ನೀವು ಮಲಗುವ ಭಂಗಿ ನಿಮ್ಮ ಬಗ್ಗೆ ಏನು ಹೇಳುತ್ತದೆ ಗೊತ್ತೇ ?

ನೀವು ರಾತ್ರಿ ಮಲಗುವಾಗ ಯಾವ ರೀತಿಯಲ್ಲಿ ಮಲಗುವಿರಿ, ಅಂಗಾತ ಮಲಗುವಿರಾ? ಹೊಟ್ಟೆ ಮೇಲೆ ಮಲಗುವಿರಾ? ಅಥವಾ ಮಗ್ಗುಲಾಗಿ ಮಲಗುವಿರಾ? ನೀವು ಮಲಗುವ ಸ್ಥಿತಿ ನಿಮ್ಮ ದೇಹದ ಮೇಲೆ ಆಗುವ ಕೆಲವು ಪರಿಣಾಮವನ್ನು ಮತ್ತು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ.

೧.ಹೊಟ್ಟೆ ಮೇಲೆ ಮಲಗಿದರೆ

ನೀವು ನಿಮ್ಮ ಹೊಟ್ಟೆಯ ಮೇಲೆ ಮಲಗುವ ವ್ಯಕ್ತಿಯಾದರೆ, ನೀವು ಹೆಚ್ಚು ಕೆಲಸ ಮಾಡುವ ವ್ಯಕ್ತಿಯಾಗಿದ್ದು, ಮಲಗಿರುವ ಸಮಯ ವಿಶ್ರಾಂತಿಯನ್ನು ಪಡೆಯುವಿರಿ, ಮತ್ತು ಆರಾಮದಾಯಕ ನಿದ್ರೆಯನ್ನು ಮಾಡುವಿರಿ. ಹೆಚ್ಚು ನಿದ್ರೆ ಮಾಡಲು ನೀವು ಬಯಸುವಿರಿ. ಇದು ನಿಮ್ಮ ಕುತ್ತಿಗೆ ಮತ್ತು ಬೆನ್ನು ನೋವಿಗೆ ಕಾರಣವಾಗಬಹುದು. ಈ ರೀತಿ ಮಲಗುವವರಾದರೆ ನೀವು ತುಂಬಾ ತೆಳು ಮತ್ತು ಮೃದುವಾದ ತಲೆದಿಂಬನ್ನು ಉಪಯೋಗಿಸುವುದು ಅಥವಾ ತಲೆದಿಂಬನ್ನು ಉಪಯೋಗಿಸದೆ ಇರುವುದು ಒಳ್ಳೆಯದು.

೨.ಆರಾಮದಾಯಕವಾಗಿ ಹೊಟ್ಟೆಯ ಮೇಲೆ ಮಲಗುವುದು

ಜಗತ್ತಿನಲ್ಲಿ ಶೇಕಡಾ ೭ರಷ್ಟು ಜನರು ಈ ರೀತಿ ಮಲಗುತ್ತಾರೆ. ನಿಮ್ಮ ಕೈಗಳನ್ನು ಹೊಟ್ಟೆಯ ಕೆಳಗೆ ಇಟ್ಟು ಅಥವಾ ತಲೆಯ ಕೆಳಗೆ ಇಟ್ಟು ಮಲಗುವುದು. ಅಧ್ಯಯನಗಳ ಪ್ರಕಾರ ನೀವು ಹೆಚ್ಚು ಮಾತನಾಡುತ್ತೀರಿ, ಸಾಮಾಜಿಕ ವಲಯಗಳಲ್ಲಿ ಗುರುತಿಸಿಕೊಳ್ಳಲು ಇಚ್ಛಿಸುತ್ತೀರಿ, ಮತ್ತು ಹೆಚ್ಚು ಸುತ್ತಾಡಲು ಇಷ್ಟಪಡುವಿರಿ.

೩.ಬೆನ್ನು ಮೇಲೆ(/ಅಂಗಾತ) ಮಲಗುವುದು

ಅಂಗಾತ ಮಲಗುವುದು ಕೆಲವರಲ್ಲಿ ಬೆನ್ನು ನೋವನ್ನು ಉಂಟುಮಾಡಬಹುದು. ನಿಮಗೆ ಮೊದಲೇ ನೋವು ಇದ್ದರೆ, ಇದರಿಂದ ಮತ್ತಷ್ಟು ಕೆಟ್ಟದಾದ ನೋವನ್ನು ನೀವು ಅನುಭವಿಸಬೇಕಾಗಬಹುದು. ಮತ್ತು ಗೊರಕೆ ಹೊಡೆಯಲು ಅಥವಾ ಮಲಗಿರುವಾಗ ಉಸಿರುಗಟ್ಟುವುದು ಇಂತಹ ಸ್ಥಿತಿಯಲ್ಲಿ ಕಾಣಿಸಿಕೊಳ್ಳಬಹುದು. ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

೪.ಅಂಗಾತ ಶಿಸ್ತಿನಂತೆ ಮಲಗುವುದು

ಜಗತ್ತಿನಾದ್ಯಂತ ಶೇಕಡಾ ೮ ರಷ್ಟು ಜನರು ಹೀಗೆ ಮಲಗಲು ಇಚ್ಛಿಸುತ್ತಾರೆ. ಕೆಲವು ಸಂಶೋಧನೆಗಳ ಪ್ರಕಾರ ನೀವು ಮೌನವಾಗಿರುವಿರಿ ಮತ್ತು ನಿಮ್ಮ ಗೆರೆ ಒಳಗೆ ನೀವು ಇರಲು ಇಚ್ಛಿಸುವಿರಿ ಹಾಗು ನಿಮ್ಮ ಮೇಲೆ ನೀವು ಹೆಚ್ಚು ನಿರೀಕ್ಷೆಯನ್ನು ಹೊಂದಿರುವಿರಿ ಕೆಲವೊಮ್ಮೆ ಬೇರೆಯವರ ಬಳಿ ನಿಮಗೆ ಬೇಕಾದುದ್ದನ್ನು ಬಯಸುವಿರಿ.

೫.ಅಂಗಾತ ನಕ್ಷತ್ರ ಮೀನಿನಂತೆ ಮಲಗುವುದು

ಕೇವಲ ಶೇಕಡಾ ೫ರಷ್ಟು ಜನರು ಮಾತ್ರ ಈ ರೀತಿಯಲ್ಲಿ ನಿದ್ರೆ ಮಾಡುತ್ತಾರೆ. ನೀವು ನಿಮ್ಮ ಬೆನ್ನ ಮೇಲೆ ಮಲಗಿ ನಿಮ್ಮ ಕೈಗಳು ನಿಮ್ಮ ತಲೆಯ ಬಳಿ ಇರುವುದು, ಕೆಲವು ಅಧ್ಯಯನಗಳ ಪ್ರಕಾರ, ನೀವು ಅತ್ಯುತ್ತಮ ಕೇಳುಗರಾಗಿದ್ದು, ನೀವು ಕೇಂದ್ರ ಬಿಂದುವಾಗಲು ಇಚ್ಛಿಸುವುದಿಲ್ಲ.

೬.ಮಗುವಿನಂತೆ ಮಗ್ಗುಲಾಗಿ ಮಲಗುವುದು

ಶೇಕಡಾ ೪೦ಕ್ಕೂ ಹೆಚ್ಚು ಜನರು ಈ ರೀತಿ ಮಲಗುತ್ತಾರೆ. ಮತ್ತು ಇದು ಮಹಿಳೆಯರ ಸಾಮಾನ್ಯ ಮಲಗುವ ಭಂಗಿಯಾಗಿದೆ. ಅಧ್ಯಯನಗಳ ಪ್ರಕಾರ, ನೀವು ಸ್ನೇಹ ಮಾಡಲು ಇಚ್ಛಿಸುವಿರಿ, ಮತ್ತು ತುಂಬಾ ಸೂಕ್ಹ್ಮವಾಗಿರುವಿರಿ, ಹಾಗು ನಿಮ್ಮ ಸುತ್ತ ರಕ್ಷಾ ಕವಚವನ್ನು ನೀವು ರೂಪಿಸಿಕೊಳ್ಳುವಿರಿ.

೭.ನೇರ ಮಗ್ಗುಲಾಗಿ ಮಲಗುವುದು

ಈ ರೀತಿ ಶೇಕಡಾ ೧೫ರಷ್ಟು ಜನರು ಮಲಗುತ್ತಾರೆ. ನೀವು ಸಾಮಾಜಿಕ ವ್ಯಕ್ತಿಯಾಗಿದ್ದು, ಸುಲಭವಾಗಿ ಜೀವನ ಸಾಗಿಸಲು ಇಚ್ಛಿಸುವಿರಿ, ಮತ್ತು ನೀವು ನಂಬಲು ಅರ್ಹರಾಗಿರುವ ವ್ಯಕ್ತಿ ಆಗಿರುವಿರಿ.

೮.ಮಗ್ಗುಲಾಗಿ ಹಾತೊರೆಯುವಂತೆ ಮಲಗುವುದು

ಶೇಕಡಾ ೧೩ರಷ್ಟು ಜನರು ಈ ರೀತಿ ತಮ್ಮ ಕೈಗಳನ್ನು ತಲೆಗೆ ನೇರವಾಗಿ ದೇಹದ ಮುಂದೆ ಇರಿಸಿ ಮಲಗುವರು. ಅಧ್ಯಯನಗಳ ಪ್ರಕಾರ ನೀವು ಮುಕ್ತ-ಮನಸ್ಸಿನ ವ್ಯಕ್ತಿ, ಆದರೆ ಯಾವುದೇ ಒಂದು ವಿಷಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುವಲ್ಲಿ ಅಥವಾ ನಿರ್ಣಯ ತೆಗೆದುಕೊಂಡಿರುವ ವಿಷಯದಲ್ಲಿ ನೀವು ಅನುಮಾನ ಮತ್ತು ಮೊಂಡುತನವನ್ನು ತೋರಿಸುವಿರಿ.

Leave a Reply

%d bloggers like this: