ಇವರೇ ನೋಡಿ ಜಗತ್ತಿನ ಅತ್ಯಂತ ಕಿರಿಯ ತಂದೆ ತಾಯಿಯಂದಿರು!

ಪೋಷಕರಾಗುವುದೆಂದರೆ ಒಂದು ಸುಂದರವಾದ ಭಾವನೆ. ಆದರೆ ಒಂದು ಮಗುವಿನ ಪೋಷಕರಾಗಲು ಒಂದು ವ್ಯಕ್ತಿಯು ಮಾನಿಸಿಕವಾಗಿ, ದೈಹಿಕವಾಗಿ ಸಿದ್ದವಿರಬೇಕು. ಮಗುವಿಗೆ ಜನ್ಮ ನೀಡಿ ಅದನ್ನ ಸಾಕಿ ಸಲಹಬೇಕೆಂಬ ದೃಢವಾದ, ಸ್ಥಿರವಾದ ನಿರ್ಧಾರ ಮಾಡಿಕೊಳ್ಳಬೇಕು. ಪ್ರಬುದ್ಧತೆ ಮತ್ತು ಬದುಕಿನ ಮೇಲಿನ ನಿಯಂತ್ರಣವು ವಯಸ್ಸು ಆದಂತೆ ಬೆಳೆಯುತ್ತಾ ಹೋಗುತ್ತದೆ, ಆಗಲೇ ನಿಮಗೆ ನೀವು ಒಂದು ಮಗುವನ್ನ ಪಡೆಯಲಿಕ್ಕೆ ಸಿದ್ಧರಿದ್ದೀರಾ ಎಂದು ಗೊತ್ತಾಗುವುದು.

ಕೆಲವೊಂದು ಗರ್ಭಧಾರಣೆಯ ಸುದ್ದಿಗಳು ಕೇಳಿದರೆ ನಿಮಗೆ “ಅಯ್ಯೋ ಎಷ್ಟೊಂದು ಸುಂದರ” ಎನಿಸಬಹುದು, ಇನ್ನೂ ಕೆಲವನ್ನ ಕೇಳಿದರೆ “ಹೀಗೆ ಎಂದಿಗೂ ಆಗಬಾರದು” ಅಂತಲೂ ಅನಿಸಬಹುದು. ಜಗತ್ತಿನ ಅತ್ಯಂತ ಕಿರಿಯ ತಾಯಿ/ತಂದೆಯರ ಪಟ್ಟಿ ಇಲ್ಲಿದೆ, ನಿಮ್ಮ ಮನಸ್ಸು ಗಟ್ಟಿ ಮಾಡಿ ಓದಿಕೊಳ್ಳಿ!

೧. ಜಗತ್ತಿನ ಅತ್ಯಂತ ಕಿರಿಯ ತಂದೆ

13 ವರ್ಷದ ಬ್ರಿಟನ್ನಿನ ಹುಡುಗನೊಬ್ಬ ೨೦೧೪ ರಲ್ಲಿ ಒಂದು ಹೆಣ್ಣು ಮಗುವಿಗೆ ತಂದೆಯಾದ. ಈತನಿಗೆ 12 ವರ್ಷದ ಗೆಳತಿ ಒಬ್ಬಳು ಇದ್ದಳು. ಇನ್ನೂ ಅವರೇ ಬೆಳೆಯುತ್ತಿರುವಾಗ, ಇವರೇ ಒಂದು ಜೀವಕ್ಕೆ ಜನ್ಮ ನೀಡಿಬಿಟ್ಟರು! ಆದರೆ ಈ ಜೋಡಿ ತಮ್ಮ ವಸ್ತುಸ್ತಿತಿಯನ್ನ ಒಪ್ಪಿಕೊಂಡು, ತಂದೆ-ತಾಯಿಯ ಜವಾಬ್ದಾರಿ ಹೊತ್ತು ಇವಾಗ ಅವರ ಮಗುವನ್ನ ಕೂಡ ನೋಡಿಕೊಳ್ಳುತ್ತಿದ್ದಾರೆ!

೨. ಲೀನಾ ವನೆಸ್ಸಾ

ಪೆರುವಿಯಾ ದೇಶದ 5 ವರ್ಷದ ಹುಡುಗಿ ಲೀನಾ ವನೆಸ್ಸಾ ಜಗತ್ತಿನ ಅತ್ಯಂತ ಕಿರಿಯ ತಾಯಿ ಆಗಿದ್ದಾಳೆ! ಅತ್ಯಂತ ಕಿರಿಯ ತಾಯಿಯೆಂದು ಗಿನ್ನಿಸ್ ದಾಖಲೆ ಕೂಡ ಇವಳ ಪಾಲಾಗಿದೆ! ಈಕೆಯು ಒಂದು ಗಂಡು ಮಗುವಿಗೆ ಜನ್ಮ ನೀಡಿ, ಅದಕ್ಕೆ ತನ್ನ ಶಸ್ತ್ರ ಚಿಕಿತ್ಸೆ ಕೈಗೊಂಡ ವೈದ್ಯರಾದ ಗೆರರ್ಡೋ ಅವರ ಹೆಸರಿಟ್ಟಿದ್ದಾಳೆ.

ಈಕೆಯ ದೇಹವು ಬೇರೆಯ ಹುಡುಗಿಯರಂತೆ ಇರಲಿಲ್ಲ. ಈಕೆಗೆ ಪ್ರೆಕೊಶಿಯಸ್ ಪುಬೇರ್ಟಿ ಎಂಬ ಒಂದು ಅಸ್ವಸ್ತತೆ ಇದ್ದು ಈಕೆಯು ತುಂಬಾ ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ಭಾಗಗಳ ಪೂರ್ಣ ಬೆಳವಣಿಗೆ ಹೊಂದಿದ್ದಳು ಆದರೆ ಕೆಲವೇ ತಿಂಗಳುಗಳ ನಂತರ ಈಕೆಯನ್ನ ದೈಹಿಕ ಮತ್ತು ಲೈಂಗಿಕ ಕಿರುಕಳ ಆರೋಪದ ಅಡಿಯಲ್ಲಿ ಬಂಧಿಸಲಾಯಿತು.

೩. 13 ವರ್ಷದ ಮಹಾತಾಯಿ!

ಬ್ರಿಟನ್ನಿನ ಅಲೀಶ ಗ್ರೆಗ್ಸನ್ ಮೊದಲು ತನ್ನ 13 ವರ್ಷದಲ್ಲಿ ಒಂದು ಮಗುವಿಗೆ ಜನ್ಮ ನೀಡಿ ನಂತರ ತನ್ನ 14ನೆ ವಸಂತಕ್ಕೆ ಕಾಲಿಟ್ಟೊಡನೆ ಮತ್ತೊಂದು ಮಗುವಿಗೆ ಜನ್ಮ ನೀಡಿದಳು. ಈಕೆಯು ಶಾಲೆಯಲ್ಲಿ ಕಿಡಿಗೇಡಿಗಳ ದುರ್ವರ್ತನೆಗೆ ತುತ್ತಾಗಿದ್ದಳು. ಈಕೆಯ ಬೆಂಬಲಕ್ಕೆ ಎಂದು ಇದ್ದವನು ಈಕೆಯ ಬಾಯ್ಫ್ರೆಂಡ್ ಒಬ್ಬನೇ.

ಈಕೆಯು ಇವನೊಂದಿಗೆ ಒಂದು ಮಗುವನ್ನು ಮಾಡಿಕೊಂಡಳು, ಒಂದು ವರ್ಷದ ನಂತರ ಇವರಿಬ್ಬರು ಬೇರೇ ಆದೊಡನೆ ಈಕೆ ಮತ್ತೊಂದು ಮಗುವಿಗೆ ಜನ್ಮ ನೀಡಿದಳು. ಈಗ ಈಕೆಯು ಶಾಲೆಯನ್ನ ತ್ಯಜಿಸಿ, ಮಕ್ಕಳನ್ನು ಸಾಕಲು ತೀವ್ರ ಕಷ್ಟ ಎದುರಿಸುತ್ತಿದ್ದಾಳೆ. ಈಗ ಇವಳು ಸಮಾಜ ವಿಜ್ಞಾನ ಕಲಿತು ಬೇರೇ ಒಂಟಿ ತಾಯಂದಿರಿಗೆ ನೆರವು ನೀಡಲು ಪ್ರಯತ್ನಿಸುತ್ತಿದ್ದಾಳೆ.

೪. ಲೀಸಾ ಗೈಸೆನ್ಕೋ

ಇದು ಉಕ್ರೇನಿನ ಮತ್ತೊಂದು ಹುಡುಗಿ ಕೇವಲ 6 ವರ್ಷದವಳು ಇದ್ದಾಗಲೇ ತಾಯಿ ಆದ ಕಥೆ. ಆದರೆ ದುರದೃಷ್ಟವಶಾತ್, ಹೆರಿಗೆ ವೇಳೆ ಮಗು ಬದುಕುಳಿಯಲಿಲ್ಲ. ಮಗುವು ದಹಿಕವಾಗಿ ಅಸಮರ್ಥ ಆಗಿತ್ತು, ಅಲ್ಲದೆ ತಾಯಿ ಕೂಡ ಒಂದು ಮಗುವಿಗೆ ಜನ್ಮ ನೀಡುವ ಯಾವುದೇ ದೈಹಿಕ ಸಾಮರ್ಥ್ಯ ಹೊಂದಿರಲಿಲ್ಲ. ನಂತರ ಗೊತ್ತಾಗಿದ್ದು, ಆಕೆಯ 70 ವರ್ಷದ ತಾತನೇ ಈಕೆ ಗರ್ಭ ಧರಿಸಲು ಕಾರಣ ಎಂದು!

ಈ ಚಿಕ್ಕ ಹುಡುಗಿಯು ಲೈಂಗಿಕ ಕಿರುಕುಳಕ್ಕೆ ಬಲಿಯಾದವಳು!

೫. ಏನಿದು??!

ಬೊಲಿವಿಯ ದೇಶದ 10 ವರ್ಷದ ಹುಡುಗಿಯು ಒಂದು ಆರೋಗ್ಯಕರ ಗಂಡು ಮಗುವಿನ ತಾಯಿ! ಈ ಗಂಡು ಶಿಶುವು ಸಿಸೇರಿಯನ್ ಮೂಲಕ ಜನಿಸಿತು. ನಂತರ ಪೋಲಿಸ್ ಅಧಿಕಾರಿಗಳು ತನಿಖೆ ನಡೆಸಿದಾಗ ಈಕೆ ತಿಂಗಳುಗಳ ಕಾಲ ದೈಹಿಕ ಮತ್ತು ಲೈಂಗಿಕ ಕಿರುಕಳಕ್ಕೆ ಒಳಗಾಗಿದ್ದಳು ಎಂಬುದು ತಿಳಿದು ಬಂದಿತು. ಆಗಲೇ ತಿಳಿದು ಬಂದಿದ್ದು, ಈಕೆಯ ಮಗುವಿನ ತಂದೆ, ಈಕೆಯ ತಂದೆಯೇ ಎಂದು! ಎಂತಾ ವಿಪರ್ಯಾಸ!

Leave a Reply

%d bloggers like this: