ನಿಮ್ಮ ರಾಶಿ ನಿಮ್ಮ ಗುಣ ಎಂತದ್ದು ಎಂದು ಹೇಳುತ್ತದೆ ಹೀಗೆ

ಪ್ರತಿಯೊಂದು ರಾಶಿಯಲ್ಲೂ ಕೆಲವು ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಇರುವುದು ಸಹಜ. ಪ್ರತಿಯೊಬ್ಬ ವ್ಯಕ್ತಿ ಬೇರೆ ವ್ಯಕ್ತಿಗಿಂತ ವಿಭಿನ್ನವಾಗಿದ್ದರು, ರಾಶಿ ಒಂದೇ ಆಗಿರಬಹುದು ಮತ್ತು ಕೆಲವು ಅಂಶಗಳು ಹೋಲಿಕೆ ಆಗುತ್ತವೆ. ನಿಮ್ಮ ರಾಶಿಯ ಪ್ರಕಾರ ನೀವು ಯಾವ ಗುಣವನ್ನು ಹೊಂದಿರುವಿರಿ ಎಂಬುದನ್ನು ತಿಳಿದುಕೊಳ್ಳಿ.

೧.ಮೇಷ

ಇವರು ಬೇಗನೆ ಕಿರಿಕಿರಿಯನ್ನು ಅನುಭವಿಸುತ್ತಾರೆ, ಮತ್ತು ಇದಕ್ಕೆ ಒಳಗಾಗುವುದರಿಂದ ಆಕ್ರಮಣಶೀಲ ಗುಣವನ್ನು ಪಡೆಯುತ್ತಾರೆ. ಇವರು ಬೇಗನೆ ಕೋಪಗೊಳ್ಳುತ್ತಾರೆ. ಇವರು ತಮ್ಮದೇ ದಾರಿಯಲ್ಲಿ ನಡೆಯಲು ಇಚ್ಛಿಸುವರು ಮತ್ತು ಬೇರೆಯವರ ಮಾತನ್ನು ಕೇಳುವುದಿಲ್ಲ.

೨.ವೃಷಭ

ಇವರು ಮೊಂಡು, ಕಟ್ಟುನಿಟ್ಟಾದ ಮತ್ತು ಸುಲಭವಾಗಿ ರಾಜಿಯಾಗದ ವ್ಯಕ್ತಿಗಳು. ಇವರು ಸಂಬಂಧಗಳನ್ನು ಪ್ರೀತಿಸುವರು. ಇವರು ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಣ್ಣ ವಿಷಯಗಳ ಮೇಲು ತಲೆಕೆಡಿಸಿಕೊಳ್ಳುವರು.

೩.ಮಿಥುನ

ಇವರು ಹೆಚ್ಚು ವುಶ್ರಾಂತಿ ಪಡೆಯಲು ಬಯಸಿದರೂ, ತುಂಬಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವರು. ಒತ್ತಡದಲ್ಲಿ ಸಿಲುಕಿದರೆ ಅಥವಾ ತಾಳ್ಮೆ ಕಳೆದುಕೊಂಡರೆ ಇವರ ಇನ್ನೊಂದು ವ್ಯಕ್ತಿತ್ವವನ್ನು ನೋಡಬಹುದು.

೪.ಕರ್ಕಾಟಕ

ಇವರು ಧನಾತ್ಮಕ ವ್ಯಕ್ತಿಗಳು. ಇವರು ಹೆಚ್ಚು ಭಾವುಕ ವ್ಯಕ್ತಿ. ತುಂಬಾ ಕಾಳಜಿಯನ್ನು ಹೊಂದಿರುವರು. ನಿಷ್ಠಾವಂತರು ಮತ್ತು ಉತ್ತಮ ಆಲಿಕೆಗಾರರು. ಇವರು ತುಂಬಾ ಸೂಕ್ಷ್ಮ ವ್ಯಕ್ತಿ ಕೂಡ.

೫.ಸಿಂಹ

ಇವರು ಉತ್ತಮ ಕಾರ್ಯ ನಿರ್ವಹಿಸಲು ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಕಲಿಯಲು ಬಯಸುವರು, ಇದರಲ್ಲಿ ಇವರು ಹೆಚ್ಚು ಬಾರಿ ಮೇಲುಗೈ ಸಾಧಿಸುವರು. ಇವರು ಆಸಕ್ತಿ ಇಲ್ಲ ಎಂದರು ಮಾಡುವ ಕೆಲಸವನ್ನು ಉತ್ತಮವಾಗಿ ಮಾಡುವರು.

೬.ಕನ್ಯಾ

ಇವರು ಜೀವನವನ್ನು ತುಂಬಾ ಗಂಭೀರವಾಗಿ ಪರಿಗಣಿಸುವರು. ಇವರು ತಮ್ಮನ್ನು ಸೇರುವಂತೆ ಇತರರನ್ನು ಟೀಕಿಸಿ ಖುಷಿ ಪಡಿಸಲು ಇಚ್ಛಿಸುತ್ತಾರೆ.

೭.ತುಲಾ

ಇವರು ಯಾವುದೇ ಅಂತದಲ್ಲಿ ಗಲಾಟೆ ಅಥವಾ ಸಂಘರ್ಷವನ್ನು ತಪ್ಪಿಸುವರು. ಆದರೆ ಇವರು ಯಾವ ನಿರ್ಧಾರ ತೆಗೆದುಕೊಳ್ಳುವರು ಎಂಬುದು ಮುಖ್ಯ. ಇವರು ಸ್ವಲ್ಪ ಸೋಮಾರಿ ಮತ್ತು ಇವರಿಗೆ ಹತ್ತಿರವಾಗುವುದು ಕಷ್ಟ.

೮.ವೃಶ್ಚಿಕ

ಇವರು ಉತ್ತಮ ವ್ಯಕ್ತಿಗಳಾಗಿದ್ದು, ಇವರನ್ನು ಕೆಣಕಿದರೆ ಅಥವಾ ತೊಂದರೆ ಮಾಡಿದರೆ ಸೇಡು ಸಾಧಿಸುವರು ಮತ್ತು ನಿಮ್ಮ ಮೇಲೆ ಕೋಪ ಸಾಧಿಸಲು ಸಮಯಕ್ಕಾಗಿ ಕಾಯುವರು.

೯.ಧನಸ್ಸು

ಇವರು ಚಂಚಲ ಮನಸ್ಸು ಉಳ್ಳವರು, ಕೆಲಸದ ಕಡೆ ಗಮನವನ್ನು ಕೇಂದ್ರೀಕರಿಸಲು ಕಷ್ಟ ಪಡುವರು. ಇವರು ಸ್ಪಷ್ಟ ಗುರಿಯನ್ನು ಹೊಂದಿರದ ಕಾರಣ ಬೇಗನೆ ಹತಾಶೆಗೆ ಒಳಗಾಗುವರು.

೧೦.ಮಕರ

ಅಷ್ಟು ಸುಲಭವಾಗಿ ಇವರು ರಾಜಿಯಾಗುವುದಿಲ್ಲ, ಅಸಹನೆ ಹೊಂದುವರು ಮತ್ತು ಬೇರೆಯವರ ಆಲೋಚನೆಯಲ್ಲಿ ಕಠಿಣ ಸಮಯ ಕಳೆಯುವರು. ಇವರು ತಾಳ್ಮೆ ಮತ್ತು ಕೋಪ ಎರಡನ್ನು ಬೇಗನೆ ಪಡೆಯುವರು.

೧೧.ಕುಂಭ

ಇವರು ಭಾವುಕ ವ್ಯಕ್ತಿ ಆದರೂ, ಏಕಾಂಗಿ ಆಗಿ ಇರಲು ಬಯಸುವರು. ಇವರು ವಿಷಯಗಳನ್ನು ಪ್ರಾಯೋಗಿಕವಾಗಿ ನೋಡಲು ಬಯಸುವರು.

೧೨.ಮೀನ

ಇವರು ವ್ಯವಹರಿಸುವಾಗ ಕಠಿಣ ಸಮಯವನ್ನು ಎದುರಿಸುವರು. ಇವರು ಏಕಾಂಗಿಯಾಗಿರಲು ಮತ್ತು ತಮ್ಮ ಸಮಯವನ್ನು ತಾವೇ ಕಳೆಯಲು ಬಯಸುವರು.

Leave a Reply

%d bloggers like this: