ಬಾಯಿಯ ಸುತ್ತಲಿನ ಸುಕ್ಕುಗಳನ್ನು ಹೋಗಲಾಡಿಸಲು 5 ಖರ್ಚಿಲ್ಲದ ಮನೆಮದ್ದುಗಳು!

ಮುಖದ ಮೇಲಿನ ಸುಕ್ಕುಗಳು ಜನರಲ್ಲಿ, ಮುಖ್ಯವಾಗಿ ಹೆಂಗಸರಲ್ಲಿ ಚಿಂತೆಗಳನ್ನ ಹುಟ್ಟು ಹಾಕುತ್ತವೆ. ಏಕೆಂದರೆ ಇವು ಉಂಟಾಗುವುದು ವಯಸ್ಸು ಆಗುತ್ತಿರುವುದು ಸೂಚಿಸುತ್ತದೆ ಮತ್ತು ಮುಖದ ಅಂದವನ್ನು ಕುಗ್ಗಿಸುತ್ತವೆ. ಸುಕ್ಕುಗಳನ್ನು ಗುರುತಿಲ್ಲದೆ ಅಳಿಸಿ ಹಾಕುವುದು ಸಾಧ್ಯ ಇಲ್ಲ ಎಂಬ ಮಾತಿದೆ, ಆದರೆ ನಾವು ಅವುಗಳ ಗುರುತುಗಳನ್ನು ಮಾಸುವಂತೆ ಮಾಡಬಹುದು ಮತ್ತು ವಯಸ್ಸು ಓಡುತ್ತಿರುವ ವೇಗವನ್ನು ಕಡಿಮೆ ಮಾಡಬಹುದು. ಹೀಗೆ ಮಾಡಲು ನಾವು ಈ ಲೇಖನದಲ್ಲಿ ಕೆಲವು ಮನೆಮದ್ದುಗಳನ್ನು ಪ್ರಸ್ತಾಪಿಸಿದ್ದೇವೆ, ಓದಿ.

೧. ಆಲೋ ವೆರಾ (ಲೋಳೆ ಸರ) ಜೆಲ್

ಬಾಯಿಯ ಸುತ್ತಲಿನ ಸುಕ್ಕುಗಳಿಗೆ ಒಂದು ಪರಿಣಾಮಕಾರಿ ಮನೆಮದ್ದು ಎಂದರೆ ಅದು ಆಲೋ ವೆರಾ ಜೆಲ್. ಏಕೆಂದರೆ ಇದು ಬಾಯಿಯ ಸುತ್ತಲಿನ ತ್ವಚೆಯನ್ನು ನೈಸರ್ಗಿಕವಾಗಿ ಮತ್ತು ಆಳವಾಗಿ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಹೀಗೆ ಮಾಡಿದಾಗ ಸುಕ್ಕುಗಳು ಕಾಣಿಸಿಕೊಳ್ಳುವುದಿಲ್ಲ.

ಸೂಚನೆ : ಆಲೋ ವೆರಾವನ್ನು ಹಿಂಡಿ ಜೆಲ್ ಮಾಡಿಕೊಳ್ಳಿ . ಅದನ್ನು ಸುಕ್ಕಾದ ಜಾಗಗಳ ಮೇಲೆ ಹಚ್ಚಿಕೊಳ್ಳಿ . ತ್ವಚೆಯು ಅದನ್ನು ಹೀರಿಕೊಳ್ಳಲು 30 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಅದನ್ನು ನೀರಿನಿಂದ ತೊಳೆದುಕೊಳ್ಳಿ.

 
೨. ಆಲಿವ್ ಎಣ್ಣೆ

ಆಲಿವ್ ಎಣ್ಣೆ ಕೂಡ ಬಾಯಿಯ ಸುತ್ತಲಿನ ಸುಕ್ಕುಗಳ ನಿವಾರಣೆಗೆ ಒಂದು ಒಳ್ಳೆಯ ಅಸ್ತ್ರ. ಕಾರಣ ಇದು ಅಪಾರ ಪ್ರಮಾಣದ ವಿಟಮಿನ್ ಇ  ಒಳಗೊಂಡಿರುತ್ತದೆ. ವಿಟಮಿನ್ ಇ ತ್ವಚೆಯ ಪೋಷಣೆಯಲ್ಲಿ ಬಹಳ ಉಪಯುಕ್ತವಾದದ್ದು.

ಸೂಚನೆ : ರಾತ್ರಿ ಮಲಗುವ ಮುನ್ನ ಆಲಿವ್ ಎಣ್ಣೆಯನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಬೆಳಗ್ಗೆ ಎದ್ದಮೇಲೆ ಉಗುರುಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ ಮತ್ತು ತಣ್ಣೀರನ್ನು ಮುಖಕ್ಕೆ ಚಿಮುಕಿಸಿಕೊಳ್ಳಿ.

೩. ಮೊಟ್ಟೆಯ ಬಿಳಿ ಭಾಗ ಮತ್ತು ತೆಂಗಿನ ಎಣ್ಣೆ

ಮೊಟ್ಟೆಯ ಬಿಳಿಭಾಗ ಮತ್ತು ತೆಂಗಿನ ಎಣ್ಣೆಯ ಜೋಡಿಯು ಮುಖದ ಸುಕ್ಕುಗಳನ್ನು ಹೋಗಲಾಡಿಸುವುದರಲ್ಲಿ ತುಂಬಾನೇ ಸಹಾಯಕಾರಿ. ಇನ್ನೂ ವಿವರಿಸಬೇಕೆಂದರೆ, ಮೊಟ್ಟೆಯ ಬಿಳಿಭಾಗವು ತ್ವಚೆಯನ್ನು ಬಿಗಿಯಾಗಿ ಇರಿಸುತ್ತದೆ ಮತ್ತು ತೆಂಗಿನ ಎಣ್ಣೆಯು ತ್ವಚೆಯನ್ನು ಆಳದವರೆಗೆ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ಸೂಚನೆ : ಒಂದು ಚಮಚದಷ್ಟು ಮೊಟ್ಟೆಯ ಬಿಳಿಭಾಗ ಮತ್ತು ಒಂದು ಚಮಚದಷ್ಟು ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಅವೆರೆಡನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್ ಅನ್ನು ನಿಮ್ಮ ಬಾಯಿಯ ಸುತ್ತ ಹಚ್ಚಿಕೊಂಡು 15-20 ನಿಮಿಷಗಳ ಹಾಗೆ ಹೀರಿಕೊಳ್ಳಲು ಬಿಡಿ. ನಂತರ ಅದನ್ನು ನೀರಿನಿಂದ ತೊಳೆಯಿರಿ ಮತ್ತು ಮೃದುವಾಗಿ ಬೆರಳುಗಳಿಂದ ತಟ್ಟುತ್ತಾ ಒಣಗಿಸಿ.

೪. ಟೊಮೇಟೊ ರಸ

ಟೊಮೇಟೊ ಅಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಸಿ, ಲೈಕೋಪೆನ್ ಮತ್ತು ಬೀಟಾ-ಕೆರೋಟಿನ್ ಎಲ್ಲವೂ ಇದ್ದು, ಇವುಗಳೆಲ್ಲವೂ ನಮ್ಮ ತ್ವಚೆಗೆ ತುಂಬಾನೇ ಒಳ್ಳೆಯದು ಮತ್ತು ಇವೆಲ್ಲವೂ ಆಂಟಿ-ಏಜಿಂಗ್ ಅನ್ನು ಪ್ರೋತ್ಸಾಹಿಸುತ್ತವೆ.

ಸೂಚನೆ : ಟೊಮೇಟೊ ರಸವನ್ನು ನಿಮ್ಮ ತ್ವಚೆಯ ಮೇಲೆ ಲೇಪಿಸಿಕೊಳ್ಳಿ. ಅದು ಭಾಗಶಃ ನಿಮ್ಮ ರಕ್ತ ಸಂಚಾರವನ್ನು ವೃದ್ಧಿ ಮಾಡುತ್ತದೆ ಮತ್ತು ನಿಮ್ಮ ದೇಹವು ಹೊಸ ತ್ವಚೆಯ ಕೋಶಗಳನ್ನು ಹುಟ್ಟು ಹಾಕಲು ಪ್ರಚೋದಿಸುತ್ತದೆ. ಸ್ವಲ್ಪ ಹೊತ್ತಿನ ನಂತರ ನೀರಿನಿಂದ ತೊಳೆಯಿರಿ.

೫. ಪಪಾಯ

ಪಪಾಯದಲ್ಲಿ ಅಪಾರ ಸಂಖ್ಯೆಯ ವಿಟಮಿನ್ಸ್ ಮತ್ತು ಖನಿಜಗಳು ಇದ್ದು, ಇವುಗಳು ತ್ವಚೆಗೆ ತುಂಬಾನೇ ಒಳ್ಳೆಯವು. ಪಪಾಯದ ಹಣ್ಣಿನಲ್ಲಿರುವ ಇರುವ ಕಿಣ್ವಗಳು ನಿಮ್ಮ ತ್ವಚೆಯ ಸ್ಥಿತಿಸ್ಥಾಪಕತ್ವ ಅಥವಾ ಎಲಾಸ್ಟಿಸಿಟಿ ಅನ್ನು ಮರುಸ್ಥಾಪಿಸುತ್ತವೆ ಹಾಗು ಇದರಿಂದ ಸುಕ್ಕುಗಳು ಉಂಟಾಗುವುದು ಕಡಿಮೆ ಆಗುತ್ತದೆ.

ಸೂಚನೆ : ಒಂದು ಚಮಚ ಪಪಾಯ ಹಣ್ಣಿನ ರಸವನ್ನು ತೆಗೆದುಕೊಂಡು ಬಾಯಿಯ ಸುತ್ತಲಿನ ತ್ವಚೆಯ ಮೇಲೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಿಂದ ತೊಳೆಯಿರಿ.

Leave a Reply

%d bloggers like this: