ಗರ್ಭಿಣಿಯರು ಹೆರಿಗೆತಜ್ಞರ ಬಳಿ ಕೇಳಲು ಹೆದರುವ ಪ್ರಶ್ನೆಗಳು ಮತ್ತು ಉತ್ತರಗಳು

ಗರ್ಭಧಾರಣೆ ಎನ್ನುವುದು ವಿಚಿತ್ರ, ನವೀನ ಹಾಗು ಕೆಲವೊಮ್ಮೆ ಸಂಕೋಚ ಪಟ್ಟುಕೊಳ್ಳುವ ಅಡ್ಡಪರಿಣಾಮಗಳು ಮತ್ತು ಭಯಗಳನ್ನ ಒಳಗೊಂಡಿರುತ್ತದೆ. ನಿಮ್ಮಲ್ಲಿ ಹುಟ್ಟುವ ಕೆಲವೊಂದು ಪ್ರಶ್ನೆಗಳನ್ನ ವೈದ್ಯರ ಬಳಿ ಕೇಳಲು ನೀವು ಸಂಕೋಚ ಪಟ್ಟುಕೊಂಡರೆ ವಿಚಲಿತ ಆಗಬೇಡಿ. ಇದು ಕೇವಲ ನಿಮಗೆ ಮಾತ್ರ ಆಗುತ್ತಿರುವುದಲ್ಲ. ನಾವು ನಿಮಗೆ ಸಹಾಯ ಆಗಲೆಂದೇ ನೀವು ಕೇಳಲಾಗದ ಪ್ರಶ್ನೆಗಳನ್ನ ನಾವು ಕೆಲವು ಸೂಪರ್ ಫ್ರೆಂಡ್ಲಿ ವೈದ್ಯರ ಬಳಿ ಕೇಳಿ ಉತ್ತರಗಳನ್ನ ಪಡೆದಿದ್ದೇವೆ. ಇದರಲ್ಲಿ ನಿಮ್ಮ ಪ್ರಶ್ನೆಗಳು ಕೂಡ ಇರಬಹುದು, ಓದಿ.

೧. ಹೆರಿಗೆ ವೇಳೆ ನನ್ನಲ್ಲಿ ಕರುಳಿನ ಚಲನೆಯಾಗಿ ಮಲವಿಸರ್ಜನೆ ಆಗಬಹುದೇ?

ವೈದ್ಯರಾದ ಮೇರಿ ರೋಸಿಯರ್ ಹೆಂಗಸರಿಗೆ ಹೇಳಲು ಬಯಸುವುದು ಏನೆಂದರೆ ಹೆರಿಗೆ ಅನ್ನುವುದು ಸಾರ್ವಜನಿಕವಾಗಿ ಮಾಡುವ ಪ್ರಕ್ರಿಯೆ ಅಲ್ಲ. ನೀವು ನಿಮ್ಮ ಮಗುವನ್ನ ಹೊರಗಡೆ ತಲ್ಳುವಾಗ ಮಲವಿಸರ್ಜನೆ ಮಾಡುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ನಿಮ್ಮ ಕರುಳು ತುಂಬಿದ್ದರೆ ಇದು ಆಗಬಹುದು ಏಕೆಂದರೆ ಗರ್ಭಕೋಶದ ಅಡಿಯಲ್ಲೇ ರೆಕ್ಟಂ ಇರುತ್ತದೆ. ಹೀಗಾಗಿ ನೀವು ಮಗುವನ್ನ ಹೊರಗೆ ತಳ್ಳುವಾಗ, ಅದರ ಮೇಲೆಯೂ ಒತ್ತಡ ಬೀಳುತ್ತದೆ. ಅದೇನೇ ಇರಲಿ, ಹೆರಿಗೆ ರೂಮಿನಲ್ಲಿ ಇರುವ ಪ್ರತಿಯೊಂದು ವೈದ್ಯ, ಸಿಬ್ಬಂದಿ ಎಲ್ಲರೂ ನಿಮಗೆ ಬೆಂಬಲ ನೀಡಲೆಂದೇ ಹಾಗು ಸಹಾಯ ಮಾಡಲೆಂದೇ ಇರುತ್ತಾರೆ. ಅಲ್ಲದೆ ಇವರೆಲ್ಲರೂ ನಿಮ್ಮ ಗೌಪ್ಯತೆ ಮತ್ತು ಘನೆತೆ ಬಗ್ಗೆ ಕಾಳಜಿ ಉಳ್ಳವರೇ ಆಗಿರುತ್ತಾರೆ. ಹೀಗಾಗಿ ನೀವು ಮಲವಿಸರ್ಜನೆ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಮಗುವನ್ನ ಹೊರಗೆ ತಳ್ಳುವುದರ ಬಗ್ಗೆ ಯೋಚಿಸಿ.

೨. “ಅದು” ಪೂರ್ತಿ ಹಿಗ್ಗಿ ಹೋಗುತ್ತದೆಯೇ?

ಚಿಕ್ಕದಾಗಿ ಹೇಳಬೇಕೆಂದರೆ “ಇಲ್ಲ”. ನಿಮ್ಮ ಯೋನಿಯು ಜನ್ಮ ನೀಡುವಾಗ ಹಿಗ್ಗುವುದಕ್ಕೆ ಮತ್ತು ಅದರ ನಂತರ ಪುನಃ ಹಿಂದಿನ ಸ್ತಿತಿಗೆ ಮರಳುವಂತೆಯೇ ಸೃಷ್ಟಿ ಆಗಿರುತ್ತದೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ನೀವು ಬಹಳ ಹೊತ್ತು ಮೂತ್ರವನ್ನ ತಡೆದಿಟ್ಟು ಒಮ್ಮೆಲೇ ಬಿಡುಗಡೆ ಮಾಡುವಾಗ ನೀವು ಹೇಗೆ ನಿಮ್ಮ ಯೋನಿಯನ್ನು ಹಿಗ್ಗಿಸುತ್ತೀರೋ, ಹಾಗೆ ಅಷ್ಟೇ. ಕಾರ್ಯ ಆದಮೇಲೆ ನೀವು ಹಿಗ್ಗಿಸುವುದನ್ನ ನಿಲ್ಲಿಸುತ್ತೀರಾ, ಹಾಗಾಗಿ ಅದು ಕೂಡ ಹಿಂದಿನ ಸ್ತಿತಿಗೆ ವಾಪಸ್ ಆಗುತ್ತದೆ.

೩. ಜನ್ಮ ನೀಡಿದ ಮೇಲೆ ಸಂಭೋಗ ಏಕೆ ಅಷ್ಟೊಂದು ನೋವಿನಿಂದ ಕೂಡಿರುತ್ತದೆ?

“ನಿಮಗೆ ಈಗ ತಾನೇ ಮಗು ಆಗಿದೆ, ಎಲ್ಲವೂ ವಾಸಿ ಆಗಿ ಮೊದಲಿನಂತೆ ಆಗಲು ಸ್ವಲ್ಪ ಸಮಯ ಬೇಕು” ಎಂದು ಹೇಳುತ್ತಾರೆ ವೈದ್ಯರಾದ ಗಿಲ್ಬೆರ್ಗ್. ಎದೆಗಾಳು ಉಣಿಸುವ ತಾಯಂದಿರಿಗೆ, ಹಾರ್ಮೋನ್ಗಳ ಗತಿಯಲ್ಲಿ ಏರುಪೇರು ಆಗಿರುತ್ತದೆ, ಹೀಗಾಗಿ ಎಸ್ಟ್ರೋಜನ್(ಮದಜನಕ) ಕೂಡ ಕಮ್ಮಿ ಆಗಿರುತ್ತದೆ. ಇದು ನಿಮ್ಮ ಲ್ಯುಬ್ರಿಕೆಶನ್(ನಯವಾಗಿರುವುದು) ಅನ್ನು ಕಮ್ಮಿ ಮಾಡುತ್ತದೆ. ಹೀಗಾಗಿ ನಿಮ್ಮ ದೇಹಕ್ಕೆ ಸ್ವಲ್ಪ ಸಮಯ ನೀಡಿ ಅಥವಾ ಲ್ಯುಬ್ರಿಕ್ಯಾಂಟ್ (ಎರೆ ಎಣ್ಣೆ) ಅನ್ನು ಬಳಿಸಿ ಸಂಭೋಗದಲ್ಲಿ ತೊಡಗಿ.

೪. ಪ್ರೆಗ್ನನ್ಸಿ ನಂತರ ನನ್ನ ಮೂತ್ರನಾಳದ ಮೇಲೆ ಹಿಡಿತ ಕಮ್ಮಿ ಆಗುತ್ತದೆ ಅಂತೆ, ಹೌದ?

“ಗರ್ಭಧಾರಣೆ ಮತ್ತು ಹೆರಿಗೆ ನಂತರ ನಿಮ್ಮ ಮೂತ್ರನಾಳದ ಮೇಲಿನ ಹಿಡಿತ ಕಮ್ಮಿ ಆಗುತ್ತದೆ” ಎನ್ನುತ್ತಾರೆ ಸುಸೇನ್ ಗಿಲ್ಬೆರ್ಗ್-ಲೆನ್ಜ್. ನಿಮ್ಮ ಹೆರಿಗೆಯ ದಿನ ಹತ್ತಿರ ಬರುತ್ತಿದ್ದಂತೆ ನೀವು ನಿಮ್ಮ ಮೂತ್ರನಾಳ ಮೇಲಿನ ನಿಯಂತ್ರಣ ಕಮ್ಮಿ ಆಗುವುದನ್ನ ಗಮನಿಸುತ್ತೀರಾ. ಆದರೆ ಹೆರಿಗೆ ಆದ ಆರು ವಾರಗಳಿಂದ 3 ತಿಂಗಳುಗಳ ಒಳಗೆ ಇದು ವ್ಯತಿರಿಕ್ತವಾಗಿ ಬದಲಾವಣೆ ಹೊಂದುತ್ತದೆ. ಕೆಗೆಲ್ ವ್ಯಾಯಾಮಗಳು ಈ ಪ್ರಕ್ರಿಯೆಯಲ್ಲಿ ನಿಮಗೆ ಒಳ್ಳೆ ಸಹಾಯ ಮಾಡುತ್ತವೆ.

೫. ಇಷ್ಟೊಂದು ಸೋರಿಕೆ ಗರ್ಭಧಾರಣೆ ಅಲ್ಲಿ ಸಾಮಾನ್ಯವೆ?

ಹೌದು.ಗಿಲ್ಬೆರ್ಗ್-ಲೆನ್ಜ್ ಮೊದಲೇ ಹೇಳಿದಂತೆ, ಗರ್ಭಧಾರಣೆ ವೇಳೆ ಹೆಂಗಸಿನ ದೇಹದಲ್ಲಿನ ಹಾರ್ಮೋನ್ಗಳ ಗತಿಯಲ್ಲಿ ಬಹಳಷ್ಟು ವ್ಯತ್ಯಾಸಗಳು ಆಗುತ್ತವೆ. ಅಲ್ಲದೆ, ನಿಮ್ಮ ಸೊಂಟದಲ್ಲಿನ ರಕ್ತ ಸಂಚಾರ ಹೆಚ್ಚಿರುತ್ತದೆ. ಹೀಗಾಗಿ ನೀವು ಹೊರಸೂಸುವ ದ್ರವ್ಯಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಆಗುತ್ತದೆ. ನಿಮಗೆ ಉರಿತ, ನೋವು ಅಥವಾ ತುಂಬಾ ಕೆಟ್ಟ ವಾಸನೆಯ ದ್ರವ್ಯಗಳ ಸೋರಿಕೆ ಉಂಟಾದರೆ ನಿಮ್ಮ ವೈದ್ಯರನ್ನ ಭೇಟಿ ಮಾಡಿ.

Leave a Reply

%d bloggers like this: