ವೀಕ್ಷಿಸಿ : ಸಿಸೇರಿಯನ್ ಎಂದರೆ ಹೇಗಿರುತ್ತದೆ ಎಂಬುದು ನೈಜ್ಯ ವ್ಯಕ್ತಿಯ ಸರ್ಜರಿ ಮೂಲಕ

ಹೇಗೆ ಆಗುತ್ತದೆ?

ಒಮ್ಮೆ ಅನಸ್ಥೆಸಿಯಾ ಕೆಲಸ ಮಾಡಲು ಶುರು ಆದೊಡನೆ, ನಿಮ್ಮ ಹೊಟ್ಟೆಯ ಮೇಲೆ ಒಂದು ನಂಜುನಿರೋಧಕ(antiseptic) ದ್ರವ್ಯ ಸವರಿಸುತ್ತಾರೆ, ತದನಂತರ ವೈದ್ಯರು ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಅಡ್ಡಡ್ಡವಾಗಿ ಒಂದು ಗೆರೆ ಕತ್ತರಿಕೆ ಮಾಡುವರು.

ಆ ಕತ್ತರಿಕೆಯ ನಂತರ, ಆ ಭಾಗದ ಚರ್ಮದ ಅಡಿಯಲ್ಲಿ ಇದ್ದ ಅಂಗಾಂಶಗಳನ್ನ ಕತ್ತರಿಸುತ್ತಾ ನಿಮ್ಮ ಗರ್ಭಕೋಶಕ್ಕೆ ಕೈ ಹಾಕುತ್ತಾರೆ. ನಿಮ್ಮ ಉದರದ ಸ್ನಾಯುಗಳಿಗೆ ತಲುಪಿದ ನಂತರ ಅವುಗಳನ್ನ ಬೇರ್ಪಡಿಸಿ( ಕತ್ತರಿಸುವ ಬದಲು ಇದನ್ನು ಕೈಯಲ್ಲೇ ವೈದ್ಯರು ಮಾಡುವರು) ಹಾಗು ಹರಡಿ, ಕೆಳಗಿರುವುದು ಗೋಚರವಾಗುವಂತೆ ಮಾಡುತ್ತಾರೆ.

ವೈದ್ಯರು ನಿಮ್ಮ ಗರ್ಭಕೋಶವನ್ನು ತಲುಪಿದಾಗ, ವೈದ್ಯರು ಬಹುತೇಕ ಬಾರಿ ಗರ್ಭಕೋಶದ ಕೆಳಭಾಗದಲ್ಲಿ ಅಡ್ಡಡ್ಡವಾಗಿ ಒಂದು ಕತ್ತರಿಕೆ ಮಾಡುತ್ತಾರೆ. ಇದನ್ನ LTUI (ಲೋಯರ್ ಟ್ರಾನ್ಸ್ ವರ್ಸ್ ಯುಟೆರಿನ್ ಇನ್ಸಿಜನ್) ಎನ್ನುವರು.

ಕೆಲವು ಅಪರೂಪದ ಪ್ರಕರಣಗಳಲ್ಲಿ ವೈದ್ಯರು ಉದ್ದುದ್ದ ಕತ್ತರಿಕೆ ಮಾಡಬೇಕಾಗುತ್ತದೆ. ಇದು ನಿಮ್ಮ ಮಗು ಅಕಾಲಿಕವಾಗಿ ಜನನ ಹೊಂದುವಾಗ, ಅಂದರೆ ನಿಮಂ ಗರ್ಭಕೋಶದ ಕೆಳಗಿನ ಭಾಗ ಇನ್ನೂ ತೆಳುವಾಗದೆ ಇರುವಂತಹ ಸಮಯದಲ್ಲಿ ಇಂತಹ ಹೆಜ್ಜೆ ತೆಗೆದುಕೊಳ್ಳಬೇಕಾಗುತ್ತದೆ. (ನಿಮಗೆ ಉದ್ದುದ್ದ ಇನ್ಚಿಜನ್ ಆಗಿದ್ದರೆ, ನಿಮಗೆ ಮುಂದಿನ ಬಾರಿ ಸ್ವಾಭಾವಿಕ ಹೆರಿಗೆ ಆಗುವ ಸಾಧ್ಯತೆಗಳು ಬಹಳ ಕಡಿಮೆ).

ವೈದ್ಯರು ಒಳಗಡೆ ಕೈ ಹಾಕಿ ನಿಮ್ಮ ಮಗುವನ್ನು ಹೊರ ತೆಗೆಯುತ್ತಾರೆ. ನಂತರ ಕರುಳುಬಳ್ಳಿಯನ್ನ ಕತ್ತರಿಸುತ್ತಾರೆ. ಕತ್ತರಿಸಿ ಆದಮೇಲೆ ಅವರು ಮಗುವನ್ನು ಮಕ್ಕಳತಜ್ಞ ಅಥವಾ ನರ್ಸ್ ಗಳಿಗೆ ಕೊಡುವ ಮುನ್ನ, ನೀವು ಒಮ್ಮೆ ನಿಮ್ಮ ಮಗುವನ್ನು ನೋಡಬಹುದು. ಉಳಿದ ಸಿಬ್ಬಂದಿ ನಿಮ್ಮ ಮಗುವಿನ ಪರಿಶೀಲಿಸಬೇಕಾದರೆ ವೈದ್ಯರು ನಿಮ್ಮ ಗರ್ಭಕಂಠವನ್ನ ಹೊರಗಡೆ ತೆಗೆಯುತ್ತಾರೆ ಹಾಗು ನಿಮ್ಮ ಹೊಟ್ಟೆಯನ್ನು ಹೊಲಿಯುತ್ತಾರೆ.

ಒಮ್ಮೆ ನಿಮ್ಮ ಮಗುವಿನ ಪರಿಶೀಲನೆ ಆದಮೇಲೆ ನರ್ಸ್ ನಿಮ್ಮ ಮಗುವನ್ನು ನಿಮ್ಮ ಪತಿಗೆ ನೀಡುವರು. ಆಗ ನೀವು ನಿಮ್ಮ ಮಗುವನ್ನು ಸರಿಯಾಗಿ ನೋಡಿಕೊಂಡು ಕಣ್ಣು ತುಂಬಿಸಿಸಕೊಳ್ಳಬಹುದು. ಈ ಸರ್ಜರಿ ನೈಜ್ಯ ವ್ಯಕ್ತಿಯ ಮೇಲೆ ಹೇಗೆ ನಡೆಯುತ್ತದೆ ಎಂಬುದನ್ನು ನೀವು ಈ ವೀಡಿಯೊ ಮೂಲಕ ನೋಡಬಹುದು 

 

Leave a Reply

%d bloggers like this: