ನಿಮ್ಮ ಮಗುವಿನ ಜನ್ಮ ತಿಂಗಳು ಅವನ/ಳ ಭವಿಷ್ಯವನ್ನು ಹೀಗೆ ತೆರೆದಿಡುತ್ತದೆ!

ಸಂಖ್ಯಾಶಾಸ್ತ್ರರ ಪ್ರಕಾರ ಮಗುವಿನ ಜನ್ಮ ತಿಂಗಳು ಅವರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಅದು ಎಂದು ಹೇಳುತ್ತಾರೆ. ಉದಾಹರಣೆಗೆ ಜೂಲೈ ನಲ್ಲಿ ಜನಿಸಿದ ಶಿಶುಗಳು ತಮ್ಮ ಜೀವನದ ಉದ್ದಕ್ಕೂ ಆಶಾವಾದಿಗಳಾಗಿರುತ್ತಾರೆ. ನಿಮ್ಮ ಮಕ್ಕಳ ಜನ್ಮ ತಿಂಗಳು ಅವರ ಭವಿಷ್ಯದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಈ ಲೇಖನದಿಂದ ತಿಳಿಯೋಣ ಬನ್ನಿ.

೧.ಜನವರಿ

ಜನವರಿಯಲ್ಲಿ ಜನಿಸುವ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಬಯಸುವರು. ಅವರು ಚಿಕ್ಕ ವಯಸ್ಸಿನಲ್ಲೇ ವಯಸ್ಕರಂತೆ ಆರಾಮದಾಯಕವನ್ನು ಅನುಭವಿಸುವರು. ಅವರಿಗೆ ವಯಸ್ಸಾದರೂ ಯುವಕರಂತೆ ಕಾಣುವರು. ಇವರು ತಮಾಷೆಯ ಕ್ಷಣಗಳನ್ನು ಅನುಭವಿಸುವುದು ಕಷ್ಟ. ಅವರು ತಮಾಷೆಗಿಂತ ಹೆಚ್ಚು ಕೆಲಸದ ಜೊತೆ ನಿರತವಾಗಿರುವರು. ಅವರಿಗೆ ಪ್ರೋತ್ಸಾಹ ನೀಡಿದರೆ ಅವರು ಅಂದುಕೊಂಡಿರುವ ಕೆಲಸವನ್ನು ಯಶಸ್ವಿಯಾಗಿ ಸಾಧಿಸುತ್ತಾರೆ.

ಇವರು ಬೇಗನೆ ಬೇಸರಗೊಳ್ಳುತ್ತಾರೆ. ಇವರು ತಮ್ಮ ಭಾವನೆಯನ್ನು ನಿಧಾನವಾಗಿ ವ್ಯಕ್ತ ಪಡಿಸುತ್ತಾರೆ. ಇವರು ಮೊಂಡುತನವನ್ನು ಹೊಂದುವರು, ಹೆಚ್ಚು ಕೆಲಸ ಮಾಡುವರು, ಮತ್ತು ತುಂಬಾ ಸೂಕ್ಹ್ಮವಾಗಿರುವರು.

೨.ಫೆಬ್ರವರಿ

ಇವರು ಹೊಸತನವನ್ನು ಆವಿಷ್ಕರಿಸಲು ಬಯಸುವರು ಮತ್ತು ಬೇರೆಯವರು ಹೇಳಿದಂತೆ ಅಷ್ಟು ಸುಲಭವಾಗಿ ಕೇಳುವುದಿಲ್ಲ. ಇವರು ವಿಷಯಗಳನ್ನು ಬೇಗನೆ ಗ್ರಹಿಸಿಕೊಳ್ಳುವರು. ತನ್ನ ಸ್ವತಂತ್ರ ನಿಲುವು ಮತ್ತು ತನ್ನ ಮನಸ್ಸಿಗೆ ಗೌರವವನ್ನು ನೀಡುತ್ತಾನೆ. ಇವರು ಒಳ್ಳೆಯದನ್ನು ಮಾಡಲು ಬಯಸುವರು.

ಇವರು ಸತ್ಯವನ್ನು ಪ್ರೀತಿಸುತ್ತಾರೆ, ನಾಚಿಕೆ ಸ್ವಭಾವ ಉಳ್ಳವರು ಮತ್ತು ವಿನಮ್ರತೆ ಉಳ್ಳವರು. ಬೇಗ ಕೋಪಗೊಳ್ಳುವರು. ಇವರು ತುಂಬಾ ಸೂಕ್ಹ್ಮವಾಗಿದ್ದು ಬೇಗನೆ ಇವರಲ್ಲಿ ಬೇಸರ ತರಿಸಬಹುದು.

೩.ಮಾರ್ಚ್

ಇವರು ತುಂಬಾ ಸೂಕ್ಹ್ಮವಾಗಿದ್ದು, ಹುಟ್ಟಿನಿಂದಲೇ ಬೇರೆಯವರ ನೋವಿಗೆ ಸ್ಪಂದಿಸಲು ಬಯಸುವರು, ಅವರ ನೋವನ್ನು ನಮಗೆ ಆಗಿದೆ ಎಂದು ಭಾವಿಸುವರು. ಅವರು ಹೆಚ್ಚು ಬಾವನಾತ್ಮಕರಾಗಿರುವುದರಿಂದ ಕೆಲವೊಮ್ಮೆ ಹೆದರುವರು. ಇವರು ಹೊಸ ಹೊಸ ಕಲೆಗಳನ್ನು ಮಾಡುವಲ್ಲಿ ಯಶಸ್ವಿಯಾಗುವರು, ಅಂದರೆ ಇವರು ಸೃಷ್ಟಿಶೀಲರಾಗುವರು.

ಇವರದು ಆಕರ್ಷಕ ವ್ಯಕ್ತಿತ್ವ. ಇವರು ನಾಚಿಕೆಯನ್ನು ಹೊಂದಿರುವರು. ರಹಸ್ಯವನ್ನು ಕಾಪಾಡುವರು. ಸಾಮಾನ್ಯವಾಗಿ ಇವರು ಪ್ರಾಮಾಣಿಕರಾಗಿರುವರು. ಬೇಗ ಕೋಪಗೊಳ್ಳುವರು.

೪.ಏಪ್ರಿಲ್

ಇವರು ಹೆಚ್ಚು ಉತ್ಸುಕರಾಗಿದ್ದು, ಸಾಹಸ ಕೆಲಸಗಳನ್ನು ಮಾಡಲು ಹೆದರುವುದಿಲ್ಲ. ಈ ಹುಚ್ಚುತನದ ಯುವಕರಲ್ಲಿ ಬೇಸರವನ್ನು ನೀವು ಕಾಣುವುದು ಕಷ್ಟ. ಅವರು ನಡೆಯುವುದನ್ನು ಎಂದು ನಿಲ್ಲಿಸುವುದಿಲ್ಲ.

ಇವರು ತಮಾಷೆ ಮತ್ತು ಹಾಸ್ಯ ಪ್ರಜ್ಞೆ ಇರುವ ವ್ಯಕ್ತಿ. ಮೊಂಡು ವ್ಯಕ್ತಿ, ಹೆಚ್ಚು ಮಾತನಾಡುವರು. ಶಾಂತವಾಗಿರಲು ಬಯಸುವರು. ನಿಷ್ಠಾವಂತರು.  ಆತ್ಮ ವಿಶ್ವಾಸ ಉಳ್ಳವರು. ಬೇರೆಯವರನ್ನು ಪ್ರೇರೇಪಿಸುತ್ತಾರೆ.

೫.ಮೇ

ಇವರು ಬಹಳ ಎಚ್ಚರಿಕೆ ಇಂದ ಇರುವರು, ಸ್ಥಿರ ವ್ಯಕ್ತಿ ಮತ್ತು ಪ್ರಾಯೋಗಿಕ ವ್ಯಕ್ತಿ. ಅವರ ಬಳಿ ಬರುವ ಎಲ್ಲಾ ವಸ್ತುಗಳನ್ನು ಅವರು ಪ್ರೀತಿಸುವರು ಮತ್ತು ಅದರ ಕಾಳಜಿ ಮಾಡುವರು. ಚಿಕ್ಕ ವಯಸ್ಸಿಗೆ ದುಡ್ಡು ಮಾಡುವ ಕನಸನ್ನು ಕಾಣುವರು ಕೆಲವರು ಇದರಲ್ಲಿ ಸಫಲರು ಕೂಡ ಆಗುತ್ತಾರೆ. ಇವರು ಕೆಲಸ ಮಾಡುವುದರಲ್ಲಿ ನಿದಾನವಿರಬಹುದು, ಆದರೆ ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಪ್ರಾಮಾಣಿಕರಾಗಿರುವುದು ಅವರಿಗೆ ಇಷ್ಟ, ಮತ್ತು ಅದನ್ನು ಎಲ್ಲರಲ್ಲೂ ಅಪೇಕ್ಷಿಸುವರು.

೬.ಜೂನ್

ಇವರು ಒಳ್ಳೆಯ ಮನೋರಂಜನೆಯನ್ನು ನೀಡುವ ಮಕ್ಕಳಾಗಿರುತ್ತಾರೆ.  ಇವರು ಉತ್ತಮ ಬರವಣಿಗೆಯನ್ನು ಸುಲಭವಾಗಿ ಸಂಪಾದಿಸುತ್ತಾರೆ. ಇವರಲ್ಲಿ ಸಮಯ ಹಾಸ್ಯ ಪ್ರಜ್ಞೆ ಹೆಚ್ಚಿರುತ್ತದೆ, ಜೊತೆಗೆ ಇವರು ಒಳ್ಳೆಯ ಭಾಷಣಕಾರರು ಕೂಡ ಆಗುತ್ತಾರೆ.

ನೀವು ಹೆಚ್ಚು ಸ್ನೇಹಿತರನ್ನು ಪಡೆಯಲು ಇಚ್ಛಿಸುವಿರಿ ಮತ್ತು ಹೊರಗಡೆ ಸುತ್ತಾಡಲು ಇಷ್ಟಪಡುವಿರಿ. ನಿಮ್ಮ ಸಂಗಾತಿಯನ್ನು ನೀವು ಹೆಚ್ಚು ಪ್ರೀತಿಸುವಿರಿ.

೭.ಜೂಲೈ

ಇವರು ಪೋಷಣೆಯನ್ನು ಚೆನ್ನಾಗಿ ಮಾಡುವರು. ಇವರು ಮನೆಗೆ ನಾಯಿ, ಅನಾಥ ಮಕ್ಕಳನ್ನು ಕರೆತರುವವಂತಹ ಗುಣ ಉಳ್ಳವರು. ಇವರು ಬೇರೆಯವರ ಮತ್ತು ಅವರ ಭಾವನೆಗೆ ಬೇಗನೆ ಸ್ಪಂದಿಸುವ ಸೂಕ್ಷ್ಮ ವ್ಯಕ್ತಿಗಳು. ತಮ್ಮ ಕುಟುಂಬವನ್ನು ಹೆಚ್ಚು ಪ್ರೀತಿಸುವರು. ತಮ್ಮ ಕುಟುಂಬ ರಕ್ಷಣೆಗಾಗಿ ಎಂತಹ ಅಪಾಯವನ್ನು ಎದುರಿಸಲು ಸಿದ್ಧರಾಗಿರುವರು. ಅವರ ಪ್ರೀತಿಯ ಸಾಕು ಪ್ರಾಣಿಗಳನ್ನು ಮತ್ತು ಬೊಂಬೆಗಳನ್ನು ಮುದ್ದಾಡಲು ಅವರು ಇಷ್ಟ ಪಡುವರು.

೮.ಆಗಸ್ಟ್

ಇವರು ಸಿರಿವಂತಿಕೆಯನ್ನು ಬಯಸುವರು. ನೀವು ಅವರನ್ನು ಪ್ರಾಮಾಣಿಕರನ್ನಾಗಿ ಬೆಳೆಸಿದರೆ ಅವರು ಮುಕ್ತ ಮನಸ್ಸಿನ, ಒಳ್ಳೆಯ ವ್ಯಕ್ತಿ ಆಗಿ ಬೆಳೆಯುವರು. ಸಾಮಾನ್ಯವಾಗಿ ಅವರ ಎಲ್ಲಾ ವಿಷಯದಲ್ಲೂ ಯಶಸ್ಸನ್ನು ಅವರು ಕಾಣುತ್ತಾರೆ. ಅವರು ಎಲ್ಲಾ ಸಮಯದಲ್ಲೂ ರಕ್ಷಿಸಿಕೊಳ್ಳಬೇಕಾದ ಸ್ವಾಭಿಮಾನವನ್ನು ಹೊಂದಿರುವರು.

ಇವರು ಪ್ರಯಾಣ ಮಾಡುವುದನ್ನು ಬಯಸುವರು, ಸಾಹಸ ಕಾರ್ಯ ಮಾಡಲು ಇಚ್ಛಿಸುವರು, ಸ್ವಯಂ ನಿಯಂತ್ರಣ ಇರುವುದಿಲ್ಲ, ಆದರೆ ಆತ್ಮ ವಿಶ್ವಾಸವನ್ನು ಹೊಂದಿರುವರು. ಇವರು ಪ್ರತೀಕಾರವನ್ನು ತೀರಿಸದೆ ಬಿಡುವುದಿಲ್ಲ.

೯.ಸೆಪ್ಟೆಂಬರ್

ಇವರು ಪರಿಪೂರ್ಣರಾಗಲು ಪ್ರಯತ್ನಿಸುವವರು, ಮತ್ತು ಹೆಚ್ಚು ಜನರು ಇದರಲ್ಲಿ ಯಶಸ್ವಿ ಕೂಡ ಆಗುವರು. ಬೇರೆಯವರ ಬಗ್ಗೆ ಕಾಳಜಿವಹಿಸಿ ಅವರನ್ನು ನೋಡಿಕೊಳ್ಳುವುದರಲ್ಲಿ ಪರಿಣಿತರು. ಇವರು ಉತ್ತಮ ಬರವಣಿಗೆಗಾರರು.

ಇವರು ಯಾವಾಗಲು ಚುರುಕಾಗಿ ಮತ್ತು ಕ್ರಿಯಾಶೀಲರಾಗಿರುತ್ತಾರೆ. ಇವರು ತೆಗೆದುಕೊಳ್ಳುವ ದಿಡೀರ್ ನಿರ್ಧಾರದಿಂದ ನಂತರ ಮರುಗುವ ಪರಿಸ್ಥಿಯನ್ನು ತಾವೇ ಎದುರು ಮಾಡಿಕೊಳ್ಳುತ್ತಾರೆ.

೧೦.ಅಕ್ಟೋಬರ್

ಅವರು ಒಂದು ವಿಷಯದ ಹಲವು ಮುಖಗಳ ಬಗ್ಗೆ ಚಿಂತಿಸುವ ಶಕ್ತಿಯನ್ನು ಹೊಂದಿದ್ದು, ಎಲ್ಲತರಹ ಯೋಚಿಸುವರು, ಆದ್ದರಿಂದ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವುದು ಅವರಿಗೆ ಸ್ವಲ್ಪ ಕಷ್ಟವಾಗಬಹುದು. ಇವರು ಒಳ್ಳೆ ಕಲೆಗಾರರಾಗಿದ್ದು, ಇವರನ್ನು ಸೋಮಾರಿಯನ್ನಾಗಿ ಆಗಲು ಬಿಡಬೇಡಿ.

ಹರಟೆ ಹೊಡೆಯಲು ಇವರು ಹೆಚ್ಚು ಇಷ್ಟಪಡುತ್ತಾರೆ. ಅವರನ್ನು ಇಷ್ಟ ಪಡುವ ಪ್ರತಿಯೊಬ್ಬರನ್ನು ಇವರು ಪ್ರೀತಿಸುತ್ತಾರೆ. ಸುಳ್ಳು ಹೇಳುತ್ತಾರೆ, ಆದರೆ ನಾಟಕ ಆಡುವುದಿಲ್ಲ.

೧೧.ನವೆಂಬರ್

ಇವರು ಪ್ರಚಂಡ ವ್ಯಕ್ತಿಗಳಾಗುವರು. ಇವರು ಪತ್ತೇದಾರಿ ಕೆಲಸವನ್ನು ಚೆನ್ನಾಗಿ ಮಾಡುವರು. ಇವರು ಒಗಟುಗಳನ್ನು ಇಷ್ಟಪಡುವರು. ರಹಸ್ಯ ಪುಸ್ತಕಗಳನ್ನು ಅವರಿಗೆ ನೀಡಿ, ಅವರು ನಿಮ್ಮನ್ನು ಇಷ್ಟಪಡುವರು. ಪ್ರೀತಿ ಅಥವಾ ಕೋಪದಲ್ಲಿ ಅವರು ತುಂಬಾ ಭಾವುಕರಾಗಿರಬಹುದು. ಇವರ ಮನಸ್ಸನ್ನು ಬೇಗನೆ ಪರಿವರ್ತಿಸಬಹುದು.

ಇವರು ಪ್ರಾಮಾಣಿಕರು, ನಿಷ್ಠಾವಂತರು ಜೊತೆಗೆ ಅಪಾಯದ ವ್ಯಕ್ತಿ ಕೂಡ ಹೌದು. ಇವರು ಹೆಚ್ಚು ಜನರೊಂದಿಗೆ ಬೆರೆಯುತ್ತಾರೆ ಆದರೆ ರಹಸ್ಯವನ್ನು ಕಾಪಾಡಿಕೊಳ್ಳುವರು.

೧೨.ಡಿಸೆಂಬರ್

ಇವರು ಉತ್ಸಾಹ ಭರಿತ, ಆಶಾದಾಯಕ, ಮತ್ತು ಸಾಮಾನ್ಯವಾಗಿ ಖುಷಿ ಇಂದ ಇರುವ ವ್ಯಕ್ತಿಗಳಾಗುವರು. ಇವರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸಕ್ರಿಯರಾಗಿರುತ್ತಾರೆ. ಇವರು ಶಾಲೆಯನ್ನು ಇಷ್ಟ ಪಡುವರು, ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಬಯಸುವರು. ತತ್ವಶಾಸ್ತ್ರದ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಆಸಕ್ತರಾಗುವರು. ಮತ್ತು ಇವರು ಸ್ವಂತ ಬುದ್ದಿಯನ್ನು ಹೊಂದಿರುವವರು. ಪ್ರಯಾಣಿಸುವುದು ಇವರಿಗೆ ಅವಶ್ಯವಾಗಿರುತ್ತದೆ.

ಪ್ರಾಮಾಣಿಕರು, ನಿಷ್ಠಾವಂತರು, ದೇಶಭಕ್ತಿ ಇರುವವರು, ಇವರಿಗೆ ಎಲ್ಲಾ ವಿಷಯಗಳಲ್ಲೂ ಸ್ಪರ್ಧಿಗಳು ಇರುವರು. ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇವರ ಯೋಚನೆಯ ಶಕ್ತಿ ತುಂಬಾ ಆವಿಷ್ಕರಾಗಿದ್ದು, ಹೆಚ್ಚು ಮುಂದಾಲೋಚನೆ ಮಾಡುವರು. ಇವರು ತುಂಬಾ ಸೂಕ್ಹ್ಮವಾಗಿದ್ದು, ಇವರ ಮೆದುಳು ಯಾವಾಗಲು ಕೆಲಸ ಮಾಡುತ್ತಿರುತ್ತದೆ. ಇವರು ಕಡಿಮೆ ಮಾತನಾಡುವರು. ಇವರು ಸಂಗೀತವನ್ನು ಇಷ್ಟ ಪಡುವರು. ಇವರು ತಮ್ಮ ಬೇಸರದ ಭಾವನೆಯನ್ನು ಹಂಚಿಕೊಳ್ಳುವುದಿಲ್ಲ.

Leave a Reply

%d bloggers like this: