ಜಗತ್ತಿನ 7 ಅತ್ಯಂತ ವಿಚಿತ್ರ ಹೆರಿಗೆಗಳು

ವಾರಗಟ್ಟಲೇ, ಕೆಲವೊಂದು ಬಾರಿ ತಿಂಗಳುಗಳಗಟ್ಟಲೆ ಕಾಲ ಹೆರಿಗೆ ನೋವು ಅನುಭವಿಸಿದ ತಾಯಂದಿರಿಂದ ಹಿಡಿದು, ತಾನು ಗರ್ಭಿಣಿ ಎಂದು ಗೊತ್ತೇ ಇರದ ತಾಯಂದಿರವರೆಗೆ; ಅತ್ಯಂತ ಚಿಕ್ಕ ಗಾತ್ರ ಮಗುವಿನಿಂದ ಹಿಡಿದು ನೈಸರ್ಗಿಕವಾಗಿ ಅತ್ಯಂತ ದೊಡ್ಡ ಗಾತ್ರದ ಮಗುವಿಗೆ ಜನ್ಮ ನೀಡಿದ ತಾಯಂದಿರವರೆಗೆ, ಈ ವಿಭಿನ್ನ ರೀತಿಯ ಹೆರಿಗೆಗಳು ಹುಡುಕುತ್ತಾ ಹೋದಷ್ಟು ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತವೆ. ಹೀಗೆ ನಾವು ಕಲೆ ಹಾಕಿದ ಅತ್ಯಂತ ವಿಚಿತ್ರ 10 ಜನ್ಮ ನೀಡುವಿಕೆಯ ಪ್ರಕರಣಗಳ ಪಟ್ಟಿ ಇಲ್ಲಿದೆ ನೋಡಿ :

೧. 61 ವರ್ಷದ ಹೆಂಗಸು ತನ್ನ ಮೊಮ್ಮಗುವಿಗೆ ಜನ್ಮ ನೀಡಿದಳು

ಸಾರಾ ಕಾನ್ನೆಲ್ ಎಂಬ ಚಿಕಾಗೊ ಮೂಲದ ಹೆಂಗಸು ತನ್ನು ಇನ್ನೂ ಅಂಡೋತ್ಪತ್ತಿ ಮಾಡಲು ಸಾಧ್ಯವಿಲ್ಲ ಎಂದು ತಿಳಿದ ಮೇಲೆ, ಮತ್ತು ಎರಡು ಬಾರಿ ಗರ್ಭಪಾತ ಹೊಂದಿದ ಮೇಲೆ, ಆಕೆ ಎಲ್ಲವನ್ನೂ ಕೈಚೆಲ್ಲಿದ್ದಳು. ಆದರೆ, ಮನಕಲಕುವ ಸನ್ನೆ ಆಗಿ ಆಕೆಯ ತಾಯಿ 61 ವರ್ಷದ ಕ್ರಿಸ್ಟಿನ್ ಕೇಸಿ ತನ್ನ ಮಗಳ ಮಗುವಿಗೆ ಸರೋಗೇಟ್ (ಬಾಡಿಗೆ) ತಾಯಿ ಆಗಲು ಮುಂದಾದಳು. ಹೀಗೆ ಕ್ರಿಸ್ಟಿನ್ ದೇಹದ ಮೇಲೆ ವೈದ್ಯರು ಎಲ್ಲಾ ಪರೀಕ್ಷೆಗಳನ್ನ ಮಾಡಿ, ಈಕೆ ಮಗುವನ್ನ ಹೊರಬಹುದು ಎಂದು ನಿರ್ಧರಿಸಿದರು. ಕೆಲವು ತಿಂಗಳುಗಳ ನಂತರ ಆರೋಗ್ಯಕರ ಮಗು ಜನಿಸಿತು!

೨. ಈಕೆ ಹೆತ್ತಿದ್ದು 6.2 ಕಿಲೋಗ್ರಾಮ್ ಮಗು!!

ಯಾವುದೇ ಔಷಧಿಗಳನ್ನ ಸೇವಿಸದೆ, ಆರು ಘಂಟೆಗಳ ಕಾಲ ತಳ್ಳಿದ ಮೇಲೆ, ಅಮೇರಿಕಾ ದೇಶದ ಅಯೋವಾ ಪ್ರದೇಶದ ಕೆಂಡಲ್ ಸ್ಟೀವರ್ಡ್ಸನ್ ಎಂಬ ತಾಯಿ ಹೊರ ತಳ್ಳಿದ್ದು ಬರೋಬ್ಬರಿ ಆರು ಕಾಲು ಕೆ.ಜಿ ತೂಕದ ಮಗು! ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ಈಕೆ ಜನಿಸಿದಾಗ ಈಕೆಯ ತೂಕವೇನು ಕಮ್ಮಿ ಇರಲಿಲ್ಲ, ಈಕೆಯ ತೂಕವು ಐದೂವರೆ ಕಿಲೋಗ್ರಾಮ್ ಇತ್ತು!

೩. ಅರ್ಧ 2011ರಲ್ಲಿ, ಇನ್ನೊಂದು ಅರ್ಧ 2012ರಲ್ಲಿ ಜನಿಸಿದ 3 ಅವಳಿ-ಜವಳಿ ಮಕ್ಕಳು

ನಾವು ಅವಳಿ ಜವಳಿ ಮಕ್ಕಳು 24 ಘಂಟೆಗಳ ವ್ಯತ್ಯಾಸದಲ್ಲಿ ಜನಿಸಿರುವುದನ್ನ ಕೇಳಿರುತ್ತೀವಿ, ಆದರೆ ಬೇರೇ ಬೇರೇ ವರ್ಷಗಳಲ್ಲಿ ಜನಿಸಿರುವುದು?! ನಂಬಲಸಾಧ್ಯ ಅಲ್ಲವೇ? ಮಿನ್ನೇಸೋಟದ ತಾಯಿ ಸ್ಟೆಫಾನಿ ಪೀಟರ್ಸನ್ ತನ್ನ ನಿಗದಿತ ಹೆರಿಗೆ ದಿನ ಇನ್ನೂ ಬಹಳ ದೂರವಿದ್ದಾಗಲೇ ಹೆರಿಗೆ ನೋವಿಗೆ ಒಳಗಾದಳು. 34ನೇ ವಾರದಲ್ಲಿಯೇ ಪೀಟರ್ಸನ್, ಹೊಸ ವರ್ಷದ ಹಿಂದಿನ ದಿನದಂದು ಗಂಡು ಮಗುವಿಗೆ ಜನ್ಮ ನೀಡಿದಳು. ಮಾರನೆ ದಿನ, ಅಂದರೆ ಹೊಸ ವರ್ಷದ ಮೊದಲ ದಿನದಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇದೇ ರೀತಿ ನ್ಯೂಯಾರ್ಕ್ ನಿವಾಸಿ ರೋಸ್ಪುತಿನಿ ಮತ್ತು ಫ್ಲೋರಿಡಾದ ಜೋಸ್ಲಿನ್ ಕೂಡ ಬೇರೇ ಬೇರೇ ವರ್ಷಗಳಲ್ಲಿ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದರು.

೪. ಗುಂಡೇಟು ತಿಂದು, ಬೆಂಕಿ ಹಚ್ಚಲ್ಪಟ್ಟರು ಜನ್ಮ ನೀಡಿದ ಮಹಾತಾಯಿ

ಡೆಟ್ರಾಯಿಟ್ ಅಲ್ಲಿ ಒಮ್ಮೆ ಎಲ್ಲೋ ಹೊರಗಡೆ ಇಂದ ಒಂಬತ್ತು ತಿಂಗಳ ಗರ್ಭಿಣಿ ತನ್ನ ಪತಿಯೊಂದಿಗೆ ಮನೆಗೆ ಮರಳಿದಾಗ, ಆಕೆಯನ್ನ ಯಾರೋ ಕಟ್ಟಿ ಹಾಕಿ ನಂತರ ಅಪಹರಿಸಿದರು. ಆಕೆಯನ್ನ ಅಪಹರಿಸಿದವ ಡೆಟ್ರಾಯಿಟ್ ಸುತ್ತಮುತ್ತಲಿನ ಹೈವೇ ಮೇಲೆ ಸುತ್ತಿಸಿ, ನಂತರ ಗುಂಡಿಕ್ಕಿ, ಬೆಂಕಿ ಹಚ್ಚಿದ್ದಾನೆ. ತನ್ನನ್ನ ಹಾಗು ತನ್ನ ಮಗುವಿನ ಪ್ರಾಣ ಉಳಿಸುವುದಕ್ಕೆ ಪಾರಾಗಲು, ಈಕೆ ಸತ್ತಂತೆ ನಟಿಸಿ, ಮಣ್ಣಿನ ದಿಬ್ಬದಿಂದ ಕೆಳಗೆ ಉರುಳುತ್ತಾ ಹೋಗಿದ್ದಾಳೆ. ಹೀಗೆ ಬೆಂಕಿಯನ್ನೂ ನಂದಿಸಿದ್ದಾಳೆ.  12 ದಿನಗಳ ನಂತರ ಈಕೆ ಹೆರಿಗೆ ನೋವಿಗೆ ಒಳಗಾಗಿ ಒಂದು ಮಗುವಿಗೆ ಜನ್ಮ ನೀಡಿದಳು.

೫. “ನಾನು ಗರ್ಭಿಣಿ ಎಂದೇ ನನಗೆ ಗೊತ್ತಿರಲಿಲ್ಲ”

ಜುಲೈ ತಿಂಗಳ ನಾಲ್ಕನೇ ತಾರೀಖಿನಂದು ಜೆನ್ನಿಫರ್ ವೆಸ್ಟ್ ತೀವ್ರ ಹೊಟ್ಟೆ ನೋವು ಮತ್ತು ಬೆನ್ನು ನೋವಿನೊಂದಿಗೆ ಎಚ್ಚರಗೊಳ್ಳುತ್ತಾಳೆ. ನೋವು ತೀವ್ರವಾಗುತ್ತಿದ್ದಂತೆ ಗಾಬರಿಗೊಂಡ ಆಕೆಯ ಪತಿ, ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದನು. ಆಗ ವಿಶ್ರಾಂತಿ ರೂಮಿನಲ್ಲಿ ಕುಳಿತ ಜೆನ್ನಿಫರ್ ನ ಪತಿಗೆ ತಿಳಿದದ್ದು, ಆತನು ಅಪ್ಪ ಆಗುತ್ತಿದ್ದಾನೆಂದು. ಆಗಲೇ ತಿಳಿದಿದ್ದು ಜೆನಿಫ್ಫೆರ್ ಇಷ್ಟು ದಿನ ಗರ್ಭ ಧರಿಸಿದ್ದಳೆಂದು. ವಿಚಿತ್ರ ಎಂದರೆ ಜೆನಿಫ್ಫೆರ್ ಗೆ ಅಲ್ಲಿಯವರೆಗೂ ತಿಂಗಳಿಂದ ತಿಂಗಳಿಗೆ ಸರಿಯಾಗಿಯೇ ಋತುಸ್ರಾವ ಆಗುತಿತ್ತು. ಕೆಲವು ಘಂಟೆಗಳ ಹೆರಿಗೆ ನೋವಿನ ನಂತರ ಜೆನಿಫ್ಫೆರ್ ಒಂದು ಮುದ್ದಾದ, ಆರೋಗ್ಯಕರವಾದ ಗಂಡು ಮಗುವಿಗೆ ಜನ್ಮ ನೀಡಿದಳು.

೬. ಈಕೆಯ ಹೆರಿಗೆಯು ತೆಗೆದುಕೊಂಡಿದ್ದು 75 ದಿನಗಳು!

ಪೋಲೆಂಡ್ ದೇಶದ ಜೋನ್ನಾ ಗೆ ತ್ರಿವಳಿ ಮಕ್ಕಳೊಂದಿಗೆ ಇನ್ನೂ ನಿಗದಿತ ದಿನ ದೂರ ಇರುವಂತೆಯೇ ಹೆರಿಗೆ ನೋವು ಕಾಣಿಸಿಕೊಳ್ಳಳು ಶುರು ಆಯಿತು. ದುರದೃಷ್ಟವಶಾತ್, ಒಂದು ಮಗು ತುಂಬಾ ಬೇಗನೆ ಜನಿಸಿ ನಂತರ ಪ್ರಾಣ ಬಿಟ್ಟಿತು. ಆದರೆ ಹೊಟ್ಟೆ ಅಲ್ಲಿರುವ ಇನ್ನೆರೆಡು ಮಕ್ಕಳನ್ನ ಉಳಿಸಲಿಕ್ಕೆ ಜೋನ್ನಾಗೆ ವೈದ್ಯರು ತನ್ನ ಕಾಲುಗಳನ್ನ ಮೇಲೆಯೇ ಎತ್ತಿಟ್ಟುಕೊಳ್ಳಲು ಹೇಳಿದರು. ತನ್ನ ಮಗುವನ್ನ ಹೇಗಾದರೂ ಉಳಿಸಿಕೊಳ್ಳಲು ಆಕೆಯು ತನ್ನ ಮಕ್ಕಳನ್ನ ಗರ್ಭದಲ್ಲೇ ಉಳಿಸಿಕೊಳ್ಳಲು ಆಕೆಯು ಎರಡೂವರೆ ತಿಂಗಳುಗಳ ಕಾಲ ಅಲ್ಲಾಡದೇ ಇರಬೇಕು. ತುಂಬಾ ತುಂಬಾ ದಿನಗಳವರೆಗೆ ಕಾದ ನಂತರ, ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿತು, ಈಕೆ ಯುದ್ಧವನ್ನೇ ಗೆದ್ದಳು!

೭. 23 ವರ್ಷದ ಜಗತ್ತಿನ ಅತ್ಯಂತ ಕಿರಿಯ ಅಜ್ಜಿ!

23 ವರ್ಷದ ಹುಡುಗಿ ಎಂದರೆ ನಮ್ಮ ತಲೆಯಲ್ಲಿ ಏನೇನೋ ಹುಚ್ಚಾಟಗಳು ನೆನಪಾಗುತ್ತವೆ, ಆದರೆ “ಅಜ್ಜಿ”?! ಖಂಡಿತಾ ಇಲ್ಲ! ರೊಮೇನಿಯಾ ದೇಶದ ರಿಫ್ಕಾ ಸ್ತನೆಸ್ಕು ಈಗ ಅಜ್ಜಿ ಆಗಿದ್ದಾಳೆ. ಅದು ಹೇಗೆಂದರೆ ಆಕೆಯ ಮಗಳಾದ 11 ವರ್ಷದ ಮಾರಿಯಾ ಈಗ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ರಿಫ್ಕಾ ಕೂಡ ಇದೇ ರೀತಿ 12 ವರ್ಷ ವಯಸ್ಸಿನವಳಾಗಿದ್ದಾಗ ತಾಯಿ ಆಗಿದ್ದಳು, ಆದರೆ ಮಗಳಿಗೆ ಈ ಪಾಡು ಎದುರಾಗಬಾರದು ಎಂದು ಎಷ್ಟೇ ಪ್ರಯತ್ನಿಸಿದರೂ, ಕುಟುಂಬದ ದಬ್ಬಾಳಿಕೆ ಇಂದ ಇವಳ ಮಗಳನ್ನ ಉಳಿಸಲು ಆಗಲಿಲ್ಲ. ರಿಫ್ಕಾ ಜಗತ್ತಿನ ಅತ್ಯಂತ ಕಿರಿಯ ಅಜ್ಜಿ ಎಂದು ಹೇಳಲಾಗಿದೆ.

Leave a Reply

%d bloggers like this: