ಗರ್ಭಿಣಿ ಮಹಿಳೆ ನಿಂತುಕೊಳ್ಳುವುದು : ಅವಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮಹಿಳೆಯು ಪುರುಷನಷ್ಟೇ ದೈಹಿಕ ಕೆಲಸ ಮಾಡಲು ಶಕ್ತಳಾಗಿದ್ದರೂ, ನೀವು ಗರ್ಭಿಣಿಯಾಗಿರುವಾಗ ಇದು ನೀವು ಮಾತ್ರವಲ್ಲ, ನೀವು ಸೇವಿಸುವ ಆಹಾರ, ನಿಮ್ಮ ಭಾವನೆ, ನೀವು ಮಾಡುವ ಕೆಲಸ ಪ್ರತಿಯೊಂದು ಕೂಡ ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.

ನಮ್ಮ ಕಾಲುಗಳು ಸ್ವಲ್ಪ ಹೆಚ್ಚು ತೂಕವನ್ನು ಹೊರಲು ಶಕ್ತವಾಗಿವೆ, ಆದರೆ ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವು ಹಲವು ಕಡೆಗಳಿಂದ ತೂಕವನ್ನು ಪಡೆಯುವುದು ಸಹಜ ಮತ್ತು ತೂಕವು ಸಾಮಾನ್ಯವಾಗಿ ಹೆಚ್ಚುತ್ತದೆ. ನೀವು ಹೆಚ್ಚು ಸಮಯ ನಿಂತುಕೊಂಡಿದ್ದರೆ, ಖಂಡಿತವಾಗಿ ನಿಮ್ಮ ಕಾಲುಗಳು ಆಯಾಸ ಪಡುತ್ತವೆ. ಸಾಮಾನ್ಯ ದಿನವೇ ಹೆಚ್ಚು ಸಮಯ ನಿಂತುಕೊಂಡರೆ ಕಾಲು ಆಯಾಸಕ್ಕೆ ಒಳಗಾಗುವುದು ಸಹಜ ಇನ್ನು ಗರ್ಭಾವಸ್ಥೆಯಲ್ಲಿ ಹೆಚ್ಚು ಸಮಯ ನಿಂತುಕೊಳ್ಳುವುದು ಅಪಾಯವೇ? ಗರ್ಭಾವಸ್ಥೆಯಲ್ಲಿ ಹೆಚ್ಚು ಸಮಯ ನಿಂತುಕೊಳ್ಳುವುದರಿಂದ ನಿಮಗೆ ಆಗುವ ಸಮಸ್ಯೆಯನ್ನು ಇಲ್ಲಿ ತಿಳಿಯಿರಿ.

೧.ಬೆನ್ನು ನೋವಿಗೆ ಕಾರಣವಾಗುತ್ತದೆ

ಸರಿ ಸುಮಾರು ಶೇಕಡಾ ೫೦ರಿಂದ ೭೦ರಷ್ಟು ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಬೆನ್ನು ನೋವನ್ನು ಅನುಭವಿಸುವರು. ಇದರ ಜೊತೆಗೆ ಅನೇಕ ಮಹಿಳೆಯರು ತಮಗೆ ಕಾಲು ನೋವು ಇದೆ ಎಂದು ದೂಷಿಸುವರು. ನೀವು ಮಾಡುವ ಕೆಲಸ ನಿಮ್ಮ ಪಾದಗಳ ಮೇಲೆ ಒತ್ತಡ ಅಥವಾ ಪಾದಗಳ ಮೇಲೆ ನಿಂತು ಮಾಡುವುದರಿಂದ ನೀವು ಖಂಡಿತ ಬೆನ್ನು ನೋವನ್ನು ಪಡೆಯುವಿರಿ.

೨.ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ

ಅಧಿಕ ರಕ್ತದೊತ್ತಡ ಪ್ರತಿಯೊಬ್ಬರಿಗೂ ಅಪಾಯದ ವಿಷಯ. ಆದರೆ ಗರ್ಭಿಣಿ ಮಹಿಳೆಯರಿಗೆ ಇದು ಸಾವು ಬದುಕಿನ ನಡುವಿನ ಹೋರಾಟವಾಗಬಹುದು. ಅಧ್ಯಯನಗಳ ಪ್ರಕಾರ ಹೆಚ್ಚು ಕಾಲ ನಿಂತುಕೊಳ್ಳುವುದರಿಂದ ಅಥವಾ ಪಾದಗಳಿಗೆ ಒತ್ತಡ ನೀಡುವುದರಿಂದ ಅಥವಾ ನಿಂತು ಕೆಲಸ ಮಾಡುವಿದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ.

೩.ಗುಪ್ತಾಂಗದಲ್ಲಿ ನೋವನ್ನು ಉಂಟುಮಾಡಬಹುದು

ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರು ಸಿಮ್ಫಿಸಿಸ್ ಪ್ಯೂಬಿಸ್ ಡಿಸ್ ಫ್oಕ್ಷನ್(SPD) ನಿಂದ ಬಳಲುತ್ತಾರೆ. ಇದು ಪೆಲ್ವಿಕ್ ಭಾಗದಲ್ಲಿ ನೋವನ್ನು ಉಂಟುಮಾಡುತ್ತದೆ, ಅದರಲ್ಲೂ ಪ್ಯೂಬಿಕ್ ಮೂಳೆಯಲ್ಲಿ ನೋವು ಕಾಣುವಂತೆ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಹೆಚ್ಚು ಸಮಯ ನಿಂತುಕೊಳ್ಳುವುದು ಅಥವಾ ನಿರಂತರವಾಗಿ ನಿಂತು ಕೆಲಸ ಮಾಡುವುದು ಇದನ್ನು ಮತ್ತಷ್ಟು ಗಂಭೀರವಾಗುವಂತೆ ಮಾಡುತ್ತದೆ.

೪.ಇದು ಭ್ರೂಣದ ಬೆಳವಣಿಗೆಯನ್ನು ತಡೆಯಬಹುದು

ದುರದುಷ್ಟಕರ ಎಂದರೆ, ನೀವು ಹೆಚ್ಚು ಸಮಯ ಅಥವಾ ನಿರಂತರವಾಗಿ ನಿಂತುಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಇದ್ದರೆ ನಿಮ್ಮ ಮಗುವು ಬೆಳವಣಿಗೆಯ ಕುಂಠಿತವನ್ನು ಎದುರಿಸಬೇಕಾದೀತು.

೫.ಅಕಾಲಿಕ ಜನ್ಮಕ್ಕೆ ಕಾರಣವಾಗಬಹುದು

ಕೆಲವು ಅಧ್ಯನಯಗಳ ಪ್ರಕಾರ ಹೆಚ್ಚು ಸಮಯ ನಿಂತುಕೊಂಡು ಇರುವುದರಿಂದ ಅಥವಾ ನಿರಂತರವಾಗಿ ನಿಂತುಕೊಂಡು ಕೆಲಸ ಮಾಡುವುದರಿಂದ ಮಗುವು ಅಕಾಲಿಕವಾಗಿ ಜನಿಸುವ ಸಾಧ್ಯತೆ ಹೆಚ್ಚು ಎಂದು ತಿಳಿಸಿವೆ.

ನೀವು ಏನು ಮಾಡಬಹುದು?

ನೀವು ಗರ್ಭಾವಸ್ಥೆಯಲ್ಲಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಇದ್ದರೆ ಅದರಿಂದ ದೂರ ಬರುವುದು ಒಳಿತು, ಅಥವಾ ಇಲ್ಲಿ ನೀಡಿರುವ ಕೆಲವು ಸಲಹೆಗಳನ್ನು ಪಾಲಿಸಿ.

೧.ನೀವು ದಿನದಲ್ಲಿ ೪ ಗಂಟೆಗಳಿಗಿಂತ ಹೆಚ್ಚು ಕಾಲ ನಿಂತುಕೊಂಡು ಕೆಲಸ ಮಾಡುವ ಅವಶ್ಯವಿದ್ದರೆ, ಕುಳಿತುಕೊಂಡು ಮಾಡುವ ಕೆಲಸಕ್ಕೆ ಬದಲಾಗುವುದು ಒಳ್ಳೆಯದು. ನಿಮ್ಮ ಬಾಸ್ ಜೊತೆ ಮಾತನಾಡಿ ಅಗತ್ಯ ಇದ್ದರೆ ನಿಮ್ಮ ವೈದ್ಯರಿಂದ ಒಂದು ಪತ್ರವನ್ನು ಬರೆಸಿಕೊಂಡು ತಂದು ತೋರಿಸಿ. ಇಲ್ಲವಾದರೆ ನಿಮ್ಮ ೨೩ನೇ ಗರ್ಭಾವಸ್ಥೆಯಲ್ಲಿ ಆ ಕೆಲಸವನ್ನು ತ್ಯಜಿಸಿ ಅಥವಾ ದೀರ್ಘಕಾಲ ರಜೆಯನ್ನು ಪಡೆಯಿರಿ.

೨.ನೀವು ದಿನದಲ್ಲಿ ೩೦ನಿಮಿಷ ನಿಂತುಕೊಂಡು ಕೆಲಸ ಮಾಡುವ ಅಗತ್ಯವಿದ್ದರೆ, ನಿಮ್ಮ ಪಾದಕ್ಕೆ ಒತ್ತಡ ಬೀಳದಂತೆ ಅಥವಾ ಮದ್ಯೆ ಸ್ವಲ್ಪ ಸಮಯ ಕುಳಿತುಕೊಳ್ಳುವ ಮೂಲಕ ವಿಶ್ರಾಂತಿಯನ್ನು ನೀಡಿ.

೩.ನೀವು ಒಂದೇ ಜಗದಲ್ಲಿ ನಿಂತುಕೊಳ್ಳುವ ಸಂದರ್ಭದಲ್ಲಿ ಆಗಾಗ್ಗೆ ಅಲ್ಲೇ ಸ್ವಲ್ಪ ನಡೆದಾಡಿ.

೪.ನಿಂತುಕೊಂಡಿರುವಾಗ ಬೆಂಬಲವನ್ನು ಪಡೆದುಕೊಳ್ಳಿ.

೫.ನಿಮ್ಮ ಪಾದಗಳಿಗೆ ಒತ್ತಡ ಬೀಳದಂತೆ ನೋಡಿಕೊಳ್ಳಿ, ಮತ್ತು ಅದಕ್ಕೆ ಹೆಚ್ಚು ಆಯಾಸ ಆಗದಂತೆ ನೋಡಿಕೊಳ್ಳಿ.

Leave a Reply

%d bloggers like this: