ನಿಮ್ಮ ತೋರ್ಬೆರಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಗೊತ್ತೇ?

ನಮ್ಮ ಅಂಗೈ ರೇಖೆ ನೋಡಿ ಭವಿಷ್ಯ ಹೇಳುವುದು ಸಹಜ, ನಿಮ್ಮ ಜನ್ಮ ಜಾತಕ ನೋಡಿ ಹೇಳುವುದು ಸಾಮಾನ್ಯ ಆದರೆ ನಿಮ್ಮ ಬೆರಳುಗಳು ನಿಮ್ಮ ಬಗ್ಗೆ ಏನು ಹೇಳುತ್ತವೆ ನಿಮಗೆ ತಿಳಿದಿದೆಯೇ?

ನಿಮಗೆ ಅಚ್ಚರಿಯಾಗಬಹುದು ನಿಮ್ಮ ಬೆರಳುಗಳ ಆಕಾರ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ನಿಮ್ಮ ಬೆರಳಿನ ಪ್ರಕಾರ ನಿಮ್ಮ ವ್ಯಕ್ತಿತ್ವ ಯಾವುದು ಎಂದು ಇಲ್ಲಿ ತಿಳಿಯೋಣ!

೧.ನಿಮ್ಮ ತೋರು ಬೆರಳು A ಆಕಾರದಲ್ಲಿದರೆ (ತುದಿ ಚಿಕ್ಕದಿದ್ದು, ಕೆಳಗೆ ದಪ್ಪ ಆಗುತ್ತಾ ಹೋದರೆ)

ನೀವು ಒಂಟಿತನ ಇಷ್ಟ ಪಡುವಿರಿ, ಬೇಸರವಾಗಿರುವಿರಿ. ನಿಮ್ಮ ಅನಿಸಿಕೆ ಮತ್ತು ಭಾವನೆಗಳನ್ನು ಮುಚ್ಚಿಡುವಿರಿ. ನೀವು ನಿಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುವಿರಿ.ನಿಮಗೆ ಹತ್ತಿರವಾದವರನ್ನು ಪ್ರೀತಿ ವಿಶ್ವಾಸದಿಂದ ಕಾಣುವಿರಿ.

೨.ನಿಮ್ಮ ತೋರು ಬೆರಳು ಸ್ವಲ್ಪ ಬಲಕ್ಕೆ ಬಾಗಿದ್ದರೆ

ನೀವು ಜನರನ್ನು ಅಥವಾ ಹೊಸದಾಗಿ ಪರಿಚಯವಾದ ವ್ಯಕ್ತಿಗಳ ನಡುವೆ ಬೆರೆಯುವ ಮುನ್ನ ಸಂಶಯವನ್ನು ಪಡುವಿರಿ. ಆದರೆ ನೀವು ನಿರೀಕ್ಷೆಗೂ ಮೀರಿದ ನಿಷ್ಠಾವಂತ ವ್ಯಕ್ತಿ. ನೀವು ನಂಬಿಕೆ ಕಳೆದುಕೊಂಡ ವ್ಯಕ್ತಿಯನ್ನು ಪುನಃ ನಿಮ್ಮ ಬಳಿ ಸೇರಿಸಲು ಇಚ್ಛಿಸುವುದಿಲ್ಲ. ಬೇರೆಯವರಿಗೆ ನೀವು ಹೊರಟಾಗಿ ಕಂಡರು ನೀವು ತುಂಬಾ ಸೂಕ್ಷ್ಮ ವ್ಯಕ್ತಿ.

೩.ಬೆರಳಿನ ಮದ್ಯ ಭಾಗ ಬಾಗಿದಂತೆ ಇದ್ದರೆ

ನೀವು ಮೃದು ಸ್ವಭಾವದ ವ್ಯಕ್ತಿ. ಕೋಪವನ್ನು ಉಂಟುಮಾಡುವ ಸಮಯದಲ್ಲೂ ಅದನ್ನು ಬೇರೆ ಕಡೆಗೆ ತಿರುಗಿಸುವ ಬುದ್ದುವಂತಿಕೆ ನಿಮ್ಮಲ್ಲಿ ಇದೆ. ನೀವು ಇತರರ ಅಭಿಪ್ರಾಯವನ್ನು ಗೌರವಿಸುವಿರಿ. ಹೊಸ ಆವಿಷ್ಕಾರಗಳನ್ನು ಮಾಡಲು ನಿಮಗೆ ಇಷ್ಟವಿಲ್ಲ.

ನೀವು ಮೃದು ವ್ಯಕ್ತಿ ಆಗಿದ್ದರೂ ಸಹ, ನೀವು ಕೋಪಗೊಂಡ ಸಮಯ ನಿಮ್ಮನ್ನು ಶಾಂತಗೊಳಿಸುವುದು ಕಷ್ಟ.

Leave a Reply

%d bloggers like this: