ನಿಮ್ಮ ಮಗು ಸರಿಯಾಗಿ ತಿನ್ನುವುದಿಲ್ಲವೇ?ಹಾಗಾದರೆ ನಿಮ್ಮ ಮಗು ಆರೋಗ್ಯವಾಗಿ ಬೆಳೆಯಲು 5 ಸಲಹೆಗಳು

ಆರೋಗ್ಯವಾದ ಮಗುವೇ ಸಂತೋಷವಾದ ಮಗು. ಮಗುವಿಗೆ ಆಹಾರ ತಿನ್ನಿಸುವ ವಿಚಾರಕ್ಕೆ ಬಂದರೆ ಅದು ಪ್ರತಿ ತಾಯಿಗೂ ಅತ್ಯಂತ ಸಾಹಸಧಯಾಕ ಕೆಲಸ. ಕೆಲವೊಮ್ಮೆ ಏನಾದರೂ ಪ್ಲಾನ್‌ಮಾಡಿ ಮಕ್ಕಳಿಗೆ ತಿನ್ನಿಸಿದರೆ ಮತ್ತಷ್ಟು ಬಾರಿ ಅದು ಮಗುವಿನ ಮೂಡ್‌ಮೇಲೆ ಅವಲಂಬಿತವಾಗುತ್ತದೆ. ಎಲ್ಲರೂ ಅವಳಿಗೆ ಸಮಾಧನಮಾಡಿ ಮಗುವೇ ಆಹಾರವನ್ನು ಆಯ್ದೂಕೊಳ್ಳಲಿ ಎಂದು ಸಲಹೆ ಕೊಟ್ಟರು ಅದು ಅಷ್ಟು ಸುಲಭವಲ್ಲ, ಅದೂ ನಿಮಗೂ ಗೊತ್ತು!

 ಬೆಳೆಯುವ ಮಕ್ಕಳು ಆರೋಗ್ಯವಾಗಿರಲು ಮತ್ತು ಸದೃಡರಾಗಿರಲು ಇಂತಿಷ್ಟು ಆಹಾರ ಅತ್ಯಗತ್ಯ. ಆದರೆ ಕೆಲವು ತಾಯಿಯರು ಇದನ್ನು ಒಪ್ಪುವ ಪರಿಸ್ಥಿತಿಯಲ್ಲಿಲ್ಲ, ತಾಯಿಗೆ ತನ್ನ ಮಗುವಿಗೆ ಮತ್ತಷ್ಟು ಉತ್ತಮವಾದದನ್ನು ಕೊಡಲೇಬೇಕು ಎಂಬ ಮನೋಭವ. ಕೆಲವೊಮ್ಮೆ ತನ್ನ ಮಗು ಅಗತ್ಯವಾದ ತೂಕ ಪಡೆಯುವಲ್ಲಿ ವಿಫಲವಾದರೆ ಅದಕ್ಕಿಂತ ರ್ದುದೈವ ತಾಯಿಗೆ ಮತ್ತೊಂದಿಲ್ಲ.

ಸಾಕಷ್ಟು ನಿದ್ದೆಯಿಲ್ಲದ ರಾತ್ರಿ ಮತ್ತು ಹತಾಶೆಯಿಂದ ಪೋಷಕರು ಮಕ್ಕಳಿಗೆ ಸಿಕ್ಕ ಸಿಕ್ಕ ಜಂಕ್‌ ಫುಢ್‌‌ಗಳನೆಲ್ಲ ತಿನ್ನಿಸಲು ಪ್ರಾಂಭಿಸುತ್ತಾರೆ ಇದರ ಫಲಿತಾಂಶದಿಂದ ಮಕ್ಕಳ ಆರೋಗ್ಯ ಕೆಡುವುದಲ್ಲದೆ, ಅಧಿಕ ತೂಕವನ್ನು ಕೂಡ ಪಡೆಯುತ್ತಾರೆ. ಇಂತಹ ಆಪತ್ತುನ್ನು ಹೋಗಲಾಡಿಸಿ ಮಕ್ಕಳು ಆರೋಗ್ಯಕಾರವಾಗಿ ಬೆಳೆಯಲು ಇಲ್ಲಿದೆ 5 ಪ್ರಮುಖ ಉಪಯಾಗಳು ಅಮ್ಮಂದಿರೆ ಇದು ಕೇವಲ ನಿಮಗಾಗಿ.

1. ಬಲವಂತವಾಗಿ ಏನನ್ನೂ ತಿನ್ನಿಸಬೇಡಿ

ಅತಿ ಕೆಟ್ಟ ಅಭ್ಯಾಸವೆಂದರೆ ಮಕ್ಕಳಿಗೆ ಬಲವಂತವಾಗಿ ತಿನ್ನಿಸುವುದು. ಇದರಿಂದ ಅವುಗಳು ಊಟವನ್ನು ಕಕ್ಕಬಹುದು ಅಥವಾ ವಾಂತಿ ಮಾಡಬಹುದು, ಆದರಿಂದ ಮಕ್ಕಳಿಗೆ ಬಲವಂತ ಮಾಡುವ ಬದಲು ಅವರೊಂದಿಗೆ ಕುಳಿತು ಆಟವಾಡುತ್ತ ಊಟಮಾಡಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಮಕ್ಕಳಿಗೆ ನೀವೇ ಮಾದರಿಯಾಗಬೇಕು. ಹೌದು ಊಟಮಾಡುವುದು ಕೂಡ ಮಕ್ಕಳು ಪೋಷಕ ರಿಂದ ಕಲಿಯುತ್ತಾರೆ. ಅದ್ದರಿಂದ ಮಕ್ಕಳೊಂದಿಗೆ ಕುಳಿತು ಸಂತೋಷವಾಗಿ ಹೊಟ್ಟೆ ತುಂಬಾ ತಿಂದರೆ ಮಕ್ಕಳು ಕೂಡ ಅದನ್ನು ಅನುಸರಿಸುತ್ತಾರೆ.

2. ಮಕ್ಕಳಿಗೆ ಬೇಕಾದ ಆಹಾರ ಪಟ್ಟಿ ಯನ್ನು ಸಿದ್ಧಪಡಿಸಿ

ಸರಳವಾದ ತಿನಿಸುಗಳನ್ನು ಸಿದ್ದಪಡಿಸಿದರೂ ಅದು ಮಕ್ಕಳಿಗೆ ರುಚಿಸಲಿ ಮತ್ತು ತಿನ್ನಲು, ಜೀರ್ಣಿಸಿಕೊಳ್ಳುಲು ಸುಲಭವಾಗಿರಲಿ. ತೂಕ ಹೆಚ್ಚಿಸಿ ಕೊಳ್ಳಲು ಕೆಲವು ಒಳ್ಳೆಯ ಪೌಷ್ಟಿಕ ಆಹಾರಗಳೆಂದರೆ: ಮೊಟ್ಟೆ, ಶೇಂಗಾ ಬೆಣ್ಣೆ, ಮೊಸರು, ತಕ್ಕಮಟ್ಟಿಗೆ ತುಪ್ಪ, ಚೀಸ್‌, ಇತ್ಯಾದಿ. ವೈಟ್‌ ಬ್ರೆಡ್ಡು‌ ಗ್ರೀಲ್ಡ್‌ ಸ್ಯಾಂಡ್‌ವೀಚ್‌ ಮತ್ತು ಚೀಸ್‌ನಂತಹ ತಿನಿಸು ಗಳನ್ನು ಕೊಟ್ಟರೆ ಮಕ್ಕಳು ಸಂತೋಷದಿಂದ ತಿನ್ನುತ್ತಾರೆ ಮತ್ತು ಅದು ಬಹಳ ಆರೋಗ್ಯಕಾರವಾದದ್ದು ಕೂಡ ಹೌದು!

3. ಜ್ಯೂಸ್‌ ಮತ್ತು ದ್ರವ ಪದಾರ್ಥಗಳು ಮಕ್ಕಳ ಬೆಸ್ಟ್‌ ಫ್ರೇಂಡ್‌

ನಿಮ್ಮ ಮಗು ಟಿವಿಯಲ್ಲಿ ಏನೋ ನೋಡ ಬೇಕಾದರೆ, ಆಟವಾಡಬೇಕಾದರೆ ಬೇಗನೆ ಒಂದು ಆರೋಗ್ಯಕಾರವಾದ ಹಣ್ಣಿನ ರಸವನ್ನು ತಯಾರಿಸಿಕೊಟ್ಟರೆ ಅವರು ಟಿವಿ ಯನ್ನು ನೋಡುತ್ತಾ ಸಿಪ್‌ ಬೈ ಸಿಪ್‌ ಕುಡಿಯುತ್ತಾ ಖಾಲಿಮಾಡುತ್ತವೆ.

4. ಆಡುಗೆ ಮಾಡುವಾಗ ಮಕ್ಕಳನ್ನು ತೊಡಗಿಸಿ

ನೀವು ಚಪಾತಿ ಮಾಡುತ್ತಿದ್ದರೆ ನಿಮ್ಮ ಮಗುವನ್ನು ಕರೆದು ಏಕೆ ಅವರನ್ನು ಸಹಾಯ ಕೇಳಬಾರದು? ವಿಧವಿಧವಾದ ಶೇಪ್‌ನಲ್ಲಿ ಚಪಾತಿ ಹಿಟ್ಟನ್ನು ಕಟ್‌ ಮಾಡಿ ಮಕ್ಕಳಿಗೆ ನೀಡಿ ಅವರೊಂದಿಗೆ ಆಟವಾಡುತ್ತಾ ಆಡುಗೆ ತಾಯರಿಸದರೆ ಅವರಿಗೂ ಕೂಡ ಆಹಾರದಲ್ಲಿ ಆಸಕ್ತಿ ಬರುತ್ತದೆ ಮತ್ತು ಬಿಸಿ ಬಿಸಿ ಆಹಾರ ಕಣ್ಣಮುಂದೆ ತಾಯರಾಗುತ್ತಿದ್ದರೆ ಯಾರಿಗೆ ತಾನೇ ಹೊಟ್ಟೆ ಹಸಿಯುವುದಿಲ್ಲ ಹೇಳಿ. ಇದರಿಂದ ಮಕ್ಕಳು ಸ್ಪಲ್ಪ ಹೆಚ್ಚಾಗಿ ತಿನ್ನಬಹುದು ಕೂಡ.

ಪ್ರಮುಖ ಸಲಹೆ: ಮಕ್ಕ‌ಳಿಗೆ ತಾಯರಿಸಿದ ಚಪಾತಿಗೆ ಸ್ವಲ್ಪ ಹೆಚ್ಚಾಗೆ ತುಪ್ಪ ಹಾಕಿಕೊಟ್ಟರೆ ಮಕ್ಕಳು ಕೂಡ ಇಷ್ಟಪಡುತ್ತಾರೆ ಮತ್ತು ಅದು ಮಕ್ಕಳಿಗೆ ಆಗತ್ಯವಾದ ಪೌಷ್ಟಿಕಂಶವನ್ನು ಕೂಡ ಕೊಡುತ್ತದೆ.

5. ನೀವು ತಯಾರಿಸಿರುವ ಆಹಾರವನ್ನು ನಿಮ್ಮ ಮಗುವಿಗೆ ಮಾರಬೇಡಿ

ನೀವು ತಯಾರಿಸಿದ ಆಹಾರವನ್ನು ಮಗುವಿಗೆ ತೋರಿಸಿ: “ಆಹಾ.. ಚೆನ್ನಾಗಿದೆ..” ಅಂತಿತ್ಯಾದಿ ಪದಗಳನ್ನು ಹೇಳಿದರೆ ಮಕ್ಕಳಿಗೆ ನೀವು ತಯಾರಿಸಿದ ಆಹಾರದ ಬಗ್ಗೆ ಸಂಶಯ ಬರುತ್ತದೆ. ಅಮ್ಮ ನಾನು ತಿನ್ನಲು ನಾಟಕ ಮಾಡುತ್ತಿದ್ದಾಳೆ ಎಂದು ಅವುಗಳು ಊಟ ಮಾಡದೇ ಇರಬಹುದು. ಅದರಿಂದ ಮಕ್ಕಳೆ ಅದನ್ನು ತಿನ್ನಲಿ, ಅದಕ್ಕೆ ಪುಸಲಾಯಿಸಬೇಡಿ.

Leave a Reply

%d bloggers like this: