ಹೆಂಗಸರ ಚಂದ್ರನಾಡಿ (ಕ್ಲಿಟೋರಿಸ್) ಬಗೆಗಿನ 5 ಚಿತ್ತಾಕರ್ಷಕ ಸಂಗತಿಗಳು

ಹೆಂಗಸರಲ್ಲಿ ಕಾಣಿಸಿಕೊಳ್ಳುವ “ನಿಮಿರುವಿಕೆಯ” ಬಗ್ಗೆ ನಾವು ಹೆಚ್ಚು ಮಾತಾಡುವುದಿಲ್ಲ. ಆದರೆ ಆಕೆ ಲೈಂಗಿಕವಾಗಿ ಪ್ರಚೋದನೆ ಹೊಂದಿದಾಗ ಆಕೆಯ ಚಂದ್ರನಾಡಿ (ಕ್ಲಿಟೋರಿಸ್) ಬಿಗಿಯಾಗುತ್ತದೆ ಮತ್ತು ಗಾತ್ರದಲ್ಲಿ ದೊಡ್ಡದಾಗುತ್ತದೆ. ಇದು ಥೇಟ್ ಪುರುಷರ ಶಿಶ್ನದ ರೀತಿಯಲ್ಲೇ.

ಇಂತಹ ಹೆಂಗಸರ ಅತ್ಯಂತ ಸೂಕ್ಷ್ಮವಾದ ಲೈಂಗಿಕ  ಪ್ರಚೋದಕ ಭಾಗವಾದ ಚಂದ್ರನಾಡಿ ಬಗ್ಗೆ ಇನ್ನಷ್ಟು ಆಶ್ಚರ್ಯಕರ, ಕುತೂಹಲಕಾರಿ ಸಂಗತಿಗಳನ್ನ ತಿಳಿದುಕೊಳ್ಳಿ ಈ ಲೇಖನವನ್ನ ಓದಿ.

೧. ಇದನ್ನು ಹೆಂಗಸರ ಶಿಶ್ನ ಎಂದು ಕರೆಯಲಾಗುತ್ತದೆ

ಸಂಶೋಧನೆ ಪ್ರಕಾರ ಚಂದ್ರನಾಡಿ ಮತ್ತು ಗಂಡಸರ ಶಿಶ್ನ ಸದೃಶ ಭಾಗಗಳು – ಅಂದರೆ ಒಂದಕ್ಕೊಂದು ಬಹಳ ಸಾಮ್ಯತೆ ಹೊಂದಿರುವ ಭಾಗಗಳೆಂದು ತಿಳಿದು ಬಂದಿದೆ. ಆದರೆ ಶಿಶ್ನದಷ್ಟು ಉದ್ದ ಚಂದ್ರನಾಡಿ ಇರುವುದಿಲ್ಲ. ಇನ್ನೊಂದು ಗಮನಾರ್ಹ ವಿಷಯ ಎಂದರೆ ಗಂಡಸರ ಶಿಶ್ನವು ಬೇರೆ ಬೇರೆ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತದೆ, ಆದರೆ ಚಂದ್ರನಾಡಿಗೆ ಇರುವ ಒಂದೇ ಉದ್ದೇಶ ಎಂದರೆ ಅದು ಲೈಂಗಿಕ ಪ್ರಚೋದನೆಗಾಗಿ.

೨. ಇದು ಬೇರೆ ಬೇರೆ ಗಾತ್ರಗಳಲ್ಲಿ ಬರುತ್ತದೆ

ಹೆಂಗಸಿನ ಚಂದ್ರನಾಡಿಯ ಗಾತ್ರವು ಬೇರೆ ಬೇರೆ ಆಗಿರಬಹುದು. ಚಂದ್ರನಾಡಿಯು 3 ಸೆಂಟಿಮೀಟರ್ ಅಷ್ಟು ಉದ್ದವಿರಬಹುದು ಮತ್ತು ಅದರ ಸುತ್ತಳತೆಯು .1 ರಿಂದ .3 ಇಂಚಷ್ಟು ಇರಬಹುದು. ಆದರೆ ಅದರ ಕಾರ್ಯವಾದ ಲೈಂಗಿಕ ಪ್ರಚೋದನೆಯ ವಿಷಯಕ್ಕೆ ಬಂದಾಗ, ಈ ಗಾತ್ರಕ್ಕೆ ಏನು ಮಹತ್ವ ಇಲ್ಲ. ಯಾವುದೇ ಗಾತ್ರದ ಚಂದ್ರನಾಡಿ ಇಂದಲೂ ಲೈಂಗಿಕ ಪ್ರಚೋದನೆ ಹೊಂದಬಹುದು.

೩. ವಯಸ್ಸು ಕೂಡ ಪ್ರಭಾವ ಬೀರುವುದಿಲ್ಲ

ಗಂಡಸರಲ್ಲಿ ವಯಸ್ಸಾದಂತೆ ನಿಮಿರುವಿಕೆ ಕಳೆದುಕೊಳ್ಳುವ ತೊಂದರೆ ಹೆಚ್ಚಾಗುತ್ತಾ ಹೋಗುತ್ತದೆ, ಆದರೆ ಹೆಂಗಸರ ಚಂದ್ರನಾಡಿಗೆ ಎಷ್ಟೇ ವಯಸ್ಸಾದರೂ ಅದು ತನ್ನ ಲೈಂಗಿಕ ಸೂಕ್ಷ್ಮತೆ ಕಳೆದುಕೊಳ್ಳುವುದಿಲ್ಲ. ಹೆಂಗಸರು ಯಾವುದೇ ವಯಸ್ಸಿನಲ್ಲಿ ಕೂಡ ಲೈಂಗಿಕ ಪರಾಕಾಷ್ಠೆ ಹೊಂದುವ ಸಾಮರ್ಥ್ಯ ಹೊಂದಿರುತ್ತಾರೆ.

೪. ಇದು “ಒರ್ಗ್ಯಾಸಮ್” (ಲೈಂಗಿಕ ಪರಾಕಾಷ್ಠೆ) ಯಂತ್ರ

ಚಂದ್ರನಾಡಿಯು ಶಿಶ್ನಕ್ಕಿಂತ ಗಾತ್ರದಲ್ಲಿ ಚಿಕ್ಕದಿರುವುದರಿಂದ ಅದರ ನರತುದಿಗಳು ಇನ್ನೂ ಹೆಚ್ಚು ಕೇಂದ್ರೀಕೃತವಾಗಿರುತ್ತವೆ. ಇನ್ನೂ ಆಶ್ಚರ್ಯಕರ ಸಂಗತಿ ಏನು ಎಂದರೆ ಚಂದ್ರನಾಡಿಯಲ್ಲಿ ಶಿಶ್ನಕ್ಕಿಂತ ಹೆಚ್ಚು ನರತುದಿಗಳು ಇರುತ್ತವೆಂದು ಸಂಶೋಧನೆಗಳು ತಿಳಿಸಿವೆ. ಹೀಗಾಗಿ ಶಿಶ್ನ ನೀಡುವ ಲೈಂಗಿಕ ಪ್ರಚೋದನೆಗಿಂತ ಹೆಚ್ಚು ಚಂದ್ರನಾಡಿಯು ನೀಡುತ್ತದೆ.

೫. ಕೆಲವು ಬಾರಿ ಚಂದ್ರನಾಡಿ ಶಿಶ್ನಕ್ಕಿಂತ ದೊಡ್ಡದಿರಬಹುದು

ಇದು ಇನ್ನೂ ಚರ್ಚಾಸ್ಪದ ವಿಷಯ ಆಗಿದ್ದರು, ಆಸ್ಟ್ರೇಲಿಯಾದ ಜರ್ನಲ್ ಆಫ್ ಊರೊಲೊಜಿ ಚಂದ್ರನಾಡಿಯು ದೇಹದ ಒಳಗೆ ಗರ್ಭ ಕಂಠದ ವರೆಗೂ – ಅಂದರೆ ಸುಮಾರು 6 ಇಂಚುಗಳಷ್ಟು ಒಳಗಡೆ ಬೆಳೆದಿರಬಹುದು ಎಂಬುದು ತಿಳಿಸಿದ್ದಾರೆ. ಇದರ ಅರ್ಥ ಚಂದ್ರನಾಡಿಯು ಶಿಶ್ನಕ್ಕಿಂತ ಹೆಚ್ಚು ಉದ್ದ ಇರಬಹುದು.

Leave a Reply

%d bloggers like this: