ಕಣ್ಣಿನ ಕೆಳಗಿನ ಚೀಲಗಳಿಗೆ ಬೈ ಬೈ ಹೇಳಿ

ನೀವು ಹದಿಹರೆಯದವರಾಗಿರಲಿ ,ಇಪ್ಪತ್ತರ ತುಂಬು ಯೌವನದಲ್ಲಿರಿ ಅಥವಾ ನಡುಹರೆಯವನ್ನು ದಾಟುತ್ತಿರಲಿ ಎಲ್ಲಾ ವಯಸ್ಸಿನ ಮಹಿಳೆಯರು ನೀಡುವ ದೂರುಗಳಲ್ಲಿ ಅತ್ಯಂತ ಸಾಮಾನ್ಯವಾದುದು ತಮ್ಮ ಕಣ್ಣುಗಳ ಕೆಳಗಿನ ಚೀಲಗಳ ಬಗ್ಗೆ .ನಿಮ್ಮ ಕಣ್ಣುಗಳ ಸುತ್ತಲೂ ಇರುವ ಆ ವಲಯಗಳು ನಿಮ್ಮ ವಯಸ್ಸಿಗಿಂತಲೂ ನಿಮ್ಮನ್ನು ವಯಸ್ಸಾದವರಂತೆ ಕಾಣುವಂತೆ ಮಾಡುತ್ತವೆ  ಮತ್ತು ಇದನ್ನು ಯಾರೂ ಬಯಸುವುದಿಲ್ಲ.

ನಿಮಗೆ ವಯಸ್ಸಾಗುತ್ತಿದ್ದಂತೆ ನಿಮ್ಮ ಕಣ್ಣುಗಳ ಸುತ್ತಲೂ ಇರುವ ಕಪ್ಪು ವರ್ತುಲಗಳು ಊದಿಕೊಳ್ಳುತ್ತವೆ ,ಸಾಮಾನ್ಯವಾಗಿ ಇವುಗಳನ್ನು ಕಣ್ಣಿನ ಚೀಲಗಳು ಎಂದು ಉಲ್ಲೇಖಿಸಲಾಗುತ್ತದೆ . ಚೀಲಗಳು ಕಣ್ಣುಗಳ ಸುತ್ತಲೂ ಚರ್ಮದ ಅಂಗಾಂಶಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಕುಗ್ಗಿಸುತ್ತವೆ ,ಇದು  ಕಣ್ಣುಗಳ ಕೆಳಗೆ ದ್ರವವು ಸಂಗ್ರಹಿಸಲು ಕಾರಣವಾಗುತ್ತದೆ ,ಮತ್ತು ಊದಿಕೊಂಡ ನೋಟವನ್ನು ಸೃಷ್ಟಿಸುತ್ತದೆ.

ಋತುಮಾನದ ಅಲರ್ಜಿಗಳು, ಎಸ್ಜಿಮಾ, ನೀರಿನ ಧಾರಣೆ ಮತ್ತು ಮುಖವನ್ನು ಕೆಳಗೆ ಮಾಡಿ ಮಲಗುವ ಕಾರಣದಿಂದಾಗಿ ಕಣ್ಣಿನ ಕೆಳಗೆ ಚೀಲಗಳು ಸೃಷ್ಟಿಯಾಗಬಹುದು . ಕೆಲವೊಮ್ಮೆ, ಆನುವಂಶಿಕತೆಯು ಸಹ  ಪಾತ್ರವನ್ನು ವಹಿಸುತ್ತದೆ.ಧೂಮಪಾನ, ಮಾದಕ ದ್ರವ್ಯಗಳು ,ಮದ್ಯ ವ್ಯಸನ ಹೀಗೆ ಕೆಲವು ಸ್ವಯಂ-ವರ್ತನೆಯ ನಡವಳಿಕೆಗಳು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ.

ಆ ಅಸಹ್ಯವಾದ ಕಣ್ಣಿನ ಚೀಲಗಳಿಗೆ ನೀವು ವಿದಾಯ ಹೇಳಲು 6 ಮಾರ್ಗಗಳಿವೆ!

೧.ಮಲಗುವ ಭಂಗಿ

ನೀವು ನಿದ್ರಿಸುವ ಭಂಗಿಯು ನಿಮ್ಮ ಕಣ್ಣುಗಳ ಅಡಿಯು  ಚೀಲಗಳನ್ನು ಪಡೆಯುತ್ತದೆಯೇ ಅಥವಾ ಇಲ್ಲವೇ ಎನ್ನುವುದನ್ನು  ನಿರ್ಧರಿಸುತ್ತದೆ.ಆದ್ದರಿಂದ, ನಿಮ್ಮ ಬೆನ್ನಿನ ಮೇಲೆ  ನಿದ್ರೆ ಮಾಡಲು ಪ್ರಯತ್ನಿಸಿ, ಆದ್ದರಿಂದ ದ್ರವವು ಕಣ್ಣುಗಳ ಸುತ್ತಲೂ ನಿರ್ಮಾಣವಾಗುವುದಿಲ್ಲ .ನಿಮಗೆ ಬೇಕಾದಲ್ಲಿ ಮತ್ತೊಂದು ಮೆತ್ತೆ (ದಿಂಬು )ಸೇರಿಸಿ, ಆದರೆ ನೀವು ಆರಾಮದಾಯಕವಾಗಿದ್ದೀರಿ  ಎಂದು ಖಚಿತಪಡಿಸಿಕೊಳ್ಳಿ.

೨.ಉಪ್ಪಿನ ಬಳಕೆ ಮಿತವಾಗಿ ಮಾಡಿ

ಹೌದು, ಉಪ್ಪು ವಾಸ್ತವವಾಗಿ ಹೆಚ್ಚಿನ ಬಿಪಿಗೆ ಮಾತ್ರ ಸಂಬಂಧಿಸಿದೆ, ಆದರೆ ಕಣ್ಣುಗಳ ಸುತ್ತಲೂ ದ್ರವದ ಧಾರಣಕ್ಕೆ ಕಾರಣವಾಗಬಹುದು, ಇದರಿಂದಾಗಿ ಊದಿಕೊಳ್ಳುವಿಕೆ ಉಂಟಾಗುತ್ತದೆ .ಉಪ್ಪನ್ನು ಮಿತವಾಗಿ ಬಳಸಲು ಮರೆಯದಿರಿ ,ಉಪ್ಪು ಹೆಚ್ಚಿರುವ ಆಹಾರಗಳನ್ನು ತಪ್ಪಿಸಿ ಮತ್ತು ಸಾಧ್ಯವಾದಷ್ಟು ತಾಜಾ ತರಕಾರಿಗಳನ್ನು ಆರಿಸಿಕೊಳ್ಳಿ.

೩.ವ್ಯಾಯಾಮ

ಆರೋಗ್ಯಕರವಾಗಿ ತಿನ್ನುವುದರ ಬಗ್ಗೆ ಮಾತನಾಡುವಾಗ ,ಉದ್ಯಾನದಲ್ಲಿ ಓಟ ಅಥವಾ ಜಾಗಿಂಗ್ ಗಾಗಿ ಹೋಗಿ .ಸ್ನಾಯುಗಳನ್ನು ವಿಸ್ತರಿಸಿ ಮತ್ತು  ತಾಜಾ ಗಾಳಿಯನ್ನು ಸೇವಿಸಿ .ವಯಸ್ಸನ್ನು ದೂರವಿಡಲು ವ್ಯಾಯಾಮ ಒಳ್ಳೆಯದು.ನಿಮ್ಮ ಮುಖಕ್ಕೆ ವಿಶೇಷ ವ್ಯಾಯಾಮವನ್ನು ರೂಢಿಸಿಕೊಳ್ಳಬಹುದು ಮತ್ತು ಮುಖದ ಸ್ನಾಯುಗಳ ಬಿಗಿತ ಮತ್ತು ಟೋನಿಂಗ್ ಸ್ವಾಗತಾರ್ಹವಾಗಿರುತ್ತವೆ.

೪.ಸೌಂದರ್ಯ ಪ್ರಸಾದನಗಳನ್ನು (ಮೇಕ್ ಅಪ್ )ನ್ನು ತೆಗೆದು ಹಾಕಿ

ಮುಂಜಾನೆ ಒಬ್ಬ ಸೌಂದರ್ಯ ದೇವತೆಯಂತೆ ಕಾಣಿಸುವುದು ಬಹಳ ಸಂತೋಷದ ವಿಷಯವಾಗಿದೆ , ಆದರೆ ನೀವು ಮಲಗಲು ಹೋಗುತ್ತಿರುವಾಗಲೂ ಅದನ್ನು ಮಾಡಬೇಡಿ! ಕಣ್ಣುಗಳಲ್ಲಿ ಮೇಕ್ ಅಪ್ ನ್ನು ಇಟ್ಟುಕೊಳ್ಳುವುದು ಅವುಗಳಿಗೆ ಕಿರಿಕಿರಿಯನ್ನು ಉಂಟುಮಾಡಬಹುದು,ಅವುಗಳಲ್ಲಿ ನೀರುಂಟು ಮಾಡಿ ಊದಿಕೊಂಡು ಕಾಣುವಂತೆ ಮಾಡಬಹುದು .

೫.ಮದ್ಯ ಮತ್ತು ಧೂಮಪಾನವನ್ನು ತೊಡೆದು ಹಾಕಿ .

ಈ ಪದ್ಧತಿಗಳನ್ನು ನೀವು ಬಿಟ್ಟುಕೊಡಬೇಕು ಅಥವಾ ಕಣ್ಣಿನ ಚೀಲಗಳನ್ನು ಹೊಂದದೆ ಇರಲು  ನೀವು ಉತ್ತಮ ಅವಕಾಶವನ್ನು ಬಯಸಿದರೆ ಅವುಗಳನ್ನು ಕನಿಷ್ಠವಾಗಿ ಪರೀಕ್ಷಿಸಿ ಮಿತವಾಗಿಸಿ .ಮದ್ಯವು ನಿಮ್ಮ ದೇಹ ಮತ್ತು ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ, ಇದು ನಿಮ್ಮ ಕಣ್ಣಿನ ಸುತ್ತಲಿನ ಪ್ರದೇಶವು ಮುಳುಗಿದ ಮತ್ತು ಗಾಢವಾಗಿ ಕಂಡುಬರುವಂತೆ ಮಾಡುತ್ತದೆ.  ಮತ್ತು ಸಿಗರೇಟ್? ಅವು ನಿಮ್ಮ ಚರ್ಮವನ್ನು ಒಣಗಿಸುತ್ತವೆ ಮತ್ತು ದುರ್ಬಲಗೊಳಿಸುತ್ತವೆ  ಕಣ್ಣುಗಳ ಸುತ್ತ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತವೆ .

೬.ನಿಮ್ಮ ಕಣ್ಣುಗಳನ್ನು ಲಾಲಿಸಿ

ನೀವು ಕಣ್ಣಿನ ಚೀಲಗಳಿಂದ ಮುಕ್ತಿ ಹೊಂದಲು ಬಯಸಿದಲ್ಲಿ ತಂಪಾದ ಸಂಕುಚನವನ್ನು ಪ್ರಯತ್ನಿಸಿ. ಇದು ಕಣ್ಣಿನ ಊಟವನ್ನು ಕಡಿಮೆಗೊಳಿಸುವುದರ ಜೊತೆಗೆ  ಕಣ್ಣಿನ ಸ್ಪಾ ಆಗಿಯೂ ಕಾರ್ಯ ನಿರ್ವಹಿಸುತ್ತದೆ .ಲ್ಯಾವೆಂಡರ್ ಎಣ್ಣೆಯ ಬಿಂದಿನ  ಜೊತೆಗೆ, ನಿಮ್ಮ ಕಣ್ಣುಗಳ ಮೇಲೆ ಶೀತಲ ಚಮಚ ಅಥವಾ ಸೌತೆಕಾಯಿಗಳನ್ನು ಬಳಸಿ. ಇದು ಆ ಚೀಲಗಳನ್ನು ತೊಡೆದುಹಾಕುತ್ತದೆ  ಮತ್ತು ನಿಮ್ಮ ಕಣ್ಣುಗಳಿಗೆ ಬೇಕಾದ ಪರಿಹಾರವನ್ನು ಸಹ ಒದಗಿಸುತ್ತದೆ .

ಮೇಲೆ ಹೇಳಿದ ಎಲ್ಲವನ್ನೂ ಮಾಡುವ ಜೊತೆಗೆ ಸ್ವಲ್ಪ ಸಡಿಲಗೊಳ್ಳಲು ಮತ್ತು ಶಾಂತಿಯಿಂದಿರಲು ಮರೆಯಬೇಡಿ .ಆತಂಕ ಮತ್ತು ಒತ್ತಡವು ಕಣ್ಣುಗಳ ಸುತ್ತಲೂ ಕಪ್ಪು ವೃತ್ತಗಳನ್ನು ಪ್ರಚೋದಿಸುತ್ತದೆ – ಆದ್ದರಿಂದ ವಿಶ್ರಾಂತಿಯಿಂದಿರಲು ಮರೆಯದಿರಿ .

Leave a Reply

%d bloggers like this: