ನಿಮ್ಮ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅವರ ಎತ್ತರ-ತೂಕದ ಚಾರ್ಟ್

ಮನುಷ್ಯರ ಎತ್ತರ ಮತ್ತು ತೂಕ ಹೆಚ್ಚಾಗಿ ಅವರ ವಯಸ್ಸಿನ ಮೇಲೆ ಅವಲಂಭಿತವಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ಬೆಳೆಯುತ್ತಿರುವ ಮಕ್ಕಳಲ್ಲಿ. ನಿಮ್ಮ ವ್ಯಯಕ್ತಿಕ ಹವ್ಯಾಸಕ್ಕೆ ತಕ್ಕಂತೆ ನಿಮ್ಮ ತೂಕವು ಆಗಾಗ್ಗೆ ಬದಲಾಗುತ್ತಿರುತ್ತದೆ, ಆದರೆ ನಿಮಗೆ ೧೮-೧೯ ವರ್ಷ ತುಂಬುತ್ತಿದ್ದಂತೆ ನಿಮ್ಮ ಎತ್ತರ ತನ್ನ ಬೆಳವಣಿಗೆಯ ಏರಿಳಿತಗಳನ್ನು ನಿಲ್ಲಿಸುತ್ತದೆ, ಅಂದರೆ ನಿಮಗೆ ೧೮-೧೯ವರ್ಷ ತುಂಬಿದ ನಂತರ ನೀವು ಎತ್ತರಕ್ಕೆ ಬೆಳೆಯುವುದಿಲ್ಲ, ಮತ್ತು ನಿಮ್ಮ ಎತ್ತರ ಅಷ್ಟಕ್ಕೇ ಸೀಮಿತವಾಗುತ್ತದೆ. ಆದ್ದರಿಂದ ನಿಮ್ಮ ಮಗುವಿನ ಬೆಳವಣಿಗೆಯ ಸಾಮಾನ್ಯ ಮಾಹಿತಿ ತಿಳಿದಿರಲೆಂದು ನಿಮಗಾಗಿ ನಾವು ಈ ಚಾರ್ಟ್ ಅನ್ನು ತಂದಿದ್ದೇವೆ. ಇದು ನಿಮ್ಮ ಮಕ್ಕಳ ಎತ್ತರ ಮತ್ತು ತೂಕದ ಸಾಮಾನ್ಯ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಈ ಪಟ್ಟಿಯು ಆದರ್ಶ ಎತ್ತರ ಮತ್ತು ತೂಕದ ಅಂದಾಜು ವರ್ಗಿಕರಣವನ್ನು ಒದಗಿಸುತ್ತದೆಯಾದರು, ಕೆಲವು ಸಂದರ್ಭಗಳಲ್ಲಿ ಮೊದಲು ಮಗುವು ಈ ಪಟ್ಟಿಯಂತೆ ಆದರ್ಶ ಎತ್ತರ-ತೂಕ ಪಡೆಯದಿದ್ದರೂ, ದಿಡೀರನೆ ತನ್ನ ಎತ್ತರ ಮತ್ತು ತೂಕವನ್ನು ಪಡೆದುಕೊಳ್ಳಬಹುದು. ಮಗುವಿನ ಎತ್ತರ ಏರಿಕೆಯಾಗುತ್ತಿದ್ದಂತೆ, ಅವರ ತೂಕ ಸ್ವಲ್ಪ ಕಡಿಮೆಯಾಗುವುದು ಸಹಜ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೆಲ ಸಮಯದ ನಂತರ ಮಗುವು ತನ್ನ ತೂಕವನ್ನು ಪಡೆದುಕೊಳ್ಳುತ್ತದೆ. ಮಗುವಿಗೆ ಅಗತ್ಯವಿರುವ ಆಹಾರಗಳನ್ನು ನೀಡಲು ಮರೆಯದಿರಿ. ನಿಮ್ಮ ಮಗುವು ಉತ್ತಮವಾಗಿ ಬೆಳೆಯುತ್ತಿದೆ ಎಂದು ಭಾವಿಸುತ್ತೇವೆ.

ಅಲ್ಲದೆ, ನೀವು ಚಾರ್ಟಿನಲ್ಲಿ ಕಾಣಬಹುದಾದಂತೆ, ಹುಡುಗರು ಮತ್ತು ಹುಡುಗಿಯರು ವಿಭಿನ್ನ ಗುಣಮಟ್ಟವನ್ನು ಹೊಂದಿದ್ದಾರೆ. ಎತ್ತರ ಮತ್ತು ತೂಕದ ಮೇಲೆ ಪರಿಣಾಮ ಬೀರುವ ವಂಶವಾಹಿಗಳು(ಜೀನ್ಸ್) ಮತ್ತು ಹಾರ್ಮೋನುಗಳು ಇದಕ್ಕೆ ಕಾರಣ. ಆದರೆ ಈ ಪಟ್ಟಿಯನ್ನೇ ಹೋಲುವ ಬೆಳವಣಿಗೆಯನ್ನು ನೀವು ನಿರೀಕ್ಷಿಸಬೇಕಾಗಿಲ್ಲ, ಕೆಲವೊಮ್ಮೆ ಮಕ್ಕಳ ಅವರ ವೇಗದಲ್ಲಿ ಬೆಳೆಯುತ್ತಾರೆ, ಅದು ಹುಡುಗನಿಗಿಂತ ಹಡುಗಿಯೇ ಎತ್ತರವಾಗಿ ಬೆಳೆದಿರಬಹುದು. ಮತ್ತು ಹೆಣ್ಣು ಮಗು ಹುಡುಗನಿಗಿಂತ ಕಡಿಮೆ ಎತ್ತರ ಬೆಳೆಯುತ್ತಾಳೆ ಎಂದು ನೀವು ಅಂದುಕೊಳ್ಳುವಂತಿಲ್ಲ. 

Leave a Reply

%d bloggers like this: