ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವ 5 ಸಾಮಾನ್ಯ ತ್ವಚೆಯ ಸಮಸ್ಯೆಗಳು

ತಾಯಿ ಆಗುವುದು ಅದು ಒಂದು ಹೆಣ್ಣಿನ ದೊಡ್ಡ ಕನಸು ಆಗಿರುತ್ತದೆ. ಬಹಳಷ್ಟು ಹೆಂಗಸರು ಅದೃಷ್ಟವಂತವರಾಗಿದ್ದು, ಅವರು ತಮ್ಮ ಗರ್ಭಧಾರಣೆಯನ್ನು ಸಲೀಸಾಗಿ ಮುಗಿಸುತ್ತಾರೆ. ಅವರು ಇನ್ನಷ್ಟು ಸದೃಢ ಮತ್ತು ಸುಂದರ ಆಗುತ್ತಾರೆ. ಆದರೆ ಉಳಿದವರಿಗೆ ಈ ಗರ್ಭಧಾರಣೆ ಸಮಯದಲ್ಲಿ ತ್ವಚೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇವು ಅವರ ಬಾಹ್ಯ ಅಂದಕ್ಕೆ ಕುತ್ತು ತರುತ್ತವೆ. ಹೀಗಾಗಿ ನೀವು ಈ ಸಮಸ್ಯೆಗಳ ಬಗ್ಗೆ ಮುಂಚೆಯೇ ಅರಿತಿರಬೇಕು. ಹಾಗಿದ್ದರೆ, ಅಂತಹ ಸಾಮಾನ್ಯ ತ್ವಚೆಯ ಸಮಸ್ಯೆಗಳು ಯಾವುದೆಂದು ತಿಳಿಯಬೇಕಾದಲ್ಲಿ ಈ ಕೆಳಗೆ ನಾವು ನೀಡಿರುವ ಪಟ್ಟಿಯನ್ನು ಓದಿ.

೧. ಮೊಡವೆ

ಮೊಡವೆಗಳು ಗರ್ಭಧಾರಣೆಯ ಸಮಯದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಏಕೆಂದರೆ ಈ ಸಮಯದಲ್ಲಿ ಹೆಣ್ಣಿನ ತ್ವಚೆಯು ಬಹಳ ಸೂಕ್ಷ್ಮವಾಗಿರುತ್ತದೆ. ಇದು ಗರ್ಭಧಾರಣೆಯ ಯಾವುದೇ ಸಮಯದಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಯಾವುದೇ ಸಮಯದಲ್ಲಿ ಮಾಯವಾಗಬಹುದು, ಅಥವಾ ಹಾಗೆಯೇ ಉಳಿಯಬಹುದು. ಹೀಗಾಗಿ ನೀವು ನಿಮ್ಮ ಮುಖವನ್ನು ಎಣ್ಣೆ ಮುಕ್ತವಾಗಿ ಇಡಲು ಪ್ರತಿದಿನ ಆಗಿಂದಾಗ ಮೃದು ಸೋಪ್ ಅಥವಾ ಕ್ಲೆನ್ಸರ್ ಮೂಲಕ ತೊಳೆಯಬೇಕು. ಒರಟು ಒರೆಸುವ ಬಟ್ಟೆಯಿಂದ ನಿಮ್ಮ ಮುಖವನ್ನು ಒರೆಸಿಕೊಳ್ಳಬೇಡಿ, ಬದಲಿಗೆ ಕೈಗಳಲ್ಲಿ ಮುಖವನ್ನು ಒರೆಸಿಕೊಳ್ಳಿ. ಅಲ್ಲದೆ ನಿಮ್ಮ ಕೈಗಳಿಂದ ಮೊಡವೆಗಳನ್ನು ಕಿವುಚಬೇಡಿ.

೨. ತುರಿಕೆ

ಸಾಮಾನ್ಯವಾಗಿ ಗರ್ಭಧಾರಣೆ ಸಮಯದಲ್ಲಿ ಈಸ್ಟ್ರೋಜೆನ್ ಗತಿ ಏರಿಕೆ ಆಗುವುದರಿಂದ ಹೊಟ್ಟೆ, ಕಾಲುಗಳು ಮತ್ತು ಸ್ತನಗಳ ಸುತ್ತ ತುರಿಕೆ ಕಾಣಿಸಿಕೊಳ್ಳುವುದು. ಅಲ್ಲದೆ ಕೆಲವು ಹೆಂಗಸರಲ್ಲಿ ಇನ್ನೂ ತೀವ್ರವಾದ ಶುಷ್ಕ ತ್ವಚೆ, ಸೋರಿಯಾಸಿಸ್, ಇತ್ಯಾದಿ ಕಾಣಿಸಿಕೊಳ್ಳಬಹುದು. ಈ ತುರಿಕೆಯಿಂದ ಶಮನ ಹೊಂದಲು ಈ ಕೆಳಗಿರುವ ಸೂಚನೆಗಳನ್ನು ಪಾಲಿಸಿ :

ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ (ತಣ್ಣೀರು ಸ್ನಾನ ಮಾಡಿದರೆ ಇನ್ನೂ ಒಳ್ಳೆಯದು)

ಮೃದು ಸೋಪ್ ಬಳಸಿ ಮತ್ತು ಟವೆಲ್ ಅಲ್ಲಿ ಮೃದುವಾಗಿ ಒರೆಸಿಕೊಳ್ಳಿ

ಬಿಸಿಲಿದ್ದಾಗ ಆಚೆ ಹೆಚ್ಚು ಹೊತ್ತು ಕಳೆಯಬೇಡಿ

ಆದಷ್ಟು ಕಾಟನ್ ಬಟ್ಟೆ ಧರಿಸಿ

೩. ಮಚ್ಚೆ ಬದಲಾವಣೆ

ಮಚ್ಚೆಯಲ್ಲಿ ಬದಲಾವಣೆಯು ಗರ್ಭಧಾರಣೆ ಸಮಯದಲ್ಲಿ ಉಂಟಾಗುವ ಒಂದು ಸಾಮಾನ್ಯ ತ್ವಚೆಯ ಸಮಸ್ಯೆ. ಇದು ಕೂಡ ದೇಹದಲ್ಲಿನ ಈಸ್ಟ್ರೋಜೆನ್ ಹಾರ್ಮೋನ್ ಏರಿಕೆಯಿಂದ ಉಂಟಾಗುವುದು. ಮಚ್ಚೆಗಳು ಇನ್ನಷ್ಟು ದಪ್ಪ ಆಗುತ್ತವೆ ಮತ್ತು ಅವುಗಳ ಬಣ್ಣ ಇನ್ನಷ್ಟು ಗಾಢ ಆಗುತ್ತವೆ.

೪. ಸ್ಟ್ರೆಚ್ ಮಾರ್ಕುಗಳು

ಸ್ಟ್ರೆಚ್ ಮಾರ್ಕುಗಳು ಸಾಮಾನ್ಯವಾಗಿ ಮೂರನೇ ತ್ರೈಮಾಸಿಕದಲ್ಲಿ ಕಾಣಿಸಿಕೊಳ್ಳುವುದು. ಇವುಗಳು ಸಾಮಾನ್ಯವಾಗಿ ನಿಮ್ಮ ಸ್ತನಗಳು, ಸೊಂಟ, ತೊಡೆಗಳು, ಪೃಷ್ಠದ ಮೇಲೆ ಕಾಣಿಸಿಕೊಳ್ಳುತ್ತವೆ. ಇವುಗಳು ಉಂಟಾಗುವುದಕ್ಕೆ ಮುಖ್ಯ ಕಾರಣ ಎಂದರೆ ಅದು ಹಾರ್ಮೋನುಗಳ ಗತಿಯಲ್ಲಿ ಆಗುವ ಏರುಪೇರು. ನೀವು ತುಂಬಾ ವೇಗವಾಗಿ ತೂಕ ಗಳಿಸಿಕೊಂಡರೆ, ಒಂದಕ್ಕಿಂತ ಹೆಚ್ಚು ಮಗುವನ್ನು ಹೊತ್ತಿದ್ದರೆ, ಅಥವಾ ಹೆಚ್ಚು ಆಮ್ನಿಯೋಟಿಕ್ ದ್ರವ್ಯ ಹೊಂದಿದ್ದರೆ, ಸ್ಟ್ರೆಚ್ ಮಾರ್ಕುಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಮಾರ್ಕುಗಳ ಕೆಂಪು ಬಣ್ಣ ಕಡಿಮೆ ಮಾಡಲು, ಮಾರ್ಕುಗಳು ಮತ್ತಷ್ಟು ಹರಡದಂತೆ ಕಾಪಾಡಲು ಮತ್ತು ನಿಮ್ಮ ದೇಹದಲ್ಲಿ ಕಾಲಜನ್ ಉತ್ಪತ್ತಿ ಹೆಚ್ಚಿಸಲು ನೀವು ಬೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಲೇಪಿಸಿಕೊಳ್ಳಬಹುದು.

೫. ಲಿನಿಯ ನಿಗ್ರ

ಇದು ಬಹುಷಃ ಬಹುತೇಕ ಎಲ್ಲಾ ಹೆಂಗಸರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಲಿನಿಯ ನಿಗ್ರ ಎಂದರೆ ನಿಮ್ಮ ಹೊಕ್ಕಳಿನಿಂದ ಹಿಡಿದು ನಿಮ್ಮ ಮೂಳೆಗಳ ಕೇಂದ್ರದವರೆಗೆ ಒಂದು ಉದ್ದನೆಯ ಬಿಳಿ ಗೆರೆ ಕಾಣಿಸಿಕೊಳ್ಳುವುದು. ಕೆಲವರಲ್ಲಿ ಇದು ಇನ್ನೂ ಉದ್ದ ಇರಬಹುದು. ಎರಡನೇ ತ್ರೈಮಾಸಿಕದಲ್ಲಿ ಇದು ಇನ್ನಷ್ಟು ಗಾಢ ಬಣ್ಣಕ್ಕೆ ತಿರುಗುವುದು ಕಾಣಬಹುದು. ಇದು ಮಗುವಾದ ಕೆಲವು ತಿಂಗಳುಗಳ ನಂತರ ಮಾಯವಾಗಬಹುದು.

Leave a Reply

%d bloggers like this: