ಶಿಕ್ಷಕಿ ತಾಯಿಯಾದಾಗ!

ಶಿಕ್ಷಕರ ಪಾತ್ರ ಪ್ರತಿ ವಿದ್ಯಾರ್ಥಿ ಜೀವನದಲ್ಲಿ ತುಂಬಾ ಅತ್ಯುನ್ನತ ಸ್ಥಾನವನ್ನು ಪಡೆದುಕೊಳ್ಳುತ್ತದೆ. ತನ್ನ ಎಲ್ಲಾ ವಿದ್ಯಾರ್ಥಿಗಳ ಜೀವನವನ್ನು ಸುಂದರವಾಗಿ ರೂಪಿಸುವ ಆಸೆ ಹೊಂದಿರುವ ಶಿಕ್ಷಕರು ತಮ್ಮ ಮಕ್ಕಳ ಬಗ್ಗೆ ಏನು ಕನಸು ಕಂಡಿರುವರು? ಅವರು ಮನೆಯಲ್ಲಿ ಅವರಿಗೆ ಹೇಗೆ ಪಾಠ ಹೇಳಿಕೊಡಬಹುದು? ಶಿಸ್ತಿನಿಂದ ಇರಿಸುವರೇ? ಇಲ್ಲ ಮಗುವಿನ ಇಷ್ಟದಂತೆ ನಡೆಸುಕೊಳ್ಳುವರೇ? ಇಂತಹ ಪ್ರಶ್ನೆ ಬರುವುದು ಸಹಜ. ನಿಮಗೆಲ್ಲಾ ತಿಳಿದಿದೆ, ತಾಯಿಯೇ ಮೊದಲ ಗುರು ಎಂದು. ಅಂತಹ ತಾಯಿ ಶಿಕ್ಷಕಿಯಾಗಿದ್ದಾಗ, ಆಕೆ ಅನುಭವಿಸುವ ಕೆಲವು ಕಟು ಸತ್ಯಗಳು ಇಲ್ಲಿವೆ.

೧.ನಿಮ್ಮ ಮಗುವಿನ ಸಾಮರ್ಥ್ಯವನ್ನು ಬೇಗನೆ ಗಮನಿಸುವಿರಿ.

೨.ಮಗುವಿಗೆ ಉತ್ತಮವಾಗಿ ಹೇಗೆ ಹೇಳಿಕೊಡಬಹುದೆಂದು ನಿಮಗೆ ತಿಳಿದಿರುತ್ತದೆ.

೩.ನಿಮ್ಮ ಮಗು ಸರಿಯಾಗಿ ಕಲಿಯದಿದ್ದರೆ, ಶಿಕ್ಷಕರ ಮಕ್ಕಳು ದಡ್ಡರು ಎಂಬ ವಾಕ್ಯ, ನನ್ನ ವಿಷಯದಲ್ಲಿ ನಿಜವಾದಿತು ಎಂಬ ಭಯದಲ್ಲಿ ಅಥಾವ ಗೊಂದಲಕ್ಕೆ ದಾರಿಯಾಗಬಹುದು.

೪.ನೀವು ಶಿಕ್ಷಕಿಯಾಗಿರುವುದರಿಂದ ಶಾಲೆಯ ಕ್ರಮ, ನಡವಳಿಕೆ ಚೆನ್ನಾಗಿ ತಿಳಿದಿರುತ್ತದೆ, ಮಗುವಿನ ಯಾವುದೇ ಚಟುವಟಿಕೆಯನ್ನು ಬೇಗನೆ ಕಂಡುಕೊಳ್ಳಬಹುದು.

೫.ಶಾಲೆಯಲ್ಲಿ ಶಿಕ್ಷಕಿಯಾಗಿ, ಮನೆಯಲ್ಲಿ ತಾಯಿಯಾಗಿ ನಿಭಾಯಿಸುವುದು ಕಷ್ಟ.

೬.ನಿಮ್ಮ ಶಾಲೆಯಲ್ಲಿ ನಿಮ್ಮ ಮಗುವನ್ನು ಸೇರಿಸಲು ಗೊಂದಲ ಅಥವಾ ಮುಜುಗರ, ಏಕೆಂದರೆ ಮಗುವು ಇದರಿಂದ ಉದ್ಧಟತನಕ್ಕೆ ಗುರಿಯಾಗಬಹುದು ಅಥವಾ ಶಿಸ್ತಿನಲ್ಲಿ ವ್ಯತ್ಯಾಸ ಕಾಣಬಹುದು.

೭.ಶಿಕ್ಷಕಿಯರೇ ವಿದ್ಯಾರ್ಥಿಗಳಿಗಿಂತ ಹೆಚ್ಚು ಮನೆಗೆಲಸವನ್ನು(ಹೋಮ್ ವರ್ಕ್) ಮಾಡುತ್ತಾರೆ.

೮.ಮಗುವಿನ ನೆಚ್ಚಿನ ಶಿಕ್ಷಕಿ ನೀವೇ ಆಗಿರಬೇಕಿಲ್ಲ, ಇದು ಬಹುಶಃ ನಿಮಗೆ ಬೇಸರದ ವಿಷಯವಾಗಬಹುದು.

Leave a Reply

%d bloggers like this: