ಅಮ್ಮ ಬೊಜ್ಜು ಹೊಂದಿದ್ದರೆ ಹೆರಿಗೆ ಸಮಯದಲ್ಲಿ ಮತ್ತು ಮಗುವಿಗೆ ಭವಿಷ್ಯದಲ್ಲಿ ಏನೆಲ್ಲಾ ಆಗುವುದು ಗೊತ್ತಾ

ಸ್ಥೂಲಕಾಯತೆ ಅಥವಾ ಬೊಜ್ಜು ಹೆಚ್ಚಿರುವುದು – ಅಂದರೆ ಬಿಎಂಐ ಅನುಪಾತ 30ಕ್ಕಿಂತ ಹೆಚ್ಚಿಗೆ ಹೊಂದಿರುವುದು, ಇತ್ತೀಚಿಗೆ ಒಂದು ನಿವಾರಿಸಬಹುದಾದ ಅತ್ಯಂತ ಅಪಾಯಕಾರಿ ಅಸ್ವಸ್ಥತೆ ಆಗಿದೆ. ಗರ್ಭಧಾರಣೆ ವಿಷಯಕ್ಕೆ ಬಂದಾಗ, ವೈದ್ಯರು ಇದರ ಅಪಾಯಗಳ ಬಗ್ಗೆ ತಿಳಿಸುತ್ತಲೇ ಬಂದಿದ್ದಾರೆ. ಇದು ಹೇಗೆ ಗರ್ಭಧಾರಣೆ ವೇಳೆ ಗೆಸ್ಟೇಶನಲ್ ಮಧುಮೇಹ, ಹೆಚ್ಚು ರಕ್ತದೊತ್ತಡ, ಅಕಾಲಿಕ ಹೆರಿಗೆ ಹಾಗು ಗರ್ಭಪಾತವನ್ನೂ ಉಂಟಮಾಡಬಹುದು ಎಂಬುದನ್ನು ಹೇಳುತ್ತಾರೆ. ಆದರೆ ಈ ವಾರವಷ್ಟೇ ಪ್ರಕಟವಾದ ಹೊಸದೊಂದು ಅಧ್ಯಯನವು ಹೇಗೆ ತಾಯಿಯ ಸ್ಥೂಲಕಾಯತೆ ಭ್ರೂಣದ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸಿದೆ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ಥ್ ಅವರು ಪ್ರಕಟಿಸಿರುವ ಹೊಸದೊಂದು ಅಧ್ಯಯನದಲ್ಲಿ ಗರ್ಭಧಾರಣೆ ವೇಳೆ ಸ್ಥೂಲಕಾಯತೆ ಹೊಂದಿದರೆ ಮಗುವು ಬೃಹದಾಕಾರ ಹೊಂದುತ್ತದೆ ಎಂದು ತಿಳಿಸಿದೆ. ಇದು ಉಂಟು ಮಾಡುವ ತೊಂದರೆಗಳು ನೀವು ಊಹಿಸುವುದಕ್ಕಿಂತ ಹೆಚ್ಚು!

ಈ ಅಧ್ಯಯನದ ಪ್ರಕಾರ ಗರ್ಭಧಾರಣೆಯ 38ನೇ ವಾರದಲ್ಲಿರುವ ಸ್ಥೂಲಕಾಯತೆ ಹೊಂದಿರುವ ಗರ್ಭಿಣಿ ಹೆಂಗಸರಿಗೆ ಜನಿಸಿದ ಮಕ್ಕಳು ಇತರೆ ತಾಯಂದಿರ ಮಕ್ಕಳಿಗಿಂತ ಉದ್ದನೆಯ ತೊಡೆ (0.3 ಇಂಚಷ್ಟು) ಮತ್ತು ತೋಳುಗಳು (0.4 ಇಂಚಷ್ಟು) ಹೊಂದಿರುತ್ತಾರೆ.

ಆದರೆ ಇದು ಅಪಾಯಕಾರಿ ಹೇಗೆ? ಮೊದಲಿಗೆ, ದೊಡ್ಡ ಗಾತ್ರದ ಮಗುವನ್ನು ಹೊರತೆಗೆಯುವಾಗ ಬಹಳ ಗಂಭೀರ – ಕೆಲವೊಮ್ಮೆ – ಜೀವಕ್ಕೆ ಕುತ್ತು ತರುವಂತ ತೊಡಕುಗಳನ್ನು ಹುಟ್ಟು ಹಾಕುತ್ತದೆ. ಇಂತಹ ಸಂದರ್ಭದಲ್ಲಿ ಮಗುವು ಮೂಳೆ ಮುರಿತ ಅನುಭವಿಸುವ ಸಾಧ್ಯತೆಗಳು ಅಥವಾ ಮಗುವಿಗೆ ತಾಯಿಯ ದೇಹದಿಂದ ಹೊರಬರಲು ಬಾಹ್ಯ ಸಹಾಯ ಬೇಕಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಲ್ಲದೆ ದೊಡ್ಡ ದೇಹದ ಮಗುವಿಗೆ ಜನ್ಮ ನೀಡುವಾಗ ಗರ್ಭಕೋಶ ಹರಿಯುವ ಸಾಧ್ಯತೆಗಳು ಕೂಡ ಇರುತ್ತವೆ.

ಇನ್ನೊಂದು ವಿಷಯ ಏನು ಎಂದರೆ ಈ ಅಧ್ಯಯನದಲ್ಲಿ ಪರಿಗಣಿಸಲಾಗಿದ್ದ ಸ್ಥೂಲಕಾಯದ ಹೆಂಗಸರಿಗೆ ಇತರೆ ಯಾವುದೇ ಸ್ಥೂಲಕಾಯಕ್ಕೆ ಸಂಬಂಧಪಟ್ಟ ತೊಂದರೆಗಳು ಇರಲಿಲ್ಲ. ಇದು ಏನು ಹೇಳುತ್ತದೆ ಎಂದರೆ, ಕೇವಲ ಗರ್ಭಧಾರಣೆ ಸಮಯದ ಸ್ಥೂಲಕಾಯತೆ (ಅಂದರೆ ಮಧುಮೇಹ, ಹೃದ್ರೋಗ ಇದ್ಯಾವುದು ಅಲ್ಲದೆ) ಮಗುವಿಗೆ ಮ್ಯಾಕ್ರೋಸೋಮಿಯಾ ಅಥವಾ ದೊಡ್ಡ ದೇಹದ ಬೆಳವಣಿಗೆ ಹೊಂದಲು ಕಾರಣ ಎಂದು.

ಗರ್ಭಧಾರಣೆ ಶುರುವಿನಲ್ಲಿ ಹೆಣ್ಣು ಎಷ್ಟು ಹೆಚ್ಚು ತೂಕ ಹೊಂದಿರುತ್ತಾಳೋ, ಆಕೆಯ ಗರ್ಭಧಾರಣೆ ಅಷ್ಟು ತೊಡಕುಗಳನ್ನು ಕಾಣುತ್ತದೆ. ಅಲ್ಲದೆ ಇತ್ತೀಚಿಗಿನ ಇತರೆ ಸಂಶೋಧನೆಗಳು ಗರ್ಭಧಾರಣೆ ವೇಳೆಯ ಸ್ಥೂಲಕಾಯತೆಯು ದೀರ್ಘಕಾಲದ ತೊಡಕುಗಳನ್ನು ಹುಟ್ಟುಹಾಕಬಹುದು ಎಂಬುದನ್ನು ಸಾಬೀತು ಮಾಡಿವೆ. ಉದಾಹರಣೆಗೆ ಸೀಳುತುಟಿ, ಸ್ಪೈನ ಬೈಫೀಡ, ಹೈಡ್ರೊಸೆಫಾಲಸ್ ಅಂತಹ ಅಸ್ವಸ್ಥತೆಗಳು. ಅಲ್ಲದೆ ಗರ್ಭಧಾರಣೆಯಲ್ಲಿ ಸ್ಥೂಲಕಾಯತೆ ಹೊಂದಿರುವವರು ಭವಿಷ್ಯದಲ್ಲಿ ಮೂರ್ಛೆರೋಗ ಹೊಂದುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ತಿಳಿದು ಬಂದಿದೆ.

ಹೀಗಾಗಿ ನೀವು ಸ್ಥೂಲಕಾಯ ಹೊಂದಿದ್ದು ಮಗುವನ್ನು ಇಚ್ಛಿಸುತ್ತಿದ್ದರೆ, ನಿಮ್ಮ ತೂಕ ಇಳಿಸಿಕೊಂಡು ಅರೋಗ್ಯ ಕಾಪಾಡಿಕೊಳ್ಳುವ ಕಡೆ ಮೊದಲ ಯೋಚನೆ ಹರಿಸಿ. ನೀವು ಗರ್ಭಿಣಿ ಆಗಿದ್ದು ಸ್ಥೂಲಕಾಯತೆ ಹೊಂದಿದ್ದರೆ, ವೈದ್ಯರ ಹತ್ತಿರ ಸಲಹೆ ಪಡೆದುಕೊಳ್ಳಿ.

Leave a Reply

%d bloggers like this: