ಮಗುವನ್ನು ಚುರುಕಾಗಿ ಬೆಳೆಸಲು 5 ಮಾರ್ಗಗಳು

ಮಗುವು ತನ್ನ ಎಲ್ಲಾ ಸಾಮರ್ಥ್ಯಗಳನ್ನು ಉಪಯೋಗಿಸಿಕೊಂಡು ಒಂದು ಸುಂದರ ವ್ಯಕ್ತಿತ್ವವನ್ನು ನಿರ್ಮಿಸಬೇಕೆನ್ನುವುದು ಎಲ್ಲ ಪಾಲಕರ ಕನಸು. ಮಗುವು ಚೂಟಿಯಾಗಲು ಬೇಕಾದ ಎಲ್ಲ ಬೆಂಬಲಗಳನ್ನೂ ನೀವು ಮಗುವಿಗೆ ನೀಡುವಿರಿ. ಆದರೆ, ಮಗುವು ಸ್ಮಾರ್ಟ್ ಆಗಿ ಬೆಳೆಯುವುದೆಂದರೆ ನೀವಂದುಕೊಂಡಂತೆ ಯಾವುದಾದರೂ ಅಸಾಮಾನ್ಯ ಸಿದ್ಧಿಯನ್ನು ಮಗುವು ಮೇಳೈಸುವಂತೆ ಮಾಡುವುದಲ್ಲ ಅಥವಾ ಇನ್ನಿತರ ತರಬೇತು ಕೇಂದ್ರಗಳಲ್ಲಿ ಸೇರಿಸುವುದೂ ಅಲ್ಲ.

ದಿನ ನಿತ್ಯದ ವಾಯನ

ಎಳವೆಯಲ್ಲಿಯೇ ಮಗುವಿನ ವಾಯನಾ ಸಾಮರ್ಥ್ಯವನ್ನು ಪ್ರೋತ್ಸಾಹಿಸಬೇಕು. ಪಠ್ಯೇತರ ವಿಷಯಗಳಲ್ಲದೆ, ದಿನವೂ ಒಂದು ಗಂಟೆಗಳ ಕಾಲ ಇದರ ವಿಷಯಗಳ ಬಗ್ಗೆಯೂ ಓದಲು ಮೀಸಲಾಗಿಡಬೇಕು.ಇದರಿಂದ ಮಗುವಿನ ಶಬ್ದ ಭಂಡಾರ, ವ್ಯಾಕರಣ ಹಾಗೂ ಬುದ್ಧಿವಂತಿಕೆ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಮಗುವು ಬೆಳೆದಂತೆಲ್ಲ ಮಗುವಿನ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಲಿರುವ ಸ್ವಾತಂತ್ರ್ಯವನ್ನು ನೀಡಿ. ಮಗುವನ್ನು ಒಮ್ಮೆಯೂ ಓದುವಂತೆ ಒತ್ತಾಯ ಮಾಡದಿರಿ. ಇತರ ಸಾಮಾನ್ಯ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಲಿರುವ ಅವಕಾಶವೆಂದು ಮಾತ್ರ ತಿಳಿಯಿರಿ.

 

ನಿಗದಿತ ಟಿ ವಿ ಸಮಯ

ಮಗುವಿನ ಟಿವಿ ನೋಡುವ ಸಮಯವನ್ನು ಕಡಿಮೆಗೊಳಿಸದೇ, ಅದನ್ನು ಜಾಣತನದಿಂದ ವಿನಿಯೋಗಿಸಿ. ಮಗುವು ಡಿಸ್ಕವರಿ ಚಾನೆಲ್, ಜಿಯಾಗ್ರಫಿ, ಹಿಸ್ಟರಿ ಚಾನೆಲ್ ಗಳಂತಹ ಜ್ಞಾನ ವರ್ಧಕ ಚಾನೆಲ್ ಗಳನ್ನು ನೋಡುವಂತೆ ಪ್ರೇರೇಪಿಸಿ. ಮನೋರಂಜನೆಯ ಜತೆಗೆ ಬುದ್ಧಿ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಚಾನೆಲ್ ಗಳನ್ನು ಆಯ್ಕೆ ಮಾಡಿರಿ. ಹೀಗೆ ಕಡಿತಗೊಳಿಸಿದ ಸಮಯವನ್ನು ಮಕ್ಕಳೊಂದಿಗೆ ವಿಚಾರ ವಿನಿಮಯಕ್ಕಾಗಿ ಹಾಗೂ ಅವರ ಬುದ್ಧಿಮತ್ತೆಯನ್ನು ಹೆಚ್ಚಿಸುವಂತಹ ಆಟಗಳಲ್ಲಿ ತೊಡಗಿರಿ.

 

ಸೃಜನಶೀಲತೆಯನ್ನು ಹೆಚ್ಚಿಸಿ

ಚಿತ್ರ ರಚನೆ,ಶಬ್ದ ರಚನೆ ಅಥವಾ ಡೂಡಲ್ಸ್ ಗಳಂತಹ ಸೃಜನಶೀಲತೆಯನ್ನು ಮಕ್ಕಳಲ್ಲಿ ಗುರುತಿಸಿ, ಪ್ರೋತ್ಸಾಹಿಸಿ. ಅದೇನಿದ್ದರೂ ಮಕ್ಕಳ ಮನೋಭಾವವನ್ನು ಹಾಕುವ ಘಟಕ ಮಾತ್ರ. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಹೊರ ಪ್ರಪಂಚವನ್ನು ವ್ಯತ್ಯಸ್ತ ದೃಷ್ಟಿಕೋನದಿಂದ ನೋಡುವ ಮನೋಧೈರ್ಯವನ್ನು ನೀಡುತ್ತದೆ. ಆದ ಕಾರಣ ಮಕ್ಕಳ ಕೈಗೆ ಯಾವಾಗಲೂ ಬಣ್ಣದ ಪೆನ್ಸಿಲ್ ಹಾಗೂ ಕಾಗದಗಳನ್ನು ನೀಡಿ, ಅದರಿಂದ ಹೊರಬರುವ ಕಲೆಗಳನ್ನು ಆಸ್ವಾದಿಸಿರಿ.

 

ದಿನವಿಡೀ ಕೆಲಸ, ಆಟವಿಲ್ಲ-ತಪ್ಪು ಭಾವನೆ

ಮಕ್ಕಳು ಚೂಟಿಯಾಗುವಂತೆ ನೋಡಿ ಕೊಳ್ಳುವುದೆಂದರೆ ದಿನವಿಡೀ ಯಾವುದಾದರೊಂದು ಚಟುವಟಿಕೆಗಳಲ್ಲಿ ಮಗುವು ತೊಡಗಿಕೊಂಡಿರುವಂತೆ ಒತ್ತಡ ಹೇರುವುದಿಲ್ಲ. ಆಟವಾಡುವುದು ಕೂಡ ಮಗುವು ತನ್ನತನವನ್ನು ಕಂಡುಕೊಳ್ಳಲು ಇನ್ನೊಂದು ಮಾರ್ಗ. ದಿನವೂ ಮಗುವನ್ನು ಆಟದ ಮೈದಾನಕ್ಕೆ ಕರೆದೊಯ್ಯಿರಿ. ಮೈದಾನದಲ್ಲಿರುವ ಆಟದ ಸಾಮಾನುಗಳು, ಆಕೃತಿ, ಬಣ್ಣಗಳು ಇವೆಲ್ಲವೂ ಮಗುವಿನ ಬುದ್ಧಿಮತ್ತೆಯನ್ನು ಒರೆಗೆ ಹಚ್ಚುವಂತಹವುಗಳೇ…!!

 

ದಿನ ನಿತ್ಯದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ

ಪ್ರತಿಯೊಂದು ವಿಷಯಗಳ ಬಗ್ಗೆಯೂ ಮಕ್ಕಳಲ್ಲಿ ಚರ್ಚಿಸುವುದು ಅತಿ ಅಗತ್ಯ. ಪ್ರಪಂಚವನ್ನು ಬೆರಗು ಕಣ್ಣುಗಳಿಂದ ನೋಡುವ ಮಗುವಿಗೆ ಎಲ್ಲಾ ವಿಷಯಗಳೂ ಅಚ್ಚರಿ ಮೂಡಿಸುವುದು. ಅವರ ಕುತೂಹಲವನ್ನು ಹೆಚ್ಚಿಸುವಂತೆ ಮಕ್ಕಳೊಂದಿಗೆ ಮಗುವಾಗಿ ಎಲ್ಲ ಕಾರ್ಯಗಳನ್ನು ಬಣ್ಣಿಸಿ. ಜಾಗತಿಕ ಕಾರ್ಯಗಳ ಬಗ್ಗೆ ತಿಳಿಯಪಡಿಸಿ, ಪ್ರಪಂಚ ಜ್ಞಾನವನ್ನು ಮೂಡಿಸಿ. ಆದರೆ ಯಾವ ವಿಷಯಗಳನ್ನು ಮಕ್ಕಳ ತಲೆಯಲ್ಲಿ ಹೇರುವ ಪ್ರಯತ್ನ ಮಾಡಬೇಡಿ. ನೆನಪಿಡಿ, ಅವರಿನ್ನೂ ಪುಟಾಣಿಗಳು…

Leave a Reply

%d bloggers like this: