ಇದು ನವಜಾತ ಶಿಶುವಲ್ಲ, 7 ತಿಂಗಳ ಅಪರೂಪದ ಅಂಗೈ ಅಗಲದ ಮಗು!

ಜನರು ಮೊದಲಬಾರಿಗ ಈತನನ್ನು ನೋಡಿದೊಡನೆ, ಇದು ನವಜಾತ ಶಿಶು ಇರಬೇಕೆಂದು ಅಂದುಕೊಳ್ಳುವರು. ಆದರೆ ವಾಸ್ತವದಲ್ಲಿ, ಕೇವಲ ಒಂದೂಕಾಲು ಕೆಜಿ ತೂಕ ಇರುವ ಇವನಿಗೆ ಈಗ 7 ತಿಂಗಳು ವಯಸ್ಸು.

ಈ ಮಗುವಿನ ಹೆಸರು ಮ್ಯಾಥ್ಯೂ. ಮ್ಯಾಥ್ಯೂವಿನ ತಾಯಿ ಗರ್ಭಿಣಿ ಆಗಿದ್ದಾಗ, ಆಕೆಯ ಹೊಟ್ಟೆಯ ಒಳಗೆ ಮಗು ಸರಿಯಾಗಿ ಬೆಳವಣಿಗೆ ಹೊಂದುತ್ತಿಲ್ಲವೆಂದು, ಆಕೆಗೆ ಗರ್ಭಧಾರಣೆಯ 28ನೇ ವಾರಕ್ಕೇನೇ ಹೆರಿಗೆ ಮಾಡಿಸಲಾಯಿತು. ಜನನದ ಸಮಯದಲ್ಲಿ ಮ್ಯಾಥ್ಯೂ ತೂಗಿದ್ದು ಕೇವಲ ಅರ್ಧ ಕೆಜಿ. ಜನಿಸಿದ ನಂತರ ಆತನನ್ನು 98 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು.

ಆದರೆ 2 ತಿಂಗಳುಗಳ ನಂತರ ತಪಾಸಣೆಯಲ್ಲಿ ತಿಳಿದು ಬಂದಿದ್ದು ಮ್ಯಾಥ್ಯೂಗೆ MOPD ಟೈಪ್ 2 ಎಂಬ ಅಸ್ವಸ್ಥತೆ ಇದ್ದು ಆತನು ಎಲ್ಲರಂತೆ ಮಾತಾಡಬಲ್ಲ, ನಡೆಯಬಲ್ಲ, ಶಾಲೆಗೆ ಹೋಗಬಲ್ಲ, ಆದರೆ ಗಾತ್ರದಲ್ಲಿ ತುಂಬಾನೇ ಚಿಕ್ಕವನಾಗಿರುತ್ತಾನೆ ಎಂದು. ಮೆದುಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಈ ಮಗುವಿನ ತಲೆಬುರುಡೆಗೆ ಸರ್ಜರಿ ಮಾಡಬೇಕಾಗಿದೆ. ಮ್ಯಾಥ್ಯೂ ಗಾತ್ರಕ್ಕೆ ಸರಿ ಹೊಂದುವ ಬಟ್ಟೆಯು ಸಿಗುವುದಿಲ್ಲ. ಈ ಕಾರಣಕ್ಕೆ ಆತನಿಗೆ ಹಾಕಿಸುವ ಬಹುತೇಕ ಬಟ್ಟೆಗಳು ಗೊಂಬೆಯ ಬಟ್ಟೆಗಳು ಆಗಿವೆ!

 

Leave a Reply

%d bloggers like this: