ನಿಮ್ಮ ರಕ್ತದ ಗುಂಪು ಇದಾಗಿದ್ದರೆ, ನೀವು ಈ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ

“ನಿಮ್ಮ ರಕ್ತದ ಗುಂಪು ಯಾವುದು?” ಸಹಜವಾಗಿ ಈ ಪ್ರಶ್ನೆಗೆ ಸಿಗುವ ಉತ್ತರ ಎಂದರೆ ಒಂದು ದೀರ್ಘ ವಿರಾಮದ ನಂತರ “ಉಮ್… ಗೊತ್ತಿಲ್ಲ” ಎಂದು. ಇದು ಇನ್ನಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕುತ್ತದೆ : ನಿಮಗೆ ನಿಮ್ಮ ರಕ್ತದ ಗುಂಪು ಯಾವುದೆಂದು ತಿಳಿದಿರಲೇ ಬೇಕೇ? ನಿಮ್ಮ ರಕ್ತದ ಗುಂಪು ಏನು ತಿಳಿಸುತ್ತದೆ? ನಿಜ ಹೇಳಬೇಕೆಂದರೆ, ಇದು ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ.

ನೀವು ನಿಮ್ಮ ರಕ್ತದ ಗುಂಪು ಮುಖ್ಯವಾಗಿ ತಿಳಿದಿರಬೇಕಿರುವುದು ರಕ್ತದ ವರ್ಗಾವಣೆಗೆ. ಅದರ ಹೊರತಾಗಿ ರಕ್ತದ ಗುಂಪು ನಮಗೆ ಇನ್ನು ಕೆಲವು ವಿಷಯಗಳ ಕಿರುನೋಟ ನೀಡುತ್ತವೆ. ಹೌದು, ನಿಮ್ಮ ರಕ್ತದ ಗುಂಪು ನೀವು ಕೆಲವೊಂದು ರೋಗಗಳಿಗೆ ಅಥವಾ ಕೆಲವೊಂದು ಅರೋಗ್ಯ ತೊಡಕುಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬುದನ್ನು ಹೇಳುತ್ತದೆ. ಆದರೆ ಹೇಗಿದ್ದರೂ ನಮ್ಮ ರಕ್ತದ ಗುಂಪು ಬದಲಾಯಿಸಲಿಕ್ಕೆ ಆಗುವುದಿಲ್ಲ, ಇದರಿಂದ ನಾವು ಮಾಡುವುದಾದರೂ ಏನು ಎನ್ನುತ್ತೀರಾ? ಆದರೆ “ಶಿಕ್ಷಣವೇ ಶಕ್ತಿ” ಎಂಬ ಮಾತು ನೀವು ಕೇಳಿರುತ್ತೀರಾ ಅಲ್ಲವಾ? ಹೀಗಾಗಿ ಇದರ ಬಗೆಗಿನ ಮಾಹಿತಿ ನಾವು ತಿಳಿದರೆ ನಾವು ತುತ್ತಾಗುವ ಸಾಧ್ಯತೆಗಳು ಹೆಚ್ಚಿರುವ ರೋಗಗಳ ಬಗ್ಗೆ ತಿಳಿದು, ಇನ್ನಿತರ ಕ್ಷೇತ್ರಗಳಲ್ಲಿ ಅರೋಗ್ಯ ಕಾಪಾಡಿಕೊಳ್ಳಲು ಮುಂದಾಗಬಹುದು. ಆದರೆ ಅಂತಹ ರೋಗಗಳು ಯಾವುದು ಮತ್ತು ಅವುಗಳಿಗೆ ತುತ್ತಾಗುವ ಸಾಧ್ಯತೆ ಇರುವ ರಕ್ತದ ಗುಂಪು ಯಾವುದೆಂದು ಇಲ್ಲಿ ಓದಿ :

೧. ರಕ್ತ ಹೆಪ್ಪುಗಟ್ಟುವಿಕೆ

O-ನೆಗೆಟಿವ್ ಅಥವಾ O-ಪಾಸಿಟಿವ್ ರಕ್ತದ ಗುಂಪು ಹೊಂದಿರುವವರು ಇದಕ್ಕೆ ತುತ್ತಾಗುವ ಸಾಧ್ಯತೆಗಳು ಬಹಳ ಕಡಿಮೆ. ಜೀವನ ಪರ್ಯಂತ ರಕ್ತಸ್ರಾವದ ಅಸ್ವಸ್ಥತೆ ಉಂಟು ಮಾಡುವ ರೋಗ ಆದ ವೊನ್ ವಿಲ್ಲೆಬ್ರಾಂಡ್ ರೋಗ ಅಂತ ಒಂದು ಇದ್ದು, ಇದು A, B, AB+ ಮತ್ತು AB- ರಕ್ತದ ಗುಂಪು ಹೊಂದಿರುವವರಲ್ಲಿ 30% ಅಷ್ಟು ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಜಗತ್ತಿನ ಸುಮಾರು 20% ಅಷ್ಟು ರಕ್ತ ಹೆಪ್ಪುಗಟ್ಟುವಿಕೆ ಅನುಭವಿಸುವುದು AB ರಕ್ತದ ಗುಂಪು ಹೊಂದಿರುವವರು.

೨. ಗ್ಯಾಸ್ಟ್ರಿಕ್ ಕ್ಯಾನ್ಸರ್

ಪುನಃ ಇಲ್ಲಿಯೂ ಕೂಡ, ಈ ರೋಗವು O-ನೆಗೆಟಿವ್ ಅಥವಾ O-ಪಾಸಿಟಿವ್ ರಕ್ತದ ಗುಂಪುಗಳು ಹೊಂದಿರುವವರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ. ಆದರೆ A+ ಅಥವಾ A- ರಕ್ತ ಹೊಂದಿರುವವರು ಇದಕ್ಕೆ ಸಾಧ್ಯತೆಗಳು ಹೆಚ್ಚು. ಆದರೆ ಅದಕ್ಕೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ.

೩. ಹುಣ್ಣುಗಳು

O ಗುಂಪಿನ ರಕ್ತ ಹೊಂದಿರುವವರು, A ಮತ್ತು AB ಗುಂಪುಗಳ ರಕ್ತ ಹೊಂದಿರುವವರಿಗಿಂತ ಜಠರದ ಹುಣ್ಣುಗಳಿಗೆ ತುತ್ತಾಗುವ ಹೆಚ್ಚಿನ ಸಾಧ್ಯತೆಗಳು ಹೊಂದಿರುತ್ತಾರೆ. O ಗುಂಪಿನ ರಕ್ತದವರು ಏಕೆ ಇದಕ್ಕೆ ಹೆಚ್ಚು ತುತ್ತಾಗುತ್ತಾರೆ ಎಂಬುದನ್ನು ನಿಖರವಾಗಿ ತಿಳಿಯಲು ಆಗದಿದ್ದರೂ, ಒಂದು ಊಹೆ ಏನೆಂದರೆ ಅದು ಬೇರೆ ಬೇರೆ ರಕ್ತದ ಗುಂಪಿನ ದೇಹಗಳು ಸೋಂಕಿನ ವಿರುದ್ಧ ಬೇರೆ ಬೇರೆ ರೀತಿಯಲ್ಲಿ ಸೆಣೆಸುತ್ತವೆ ಎಂಬುದು.

೪. ಹೃದಯ ರೋಗಗಳು

O ರಕ್ತದ ಗುಂಪು ಹೊಂದಿರುವವರು ಹೃದ್ರೋಗಗಳಿಗೆ ಸಾಧ್ಯತೆಗಳು ಇತರರಿಗಿಂತ ಸುಮಾರು 23% ಅಷ್ಟು ಕಡಿಮೆ. ಇವುಗಳಿಗೆ ತುತ್ತಾಗಲು ಅತ್ಯಂತ ಹೆಚ್ಚು ಸಾಧ್ಯತೆಗಳನ್ನು ಹೊಂದಿರುವ ರಕ್ತದ ಗುಂಪುಗಳು ಎಂದರೆ ಅದು AB ಮತ್ತು B ರಕ್ತದ ಗುಂಪುಗಳು. ಆದರೆ ಇದರ ಹಿಂದಿರುವ ಕಾರಣಗಳು ಕೂಡ ಸ್ಪಷ್ಟವಾಗಿ ತಿಳಿದುಬಂದಿಲ್ಲ.

೫. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್

ಇಲ್ಲೂ ಕೂಡ ಗೆಲುವು O ಗುಂಪಿನ ರಕ್ತ ಹೊಂದಿರುವವರೇ! ಹೌದು, A ಗುಂಪಿನ ರಕ್ತ ಹೊಂದಿರುವವರು 32% ಅಷ್ಟು ಹೆಚ್ಚಿನ ಸಾಧಯತೆಗಳು ಹೊಂದಿದ್ದಾರೆ, AB ಗುಂಪಿನವರು 51% ಅಷ್ಟು ಹೆಚ್ಚಿನ ಸಾಧ್ಯತೆಗಳನ್ನು ಹೊಂದಿರುತ್ತಾರೆ ಮತ್ತು B ಗುಂಪಿನ ರಕ್ತ ಹೊಂದಿರುವವರು 72% ಅಷ್ಟು ಹೆಚ್ಚು ಸಾಧ್ಯತೆಗಳನ್ನು ಹೊಂದಿರುತ್ತಾರೆ.

ಮೊದಲೇ ಹೇಳಿದ ಹಾಗೆ ನೀವು ನಿಮ್ಮ ರಕ್ತದ ಗುಂಪನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೇ ಇವುಗಳನ್ನು ಅರಿತು ನೀವು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡರೆ, ಹಾನಿಯನ್ನು ಕಡಿಮೆ ಮಾಡಬಹುದು.

Leave a Reply

%d bloggers like this: