ಪ್ರಪಂಚವು ನಮ್ಮನ್ನು ಗುರುತಿಸುವುದು ನಮ್ಮ ಹೆಸರಿನಿಂದ. ಜಗತ್ತು ನಮ್ಮನ್ನು ವ್ಯಾಖ್ಯಾನಿಸುತ್ತದೆ, ನಮಗೆ ವ್ಯಕ್ತಿತ್ವವನ್ನು ನೀಡುತ್ತದೆ ಮತ್ತು ನಾವು ಯಾರು ಎಂದು ಇಡೀ ವಿಶ್ವಕ್ಕೆ ಪರಿಚಯಿಸುವುದು ನಮ್ಮ ಹೆಸರಿನಿಂದ. ಆದರೆ ಕೆಲವೊಮ್ಮೆ, ವಿಶಿಷ್ಟವಾದ ಮತ್ತು ವಿಭಿನ್ನವಾದ ಹೆಸರನ್ನು ಹೊಂದಿರುವುದರಿಂದ ಅದರ ವಿಭಿನ್ನವಾದ ಪರಿಣಾಮವು ಸಂಪೂರ್ಣ ವಿಭಿನ್ನ ರೀತಿಯಲ್ಲಿ ನಮಗೆ ಕಾಣಸಿಗಬಹುದು. ಆದ್ದರಿಂದ ನಿಮ್ಮ ಮುದ್ದು ಕಂದಮ್ಮನಿಗೆ ಕೆಲವು ಅನನ್ಯವಾದ ಹೆಸರಗಳನ್ನು ನಾವು ಅದರ ಅರ್ಥದೊಂದಿಗೆ ಹೇಳಿದ್ದೇವೆ.
ಹೆಸರು – ಅರ್ಥ
೧.ಅನ್ವಿತ – ಗ್ರಹಿಸು, ಬೇಗನೆ ಅರ್ಥ ಮಾಡಿಕೊಳ್ಳುವ
೨.ಆಧ್ಯ – ಮೊದಲ ಶಕ್ತಿ, ಮೊದಲು, ಪ್ರಥಮ
೩.ಆಧ್ವಿಕ – ಅನನ್ಯ, ವಿಶಿಷ್ಟವಾದ
೪.ಅಪೇಕ್ಷ – ನಂಬಿಕೆ, ಭರವಸೆ, ವಿಶ್ವಾಸ, ಆಸೆ
೫.ಆರುಷಿ – ಸೂರ್ಯನ ಮೊದಲ ಕಿರಣ, ಪ್ರಕಾಶಿಸು
೬.ಆಯುಷಿ – ಪೂರ್ಣ ಚಂದ್ರ
೭.ಪೂರ್ಣ – ಸಂಪೂರ್ಣ, ಎಲ್ಲಾ ತಿಳಿದಿರುವ
೮.ಪಾವನಿ – ಪವಿತ್ರ ಅಥವಾ ಶುದ್ಧ ಆತ್ಮ ಇರುವ, ಹೃದಯವಂತಿಕೆ ಇರುವ
೯.ಮೌನ – ನಿಶ್ಯಬ್ದ ಆಗಿರುವ, ಶಾಂತ ಮನಸ್ಸುಳ್ಳ
೧೦.ಮಾನ್ವಿ – ಮಾನವೀಯ ಗುಣ ಇರುವ, ಹೃದಯವಂತ, ಶಾಂತ ಸ್ವಭಾವದ, ಸರಸ್ವತಿ ದೇವಿಯ ಹೆಸರು