ಮತ್ತು ಎಳ್ಳೆಣ್ಣೆ

ಅರಿಶಿಣ ಪುಡಿ, ಗೋಧಿ ಹಿಟ್ಟು ಮತ್ತು ಎಳ್ಳೆಣ್ಣೆಯನ್ನು ಉಪಯೋಗಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಬೇಡದ ಕೂದಲನ್ನು ಮುಖದ ಮೇಲೆ ಅಥವಾ ಚರ್ಮದ ಮೇಲಿನ ಬೇಡದ ಕೂದಲನ್ನು ತೆಗೆಯುವುದಕ್ಕೆ ಬಳಸಬಹುದು.

೭.ಎಲೆಕೋಸು ರಸ ಜೊತೆಗೆ ಜೇನುತುಪ್ಪ

ಇದರ ಮಿಶ್ರಣವನ್ನು ಬಳಸುವುದರಿಂದ ತ್ವಚೆಯ ಸುಕ್ಕುಗಳನ್ನು(ರಿಂಕಲ್ಸ್ ಅನ್ನು) ತೊಲಗಿಸಬಹುದು.

೮.ಕ್ಯಾರಟ್ ಜ್ಯೂಸು

ನೇರವಾಗಿ ಕ್ಯಾರಟ್ ಜ್ಯೂಸು ಅನ್ನು ಮುಖಕ್ಕೆ ಹಚ್ಚುವುದರಿಂದ ಹೊಳಪನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದು.

೯.ಜೇನುತುಪ್ಪ ಮತ್ತು ದಾಲ್ಚಿನ್ನಿ ಅಥವಾ ಚಕ್ಕೆ ಪುಡಿ

೩ ಭಾಗ ಜೇನುತುಪ್ಪ ಮತ್ತು ಒಂದು ಭಾಗ ಚಕ್ಕೆ ಪುಡಿಯನ್ನು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿ ಒಂದು ರಾತ್ರಿ ಪುರ ಹಾಗೆ ಬಿಡಿ, ಇದನ್ನು ನಿರಂತರವಾಗಿ ಮಾಡುವುದರಿಂದ ಪರಿಣಾಮಕಾರಿಯಾದ ಮೊಡವೆ ನಿವಾರಣೆ ಮತ್ತು ಸ್ಕಾರ್ಸ್ ಅನ್ನು ತಡೆಯಬಹುದು.

೧೦.ಲೋಗಸರ

ಲೋಗಸರದ ಲೋಳೆಯನ್ನು ತ್ವಚೆಯ ಕಲೆ ಅಥವಾ ಬಾಧಿತ ಜಾಗಕ್ಕೆ ಹಚ್ಚುವುದರಿಂದ ತ್ವಚೆಯ ಸಮಸ್ಯೆಯನ್ನು ನಿವಾರಿಸಿ ತ್ವಚೆಯು ತೇವಾಂಶದಿಂದ ಇರಲು ಸಹಾಯ ಮಾಡುತ್ತದೆ. ಲೋಗಸರವನ್ನು ಬಳಸುವುದು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಹೆಚ್ಚು ಸಹಾಯವಾಗುತ್ತದೆ. ಇದನ್ನು ಮೊಡವೆ, ಸ್ಕಾರ್ಸ್ ನಿವಾರಣೆ ಮುಂತಾದ ತ್ವಚೆಯ ಸಮಸ್ಯೆಗೆ ನೇರವಾಗಿ ತ್ವಚೆಯ ಮೇಲೆ ಬಳಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ.

Leave a Reply

%d bloggers like this: