ಹೆರಿಗೆ ನಂತರ ಹೊಟ್ಟೆ ಕರಗಿಸಲು ಸುಲಭ ಉಪಾಯಗಳು

ಮಗುವನ್ನು 9 ತಿಂಗಳು ಉದರದೊಳಗೆ ಪೋಷಿಸಿ ಜನ್ಮ ನೀಡುವ ಸಮಯ ಅವಳಿಗೆ ಆಗುವ ನೋವು ಸಂತೋಷವನ್ನು ಪದಗಳಲ್ಲಿ ಬರೆಯಲು ಸಾಧ್ಯವಾಗುವುದಿಲ್ಲ. ಹೆರಿಗೆ ನಂತರ ತನ್ನ ದೇಹದ ಸ್ಥಿತಿ ಮರಳಿ ಪಡೆಯಲು ಹಾತೊರೆಯುವರು. ಆದರೆ ಅವರು ಏನು ಮಾಡಬೇಕು ಎಂಬುದನ್ನು ಮತ್ತು ನನ್ನಿಂದ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತ ಪಡಿಸುವರು. ಆದರೆ ಇಲ್ಲಿರುವ ಸುಲಭ ಉಪಾಯಗಳನ್ನು ಅನುಸರಿಸಿ ಮೊದಲಿನ ದೇಹ ಸ್ಥಿತಿಯನ್ನು ಪಡೆಯಿರಿ.

9 ತಿಂಗಳು ಮಗುವನ್ನು ಹೊಟ್ಟೆಯೊಳಗೆ ಇರಿಸಿಕೊಂಡು ಹೆರಿಗೆ ನಂತರ ಧಿಡೀರ್ ಆಗಿ ತನ್ನ ಮೊದಲ ಸ್ಥಿತಿಗೆ ಮರಳಬೇಕೆಂದರೆ ಅದು ಕಷ್ಟ. ಅದಕ್ಕಾಗಿ ನೀವು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

ಎದೆಹಾಲುಣಿಸುವುದು

ಮಗುವಿಗೆ ಎದೆಹಾಲು ಉಣಿಸುವುದರಿಂದ ಹೊಟ್ಟೆಯಲ್ಲಿನ ಕೊಬ್ಬು ಕರಗಲು ಸಹಾಯವಾಗುತ್ತದೆ. ನೀವು ಕನಿಷ್ಠ 7ತಿಂಗಳಿಗೂ ಹೆಚ್ಚು ಸಮಯ ಮಗುವಿಗೆ ಎದೆಹಾಲು ಉಣಿಸುವುದು ಉತ್ತಮ. ಹೆರಿಗೆ ನಂತರ ಮೊದಲ 6 ತಿಂಗಳು ನಿಮ್ಮ ದೇಹವು ಸೂಕ್ಷ್ಮವಾಗಿದ್ದು, ಹಾರ್ಮೋನುಗಳ ಬದಲಾವಣೆ ಮತ್ತು ವ್ಯತ್ಯಾಸದಿಂದ ಕೊಬ್ಬುಗಳು ಸಡಿಲವಾಗಿರುತ್ತವೆ. ಆದ್ದರಿಂದ ವೈದ್ಯರ ಸಲಹೆಯಂತೆ ಸರಳ ವ್ಯಾಯಾಮ ಮಾಡುವುದು ಸೂಕ್ತ.

ಬಿಗಿ ಪಟ್ಟಿ

ಇದು ಹಳೆಯ ವಿಧಾನ, ಬಟ್ಟೆ ಅಥವಾ ಬ್ಯಾಂಡೇಜ್ ಅನ್ನು ಹೊಟ್ಟೆಗೆ ಕಟ್ಟುವುದು. ಇದು ಹೊಟ್ಟೆಯನ್ನು ಒಳಭಾಗವಾಗಿ ತಳ್ಳಲ್ಪಡುವುದರಿಂದ ಹೊಟ್ಟೆಯನ್ನು ಕರಗಿಸಲು ಸಹಾಯ ಮಾಡುತ್ತದೆ. ಆದರೆ ಇದು ಹೆರಿಗೆಯ ನಂತರ 2 ತಿಂಗಳು ಕಾಲ ಮಾತ್ರ ಇದು ಕೆಲಸ ಮಾಡುತ್ತದೆ.

ನೀರು

ದೇಹದ ದ್ರವ ಸಮತೋಲನವನ್ನು ಸ್ಥಾಪಿಸಲು ನೀರು ಸಹಾಯ ಮಾಡುತ್ತದೆ. ಇದು ನಿಮಗೆ ಅಚ್ಚರಿಯಾಗಿ ಕಾಣಬಹುದು, ಆದರೆ ನಿಜ ನಿಮ್ಮ ದೇಹದ ಕೊಬ್ಬನ್ನು ನೀರು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ.

ಆಹಾರ

ಹೆಚ್ಚು ಪೌಷ್ಟಿಕ ಅಂಶವುಳ್ಳ ಆಹಾರ ಮತ್ತು ವಿಟಮಿನ್ ಇರುವ ಆಹಾರ ಸೇವಿಸಿ. ಎಣ್ಣೆಯುಕ್ತ, ಕೊಬ್ಬಿನ ಪದಾರ್ಥಗಳನ್ನು ಸೇವಿಸುವುದು ನೀವು ಮತ್ತಷ್ಟು ದಪ್ಪ ಆಗಲು ನೆರವಾಗುತ್ತದೆ.

ನಡೆದಾಡಿ

ಈ ಸಮಯದಲ್ಲಿ ಶಕ್ತಿಯ ಕೊರತೆ ನಿಮಗೆ ಇರುವುದು ಸಾಮಾನ್ಯ. ಬೆಳಗಿನ ಸಮಯ ಸ್ವಲ್ಪ ದೂರ ನಡೆಯುವುದರಿಂದ ನೀವು ಸ್ಲಿಮ್ ಆಗುವ ಜೊತೆಗೆ ಹಲವು ಲಾಭಗಳನ್ನು ಪಡೆಯಬಹುದು.

Leave a Reply

%d bloggers like this: