ನಿಮ್ಮ ಮುದ್ದು ಕಂದಮ್ಮಗಳು ಸುಲಭವಾಗಿ ನಿದ್ರೆಗೆ ಜಾರಬೇಕೇ? ಇಲ್ಲಿವೆ 5 ಸೂತ್ರಗಳು

೪ ತಿಂಗಳಿಗಿಂತ ಕಡಿಮೆ ವಯಸ್ಸಿನ ಎಳೆ ಕಂದಮ್ಮಗಳು, ಅಲ್ಪಾವಧಿ ನಿದ್ರೆಗೆ ಜಾರುತ್ತವೆ. ಹೀಗೆ ಬೆಳೆಯುತ್ತಾ, ಹೋದಂತೆ ಹೆಚ್ಚಿನ ಅವಧಿಯ ನಿದ್ರೆಗೆ, ಜಾರುವ ವಿಧಾನವನ್ನು ಅನುಸರಿಸುತ್ತವೆ. ತಂದೆ ತಾಯಿಯ ಸಹಾಯವಿಲ್ಲದೆ ನಿದ್ರೆಗೆ ಯಾವಾಗ ಜಾರುತ್ತವೆ ಎಂದರೆ ಮಕ್ಕಳ್ಳಿಗೆ ನಿಗದಿತ ನಿದ್ರಾ ಸಮಯವನ್ನು ಪಾಲಿಸಿದಾಗ ಮಾತ್ರ, ಇದು ಸಾಧ್ಯ. ಮಕ್ಕಳ್ಳಿಗೆ ೬ ತಿಂಗಳಾಗುತ್ತಿದ್ದಂತೆ, ನಿಗದಿತ ಸಮಯದಲ್ಲಿ ನಿದ್ರೆಗೆ ಹೋಗುವಂತೆ ಮಾಡುವುದು, ಪೋಷಕರ ಕಯ್ಯಲ್ಲಿದೆ. ರಾತ್ರಿ ಬೇಗ ಮಲಗಿಸಿದ್ದಲ್ಲಿ, ಸುಮಾರು ೧೦-೧೨ ಗಂಟೆಗಳ ಕಾಲ ಎಚ್ಚರವಿಲ್ಲದೆ ಮಕ್ಕಳು ಮಲಗುತ್ತಾರೆ. ಆದರೆ ಹೀಗೆ ಮಕ್ಕಳ್ಳನ್ನು ಅಷ್ಟು ಬೇಗ ನಿದ್ರೆಗೆ ಜಾರುವಂತೆ ಮಾಡುವುದು ಹೇಗೆ ಎಂದು ನೀವೆಲ್ಲರು ಯೋಚಿಸುತ್ತಿರುವಿರಲ್ಲವೇ?

ಇಲ್ಲಿದೆ ೫ ಸುಲಭವಾದ ಸೂತ್ರಗಳು. ಇದನ್ನು ಅನುಸರಿಸಿದ್ದಲ್ಲಿ ನಿಮ್ಮ ಮಕ್ಕಳು ಸರಿಯಾದ ಸಮಯದಲ್ಲಿ ನಿದ್ರೆಗೆ ಜಾರುವುದು ಖಚಿತ.

೧. ನಿಮ್ಮ ದಿನಚರಿಗೆ ಅನುಗುಣವಾಗಿ, ಮಗುವಿನ ನಿದ್ರಾ ಸಮಯವನ್ನು ನಿಗಧಿಪಡಿಸಿ

ಮೊದಲಿಗೆ, ನಿಮ್ಮ ಮಗುವು ಎಷ್ಟು ಗಂಟೆಯ ಕಾಲ ನಿದ್ರಿಸುತ್ತದೆ ಎಂದು ಗಮನಿಸಿ. ನಂತರ ಅದರ ನಿದ್ರೆಯ ಸಮಯವನ್ನು ನಿಗದಿ ಪಡಿಸಿ. ಕೆಲವೊಮ್ಮೆ ಮಕ್ಕಳ್ಳನ್ನು, ರಾತ್ರಿ ಬೇಗ ಮಲಗಿಸಿದರೆ, ಬೆಳ್ಳಿಗ್ಗೆ ಬೇಗ ಏಳುವ ಸಾಧ್ಯತೆಗಳಿರುತ್ತದೆ. ಹಾಗಾಗಿ ನೀವು ಮಲಗುವ ೧-೨ ಗಂಟೆಯ ಅವಧಿಯೊಳಗೆ ಮಗುವನ್ನು ಮಲಗಿಸುವುದು ಒಳ್ಳೆಯದು. ಉದಾ; ನಿಮ್ಮ ಮಗುವು ೧೦ ಗಂಟೆಗಳ ಕಾಲ ನಿದ್ರಿಸುತ್ತದೆ ಎಂದು ಭಾವಿಸಿದರೆ, ನೀವು ೧೧ ಗಂಟೆಗೆ ಮಲಗಿದರೆ, ಮಗುವನ್ನು ರಾತ್ರಿ ೯ ಗಂಟೆಯೊಳಗೆ ಮಲಗಿಸುವುದು ಉತ್ತಮ. ಹೀಗೆ ಮಾಡಿದ್ದಲ್ಲಿ ಮುಂಜಾನೆ, ಎದ್ದ ಕೂಡಲೇ ನೀವು ನಿಮ್ಮ ಕೆಲಸವನ್ನು ಮುಗಿಸಿ, ನಂತರ ಮಗುವಿನ ಪೋಷಣೆಯ ಕಡೆ ಗಮನ ವಹಿಸುವಲ್ಲಿ ಸಹಾಯವಾಗುತ್ತದೆ.

೨. ರಾತ್ರಿ ಸಮಯದಲ್ಲಿ ಹಾಕುವ ಬಟ್ಟೆಗಳನ್ನು ತೊಡಿಸಿ

ಮಗುವು ನಿದ್ರೆಗೆ ಹೋಗುವ ೨೦-೩೦ ನಿಮಿಷಗಳ ಮೊದಲು, ರಾತ್ರಿ ಬಟ್ಟೆಗಳನ್ನು ತೊಡಿಸಿ. ಇದರೊಂದಿಗೆ ರಾತ್ರಿ ಸಮಯಕ್ಕೆಂದೇ ಸಿಗುವ ಡಯಾಪೆರ್(diaper) ಅನ್ನು ಬಳಸಿ. ನಿಮ್ಮ ಬಟ್ಟೆಯನ್ನು ಕೂಡ ಬದಲಾಯಿಸಿಕ್ಕೊಳ್ಳಿ. ಹೀಗೆ ಪ್ರತಿ ದಿನ ರಾತ್ರಿ, ಬಟ್ಟೆ ಬದಲಾಯಿಸುವುದರಿಂದ, ಮಗುವಿಗೆ ಅದು ನಿದ್ರೆಯ ಸಮಯವೆಂದು ಮನದಟ್ಟಾಗಿ, ನಿದ್ರೆಗೆ ಜಾರಲು ಪ್ರಾರಂಭಿಸುತ್ತದೆ.

೩. ಮಲಗುವ ಕೋಣೆಯನ್ನು ಕತ್ತಲಾಗಿಸಿ

ಮಗುವನ್ನು ತೊಟ್ಟಿಲಿಗೆ ಹಾಕುವ ಮೊದಲು, ಕೋಣೆಯನ್ನು ಕತ್ತಲಾಗಿಸಿ. ಯಾವುದೇ ರೀತಿಯಾದಂತಹ ಆಟಿಕೆಯ ದೀಪಗಳನ್ನು, ಮಗುವಿನ ಕೋಣೆಯೊಳಗೆ ಹಚ್ಚದಿರಿ. ಜೊತೆಗೆ, ಮುಂಜಾನೆ ಮಗುವು ತಾನಗಿಯೇ ಏಳುವವರೆಗೂ,  ಕೋಣೆಯನ್ನು ಕತ್ತಲಾಗಿಸಿ. ಕಿಟಕಿ ಬಾಗಿಲುಗಳಿಗೆ ಪರದೆಗಳನ್ನು ಉಪಯೋಗಿಸುವುದು ಸೂಕ್ತ. ಒಟ್ಟಿನ್ನಲ್ಲಿ, ಯಾವುದೇ ರೀತಿಯಾದ ಬೆಳಕು, ಮಗುವಿನ ಕೋಣೆಯೊಳಗೆ ಸುಳಿಯದ ಹಾಗೆ ನೋಡಿಕ್ಕೊಳ್ಳಿ.

೪. ಮೆಲುವಾದ ಹಾಗು ಮೃದುವಾದ ಸಂಗೀತವನ್ನು ಕೇಳಿಸಿ

ಕಂದಮ್ಮಗಳು ಮಲಗುವ ೧೦-೧೫ ನಿಮಿಷಗಳ ಮುಂಚೆ ಮೃದುವಾದ ಸಂಗೀತವನ್ನು, ಹಿನ್ನಲೆಯಲ್ಲಿ ಚಾಲನೆ ಮಾಡಿ. ಇಂತಹ ಸಮಯದಲ್ಲಿ ಮಗುವಿಗೆ, ಪುಸ್ತಕದಲ್ಲಿರುವ ಗೊಂಬೆಗಳು, ಚಿತ್ರಗಳನ್ನು ತೋರಿಸುವುದರ ಮೂಲಕ  ನಿದ್ರೆಗೆ ಜಾರುವಂತೆ ಮಾಡಬಹುದು. ಆಟಿಕೆಯ ಗೊಂಬೆಗಳ್ಳನ್ನು ನೀಡಬಹುದು ಆದರೆ, ನಿತ್ಯವು ನಿದ್ರೆಗೆ ಜಾರುವ ಸಮಯದ್ದಲ್ಲಿ, ಅದೇ ಆಟಿಕೆಯನ್ನು ನೀಡಬೇಕು. ಹೀಗೆ ಮಾಡುವುದರಿಂದ ಮಗುವು ಆ ಆಟಿಕೆಯನ್ನು, ಹಿಡಿದ ಕೂಡಲೇ ,ಇದು ನಿದ್ರೆಯ ಸಮಯವೆಂದು ತಿಳಿದು, ನಿದ್ರೆಗೆ ಸುಲಭವಾಗಿ ಜಾರುತ್ತದೆ. ಈ ರೀತಿ ಮಕ್ಕಳಿಗೆ ಅಭ್ಯಾಸ ಮಾಡಿಸಿದರೆ ,ನೀವು ಪ್ರಯಾಣ ಮಾಡುವ ಸಮಯದಲ್ಲಿ ಮಕ್ಕಳಿಗೆ ಕೇವಲ ಆಟಿಕೆಯನ್ನು ನೀಡುವುದರ ಮೂಲಕ ನಿದ್ರೆಗೆ ಜಾರಿಸಿ ನಿಮ್ಮ ಪ್ರಯಾಣವನ್ನು ಸುಗಮಗೊಳಿಸಿಕೊಳ್ಳಬಹುದು.

೫. ಮಕ್ಕಳ ಪುಸ್ತಕವನ್ನು ಓದಿ

ಮಗುವನ್ನು ತೊಟ್ಟಿಲೊಳಗೆ ಹಾಕಿದ ಕೂಡಲೇ, ಮಗುವಿನ ಹೊಟ್ಟೆ ಹಾಗು ಬೆನ್ನನ್ನು ಮೃದುವಾಗಿ ಸವರುತ್ತ, ನಿಧಾನವಾಗಿ ಪುಸ್ತಕವನ್ನು ಓದುತ್ತಾ ಹೋಗಿ. ನೀವು ಓದುತ್ತಿರುವುದು ಏನೆಂದು ತಿಳಿಯದಿದ್ದರೂ, ತಾಯಿಯ ಮೆಲು ದ್ವನಿ ಕೇಳಿ ಮಗುವನ್ನು, ನಿದ್ರೆಗೆ ಜಾರುವಂತೆ ಮಾಡುತ್ತದೆ. ಕಣ್ಣು ರೆಪ್ಪೆಗಳು ಮುಚ್ಚುವ ಹಂತದವರೆಗೆ, ನೀವು ಮಗುವಿನ ಬಳಿ ಇರಬೇಕು. ಒಮ್ಮೆ ಮಗುವು ಕಣ್ಣಿನ ರೆಪ್ಪೆಯನ್ನು ಮುಚ್ಚಿ ನಿದ್ರೆಗೆ ಜಾರುತ್ತಿದೆ ಎಂದು ತಿಳಿದಾಗ ನೀವು ನಿಮ್ಮ ಕೆಲಸದಲ್ಲಿ ಪಾಲ್ಗೊಳ್ಳಬಹುದು. ಪೂರ್ತಿ ಕಣ್ಣು ಮುಚ್ಚಿ ಮಲಗುವ ಹಂತದವರೆಗು, ಕಾಯುವ ಅಗತ್ಯವೇನಿಲ್ಲ. ಮಗುವು ಸುಲಭವಾಗಿ ನಿದ್ರೆಗೆ ಜಾರುತ್ತದೆ.

ಹೀಗೆ ಮೇಲ್ಕಂಡ ಸೂತ್ರಗಳ್ಳನ್ನು ದಿನ ನಿತ್ಯ ಅನುಸರಿಸಿ, ಪುನರಾವರ್ತಿಸಿದ್ದಲ್ಲಿ, ನಿಮ್ಮ ಮುದ್ದು ಕಂದಮ್ಮಗಳು ಎಷ್ಟು ಬೇಗ ನಿದ್ರೆಗೆ ಜಾರುತ್ತದೆ ಎಂದು ನಿಮಗೇ ತಿಳಿಯುತ್ತದೆ. ನಿಮಗೆ ಈ ಲೀಖನ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Leave a Reply

%d bloggers like this: